ಕೊಟ್ಟಾಯಂ( ಕೇರಳ):ಕೆಲವೇ ದಿನಗಳಲ್ಲಿ ಮಕರ ಸಂಕ್ರಮಣ ಬರಲಿದೆ. ಅನೇಕ ಅಯ್ಯಪ್ಪ ಸ್ವಾಮಿ ಭಕ್ತಾದಿಗಳು ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ. ಹಾಗಾಗಿ ಈ ಶಬರಿಮಲೆ ಯಾತ್ರೆ ಆರಂಭವಾಗುವ ಕೆಲವು ದಿನಗಳ ಮೊದಲೇ ಎರುಮೇಲಿಯ ಮಟ್ಟನೂರ್ಕ್ಕರ ಲಕ್ಷ್ಮವೀಡು ಕಾಲೋನಿಯ ಜನರು ಶಬರಿಮಲೆಗೆ ಸಂಬಂಧಿಸಿದ ವಸ್ತುಗಳ ತಯಾರಿಕೆಯ ಚಟುವಟಿಕೆಯನ್ನು ಬೃಹತ್ ಮಟ್ಟದಲ್ಲಿ ಪ್ರಾರಂಭಿಸಿದ್ದಾರೆ. ಇವರು ಸಿದ್ಧಪಡಿಸುವ ಕೆಂಪು ಬಣ್ಣದ ಕೋಳಿ ಗರಿಗಳು, ಕಪ್ಪು ಬಣ್ಣದ ಎಲೆಗಳು ಮತ್ತು ವಿಶಿಷ್ಟವಾಗಿ ಕೆತ್ತಿದ ಮರದ ತುಂಡುಗಳು ಇಲ್ಲಿನ ಬೀದಿಗಳಲ್ಲಿ ಮಾರಾಟವಾಗುತ್ತವೆ.
ಶಬರಿಮಲೆಗೆ ಆಗಮಿಸುವ ಭಕ್ತಾದಿಗಳು ಅಲ್ಲಿಗೆ ಸಂಬಂಧಿಸಿದ ಬಾಣಗಳು, ಕತ್ತಿಗಳು, ಗದೆಗಳು ಮತ್ತು ಕಪ್ಪು ಬಳ್ಳಿಯಂತಹ ವಸ್ತುಗಳನ್ನು ಹೆಚ್ಚಾಗಿ ಖರೀದಿಸುತ್ತಾರೆ. 90 ಶೇಕಡಾಕ್ಕಿಂತ ಹೆಚ್ಚು ಈ ವಸ್ತುಗಳು ಇದೇ ಮುಸ್ಲಿಂ ಕಾಲೋನಿಯಿಂದ ಬರುತ್ತವೆ.
ವಿಶೇಷವಾಗಿ ಈ ಕಾಲೋನಿಯಲ್ಲಿ ವಾಸಿಸುವ 78 ವರ್ಷದ ಕೋಯಾ ತೆಂಗಮುಟ್ಟಿಲ್ ಅವರು ಈ ವ್ಯಾಪಾರದಲ್ಲಿ ಅತ್ಯಂತ ಹಿರಿಯ ಕುಶಲಕರ್ಮಿಯಾಗಿದ್ದಾರೆ. ಸುಮಾರು ಐದು ದಶಕಗಳಿಂದ ಶಬರಿಮಲೆಗೆ ಸಂಬಂಧಿಸಿದ ವಸ್ತುಗಳನ್ನು ತಯಾರು ಮಾಡುತ್ತಿದ್ದಾರೆ. ನಾವು ಸಿದ್ಧಪಡಿಸಿದ ವಸ್ತುಗಳು ಆಗಿಂದಾಗೇ ಮಾರಾಟವಾಗುತ್ತವೆ ಅನ್ನುತ್ತಾರೆ ಇಲ್ಲಿನ ಹಿರಿಯ ಕುಶಲಕರ್ಮಿಗಳು.