ಕರ್ನಾಟಕ

karnataka

ETV Bharat / bharat

ಯುಪಿಎ ಮುನ್ನಡೆಸುವವರು ಯಾರು..? ಬಿಜೆಪಿ ವಿರುದ್ಧದ ಹೋರಾಟ ಕುರಿತು ಸಾಮ್ನಾ ಸಂಪಾದಕೀಯ

ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದಲ್ಲಿ ಹುಲಿಯಂತೆ ಹೋರಾಡಿದರು ಮತ್ತು ಅವರ ಸ್ವಂತ ನೆಲದಲ್ಲಿ ಯಾವುದೇ ಪಕ್ಷದಿಂದ ಸೋಲು ಅನುಭವಿಸಲು ಅವರು ಬಿಡಲಿಲ್ಲ ಎನ್ನುವ ಮೂಲಕ ಅವರ ರಾಜಕೀಯ ನಡೆಯ ಮೇಲೆ ಲೇಖನವು ಮತ್ತಷ್ಟು ಬೆಳಕು ಚೆಲ್ಲುತ್ತದೆ.

By

Published : Dec 4, 2021, 6:05 PM IST

saamana-editorial
ಸಾಮ್ನಾ ಸಂಪಾದಕೀಯ

ಮುಂಬೈ:ಶಿವಸೇನೆ ಮುಖವಾಣಿ ಸಾಮ್ನಾ ಬಿಜೆಪಿ ಸರ್ಕಾರವನ್ನ ತನ್ನ ಸಂಪಾದಕೀಯದಲ್ಲಿ ಕಟುವಾಗಿ ಟೀಕಿಸುತ್ತಾ ಬಂದಿದೆ. ಇದೀಗ ತನ್ನ ವಿಸ್ತೃತ ಸಂದಾದಕೀಯದಲ್ಲಿ ವಿರೋಧ ಪಕ್ಷಗಳ ಒಗ್ಗೂಡುವಿಕೆಯ ಕುರಿತು ಹಾಗೂ ವಿಪಕ್ಷಗಳ ಮುನ್ನಡೆಸುವ ನಾಯಕತ್ವ ಕುರಿತಂತೆ ಗಮನಹರಿಸಿದೆ.

ಮಮತಾ ಬ್ಯಾನರ್ಜಿ ಇತ್ತೀಚಿಗೆ ಮುಂಬೈ ಭೇಟಿ ನೀಡಿದ್ದ ವೇಳೆ ಬಿಜೆಪಿ ಸರ್ಕಾರದ ವಿರುದ್ಧ ಪ್ರಬಲ ವಿರೋಧ ಪಕ್ಷ ರಚಿಸುವ ಕುರಿತು ನೀಡಿದ್ದ ಹೇಳಿಕೆ ಬಳಿಕ ಸಾಮ್ನಾವು ತನ್ನ ಸಂಪಾದಕೀಯದಲ್ಲಿ ನಾಯಕತ್ವ ಕುರಿತ ಅಭಿಪ್ರಾಯ ಹಂಚಿಕೊಂಡಿದೆ.

ಪ್ರಸ್ತುತ ಸಂಪಾದಕೀಯವು ಎಲ್ಲ ವಿರೋಧ ಪಕ್ಷಗಳು ತಮ್ಮ ವೈಯಕ್ತಿಕ ಧೋರಣೆಗಳನ್ನು ಬದಿಗಿಟ್ಟು ಬಿಜೆಪಿ ವಿರುದ್ಧ ಪ್ರಬಲವಾದ ಒಕ್ಕೂಟವನ್ನು ರಚಿಸುವತ್ತ ಗಮನಹರಿಸಬೇಕಾಗಿದೆ, ಇಲ್ಲದಿದ್ದರೆ ನಂತರದ ಪತನದ ಬಗ್ಗೆ ಯೋಚಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಸೂಚಿಸುತ್ತಿದೆ.

ಸೂಕ್ತ ನಾಯಕನನ್ನು ಆಯ್ಕೆ ಮಾಡುವುದು ಮತ್ತು ನಾಯಕತ್ವದ ಕಾರ್ಯಾವಳಿಗಳ ಮುಂಚಿತವಾಗಿ ನಿರೀಕ್ಷಿಸುವುದು ಮುಖ್ಯ ಎಂದು ಈ ಲೇಖನ ಒತ್ತಿ ಹೇಳುತ್ತಿದೆ. ಜೊತೆಗೆ ವಿರೋಧ ಪಕ್ಷವನ್ನು ಯಾರು ಮುನ್ನಡೆಸಬೇಕು ಎಂಬುದರ ಕುರಿತು ಸಹಮತವಿದ್ದರೆ ಮಾತ್ರ ಈ ಕಾರ್ಯ ಯಶಸ್ವಿಯಾಗಲಿದೆ ಎಂದು ತಿಳಿಸಿದೆ.

ಮಮತಾ ಬ್ಯಾನರ್ಜಿ ರಾಜಕೀಯ ಹೊಗಳಿದ ಸಾಮ್ನಾ

ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದಲ್ಲಿ ಹುಲಿಯಂತೆ ಹೋರಾಡಿದರು ಮತ್ತು ಅವರ ಸ್ವಂತ ನೆಲದಲ್ಲಿ ಯಾವುದೇ ಪಕ್ಷದಿಂದ ಸೋಲು ಅನುಭವಿಸಲು ಅವರು ಬಿಡಲಿಲ್ಲ ಎನ್ನುವ ಮೂಲಕ ಅವರ ರಾಜಕೀಯ ನಡೆಯ ಮೇಲೆ ಲೇಖನವು ಮತ್ತಷ್ಟು ಬೆಳಕು ಚೆಲ್ಲುತ್ತದೆ.

ತನ್ನ ನೆಲದದಲ್ಲಿ ಆಡಳಿತ ನಡೆಸಲು ಮತ್ತು ಪ್ರವೇಶಿಸಲು ಪ್ರಯತ್ನಿಸಿದ ಎಲ್ಲರನ್ನು ಮತ್ತು ಯಾವುದೇ ಪ್ರತಿಸ್ಪರ್ಧಿಯನ್ನು ಬ್ಯಾನರ್ಜಿ ಕೌಶಲ್ಯದಿಂದ ಸೋಲಿಸಿದ್ದಾರೆ. ಮಮತಾ ಅವರ ರಾಜಕೀಯವು ಕಾಂಗ್ರೆಸ್ ಆಧಾರಿತವಾಗಿಲ್ಲ ಮತ್ತು ಕಾಂಗ್ರೆಸ್ ಅನ್ನು ರಾಷ್ಟ್ರೀಯ ರಾಜಕೀಯದಿಂದ ದೂರವಿಡುವ ಸಂಭಾವ್ಯ ಗುರಿಯನ್ನು ಹೊಂದಿರುವ ಅವರ ವೈಯಕ್ತಿಕ ವಿಧಾನವು ಪ್ರಸ್ತುತ ನಡೆಯುತ್ತಿರುವ 'ಫ್ಯಾಸಿಸ್ಟ್' ಆಡಳಿತದ ಪ್ರವೃತ್ತಿಗೆ ಪ್ರಚೋದನೆ ನೀಡುತ್ತದೆ ಎಂಬುದನ್ನು ಇದು ಮತ್ತಷ್ಟು ಎತ್ತಿ ತೋರಿಸುತ್ತದೆ.

ಯುಪಿಎ ಮುನ್ನಡೆಸುವವರು ಯಾರು.?

ಕಾಂಗ್ರೆಸ್‌ನ ದೌರ್ಬಲ್ಯದ ಬಗ್ಗೆಯೂ ಲೇಖನವು ಗಮನ ಸೆಳೆಯುತ್ತದೆ, ತಮ್ಮ ಯಶಸ್ಸಿಗೆ ಕಾರಣವಾಗಿರುವ ಹಾಗೂ ಕಾಂಗ್ರೆಸ್​​ಗೆ ಖುಣಿಯಾಗಿರಬೇಕಾಗಿದ್ದ ನಾಯಕರು ಪಕ್ಷವನ್ನು ದೂರುತ್ತಿದ್ದಾರೆ ಮತ್ತು ಪಕ್ಷವನ್ನು ಇನ್ನಷ್ಟು ಟೀಕೆಗೆ ಗುರಿ ಮಾಡುತ್ತಿದ್ದಾರೆ. ಲೋಕಸಭೆಯಲ್ಲಿ ಕಾಂಗ್ರೆಸ್ 100ರ ಗಡಿ ದಾಟದ ಹೊರತು ರಾಷ್ಟ್ರ ಮಟ್ಟದಲ್ಲಿ ಗೇಮ್​ ಚೇಂಜ್ ಆಗುವುದಿಲ್ಲ. ದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಎಲ್ಲಿದೆ..? ಮುಂಬೈಗೆ ಬಂದಿದ್ದ ಮಮತಾ ಬ್ಯಾನರ್ಜಿ ಕೇಳಿದ ಪ್ರಶ್ನೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಈ ಪ್ರಶ್ನೆಗೆ ಬೆಲೆಯಿಲ್ಲ ಎಂದು ಲೇಖನವು ಅಭಿಪ್ರಾಯಪಟ್ಟಿದೆ.

ಇಂದು ಯುಪಿಎ ಇಲ್ಲ. ಅದೇ ರೀತಿ ಎನ್‌ಡಿಎಯೂ ಇಲ್ಲ. ಮೋದಿ ಪಕ್ಷಕ್ಕೆ ಇಂದು ಎನ್‌ಡಿಎ ಅಗತ್ಯವಿಲ್ಲ. ಆದರೆ, ಪ್ರತಿಪಕ್ಷಗಳಿಗೆ ಯುಪಿಎ ಬೇಕು. ಯುಪಿಎಗೆ ಪರ್ಯಾಯವಾಗಿ ಮತ್ತೊಂದು ಒಕ್ಕೂಟವನ್ನು ರಚಿಸುವುದು ಬಿಜೆಪಿಯ ಕೈಗಳನ್ನು ಬಲಪಡಿಸಿದಂತೆ. ಯುಪಿಎಯನ್ನು ಯಾರು ಮುನ್ನಡೆಸುತ್ತಾರೆ ಎಂಬುದೇ ಪ್ರಶ್ನೆ ಎಂಬ ಪ್ರಶ್ನೆಯನ್ನ ಸಂಪಾದಕೀಯ ಮುಂದಿಟ್ಟಿದೆ.

ಇದನ್ನೂ ಓದಿ:ಪ್ರಧಾನಿ ಮೋದಿ ಇಂದು ಡೆಹ್ರಾಡೂನ್​ಗೆ ಭೇಟಿ, 18 ಸಾವಿರ ಕೋಟಿಯ ಯೋಜನೆಗಳಿಗೆ ಶಂಕು ಸ್ಥಾಪನೆ

ABOUT THE AUTHOR

...view details