ಕರ್ನಾಟಕ

karnataka

ETV Bharat / bharat

ಮುಚ್ಚಿದ ಶಬರಿಮಲೆ ದೇಗುಲ : ಡಿಸೆಂಬರ್ 31ರ ನಂತರ ಮತ್ತೆ ಭಕ್ತರಿಗೆ ದರ್ಶನ ಅವಕಾಶ - ಶಬರಿಮಲೆ ದೇಗುಲ ಬಂದ್

ಡಿಸೆಂಬರ್ 31ರಿಂದ ಮಕರವಿಳಕ್ಕು ಪೂಜಾ ವೇಳೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಜನವರಿ 14ರಂದು ಮಕರವಿಳಕ್ಕು ಇರುತ್ತದೆ..

ಮುಚ್ಚಿದ ಶಬರಿಮಲೆ ದೇಗುಲ
ಮುಚ್ಚಿದ ಶಬರಿಮಲೆ ದೇಗುಲ

By

Published : Dec 27, 2021, 3:56 PM IST

Updated : Dec 27, 2021, 4:31 PM IST

ಪತ್ತನಂತಿಟ್ಟ: ಮಂಡಲಂ ಋತುವಿನ ಅಂತ್ಯವನ್ನು ಸೂಚಿಸುವ ಮೂಲಕ ಶಬರಿಮಲೆ ದೇಗುಲವನ್ನು ಮುಚ್ಚಲಾಗಿದೆ. ಮಕರ ವಿಳಕ್ಕು ಪೂಜೆಗಾಗಿ ಡಿಸೆಂಬರ್ 30ರಂದು ಸಂಜೆ ಮತ್ತೆ ತೆರೆಯಲಾಗುತ್ತದೆ. ಡಿಸೆಂಬರ್ 31ರಿಂದ ಭಕ್ತರಿಗೆ ದರ್ಶನ ಮಾಡಲು ಅವಕಾಶ ನೀಡಲಾಗುವುದು ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ಡಿಸೆಂಬರ್ 31ರ ನಂತರ ಮತ್ತೆ ಭಕ್ತರಿಗೆ ಅಯ್ಯಪ್ಪ ಸ್ವಾಮಿಯ ದರ್ಶನ ಅವಕಾಶ..

ಪ್ರಧಾನ ಅರ್ಚಕ ಎನ್ ಪರಮೇಶ್ವರನ್ ನಂಬೂದಿರಿ ಅವರು 41 ದಿನಗಳ ಮಂಡಲ ಪೂಜೆಯ ಬಳಿಕ ಅಯ್ಯಪ್ಪ ದೇವರಿಗೆ ಭಕ್ತಿಗೀತೆಯಾದ 'ಹರಿವರಾಸನಂ' ಅನ್ನು ಹೇಳಿದ ನಂತರ ಗರ್ಭಗುಡಿಯನ್ನು ಮುಚ್ಚಿದರು. ಈ ವರ್ಷ ಕೋವಿಡ್ ಸಂಬಂಧಿತ ನಿರ್ಬಂಧಗಳಲ್ಲಿನ ಸಡಿಲಿಕೆಯಿಂದಾಗಿ ಶಬರಿಮಲೆಯಲ್ಲಿ ಭಕ್ತರ ಹರಿವು ತೀವ್ರವಾಗಿ ಹೆಚ್ಚಾಗಿತ್ತು.

ಇದನ್ನೂ ಓದಿ: ಕುಸಿದ ನಾಲ್ಕು ಅಂತಸ್ತಿನ ಕಟ್ಟಡ: ನಿರಾಶ್ರಿತ ಕುಟುಂಬಕ್ಕೆ 1 ಲಕ್ಷ ಪರಿಹಾರ ಘೋಷಿಸಿದ ಸಿಎಂ

ಡಿಸೆಂಬರ್ 31ರಿಂದ ಮಕರವಿಳಕ್ಕು ಪೂಜಾ ವೇಳೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಜನವರಿ 14ರಂದು ಮಕರವಿಳಕ್ಕು ಇರುತ್ತದೆ.

Last Updated : Dec 27, 2021, 4:31 PM IST

ABOUT THE AUTHOR

...view details