ಕರ್ನಾಟಕ

karnataka

ETV Bharat / bharat

RSS ಅನ್ನು​ ತಾಲಿಬಾನ್​​ಗೆ ಹೋಲಿಸಿದ ಜಾವೇದ್ ಅಖ್ತರ್.. ಈ ಬಗ್ಗೆ ಸಾಮ್ನಾ ಹೇಳೋದೇನು? - ಸಾಮ್ನಾ

ಮಹಾರಾಷ್ಟ್ರದ ಆಡಳಿತಾರೂಢ ಪಕ್ಷ ಶಿವಸೇನೆ ತನ್ನ ಮುಖವಾಣಿ 'ಸಾಮ್ನಾ'ದಲ್ಲಿ ಜಾವೇದ್ ಅಖ್ತರ್ ಅವರ ಹೇಳಿಕೆಯನ್ನು ಖಂಡಿಸಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘವು ರಾಷ್ಟ್ರೀಯ ಸ್ವಾಭಿಮಾನಿ ಸಂಸ್ಥೆ. ಈ ಬಗ್ಗೆ ಬೇರೆ ಮಾತಿಲ್ಲ ಎಂದು ಶಿವಸೇನೆ ಆರ್​ಎಸ್​ಎಸ್​ ಪರ ಬ್ಯಾಟ್​ ಬೀಸಿದೆ.

saamana editorial on Shayar javed akhtar calling rss as taliban
RSS ಅನ್ನು​ ಅನ್ನು ತಾಲಿಬಾನ್​​ಗೆ ಹೋಲಿಸಿದ ಜಾವೇದ್ ಅಖ್ತರ್

By

Published : Sep 6, 2021, 12:02 PM IST

ಮುಂಬೈ (ಮಹಾರಾಷ್ಟ್ರ): ದೇಶದಲ್ಲಿ ಮತಾಂಧತೆ, ದೇಶವಿರೋಧಿ ವಿವಾದ ಭುಗಿಲೆದ್ದ ಪ್ರತಿ ಬಾರಿಯೂ ಜಾವೇದ್ ಅಖ್ತರ್ ಅವರು ಮತಾಂಧ ಜನರ ಮುಖವಾಡಗಳನ್ನು ಬಯಲು ಮಾಡುತ್ತಾರೆ. ಬಹಿರಂಗ ಹೇಳಿಕೆ ನೀಡುತ್ತಾರೆ. ಆದರೆ ಈಗ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್​ಎಸ್​ಎಸ್​) ಅನ್ನು ತಾಲಿಬಾನ್​​ಗೆ ಹೋಲಿಸಿದ್ದನ್ನು ನಾವು ಒಪ್ಪುವುದಿಲ್ಲ ಎಂದು ಶಿವಸೇನೆ ಹೇಳಿದೆ.

ಜಾವೇದ್ ಅಖ್ತರ್ ಹೇಳಿದ್ದೇನು?

ಇತ್ತೀಚೆಗೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಅಟ್ಟಹಾಸದ ಕುರಿತು ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ಕವಿ, ಚಿತ್ರ ಸಾಹಿತಿ, ಮಾಜಿ ಸಂಸದ ಜಾವೇದ್ ಅಖ್ತರ್ ಅವರು ಆರ್‌ಎಸ್‌ಎಸ್ ಮತ್ತು ಬಜರಂಗ ದಳವನ್ನು ತಾಲಿಬಾನ್​ಗೆ ಹೋಲಿಕೆ ಮಾಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ತಾಲಿಬಾನ್ ಕೃತ್ಯ ಖಂಡನೀಯ, ಏಕೆಂದರೆ ಅದು ಅನಾಗರಿಕವಾಗಿದೆ. ಆರ್‌ಎಸ್‌ಎಸ್ ಮತ್ತು ಬಜರಂಗದಳದಂತಹ ಸಂಘಟನೆಗಳನ್ನು ಬೆಂಬಲಿಸುವವರು ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಳಬೇಕು. ಇವರು ತಾಲಿಬಾನಿಗಳಿಗಿಂತ ಹೇಗೆ ಭಿನ್ನವಾಗಿರಲು ಸಾಧ್ಯ? ತಾಲಿಬಾನಿಗಳು ಇಸ್ಲಾಮಿಕ್ ರಾಜ್ಯವನ್ನು ಬಯಸಿದಂತೆ, ಹಿಂದೂ ರಾಷ್ಟ್ರವನ್ನು ಬಯಸುವವರೂ ಇದ್ದಾರೆ. ಅವರು ಮುಸ್ಲಿಂ, ಕ್ರಿಶ್ಚಿಯನ್, ಯಹೂದಿಗಳು ಅಥವಾ ಹಿಂದೂ ಯಾರೇ ಆಗಿರಲಿ, ಇಂತಹ ಜನರು ಒಂದೇ ಮನಸ್ಥಿತಿಯವರಾಗಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

'ಸಾಮ್ನಾ'ದಲ್ಲಿ ಶಿವಸೇನೆ ಖಂಡನೆ

ಮಹಾರಾಷ್ಟ್ರದ ಆಡಳಿತಾರೂಢ ಪಕ್ಷ ಶಿವಸೇನೆ ತನ್ನ ಮುಖವಾಣಿ 'ಸಾಮ್ನಾ'ದಲ್ಲಿ ಜಾವೇದ್ ಅಖ್ತರ್ ಅವರ ಹೇಳಿಕೆಯನ್ನು ಖಂಡಿಸಿದೆ. ಅಫ್ಘಾನಿಸ್ತಾನದ ತಾಲಿಬಾನಿ ಆಡಳಿತ ಎಂದರೆ ಸಮಾಜ ಮತ್ತು ಮನುಕುಲಕ್ಕೆ ದೊಡ್ಡ ಬೆದರಿಕೆಯಾಗಿದೆ. ಪಾಕಿಸ್ತಾನ, ಚೀನಾದಂತಹ ದೇಶಗಳು ತಾಲಿಬಾನಿ ಆಡಳಿತವನ್ನು ಬೆಂಬಲಿಸಿವೆ. ಏಕೆಂದರೆ ಈ ಎರಡು ದೇಶಗಳಲ್ಲಿ ಮಾನವ ಹಕ್ಕುಗಳು, ಪ್ರಜಾಪ್ರಭುತ್ವ, ವೈಯಕ್ತಿಕ ಸ್ವಾತಂತ್ರ್ಯಕ್ಕೆ ಬೆಲೆಯಿಲ್ಲ. ಆದರೆ ಭಾರತದ ಮನಸ್ಥಿತಿ ಹಾಗಿಲ್ಲ. ನಾವು ಎಲ್ಲ ರೀತಿಯಿಂದಲೂ ಸಹಿಷ್ಣುಗಳು. ಕೆಲವು ಜನರು ಪ್ರಜಾಪ್ರಭುತ್ವದ ನೆಪದಲ್ಲಿ ಸರ್ವಾಧಿಕಾರವನ್ನು ತರಲು ಪ್ರಯತ್ನಿಸುತ್ತಿರಬಹುದು. ಆದರೂ ಅವರು ತಮ್ಮ ಮಿತಿಗಳನ್ನು ಹೊಂದಿದ್ದಾರೆ. ಹಾಗಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ತಾಲಿಬಾನ್ ಜೊತೆ ಹೋಲಿಸುವುದು ಸರಿಯಲ್ಲ ಎಂದು ಶಿವಸೇನೆ ಬರೆದುಕೊಂಡಿದೆ.

ಇದನ್ನೂ ಓದಿ: RSS -Taliban​ ಮನಸ್ಥಿತಿ ಒಂದೇ.. ಕಿಡಿ ಹೊತ್ತಿಸಿದ ಅಖ್ತರ್,​ ಕ್ಷಮೆಯಾಚನೆಗೆ ಬಿಜೆಪಿ ಪಟ್ಟು

ಆರ್​ಎಸ್​ಎಸ್​ ತಾಲಿಬಾನಿ ಸಿದ್ಧಾಂತವನ್ನು ಹೊಂದಿದ್ದರೆ, ಈ ದೇಶದಲ್ಲಿ ತ್ರಿವಳಿ ತಲಾಖ್ ವಿರುದ್ಧ ಕಾನೂನು ಇರುತ್ತಿರಲಿಲ್ಲ ಮತ್ತು ಲಕ್ಷಾಂತರ ಮುಸ್ಲಿಂ ಮಹಿಳೆಯರು ಸ್ವಾತಂತ್ರ್ಯದ ಕಿರಣವನ್ನು ನೋಡುತ್ತಿರಲಿಲ್ಲ. ಇಂದು ಜಗತ್ತಿನ ಪ್ರತಿಯೊಂದು ರಾಷ್ಟ್ರವೂ ಧರ್ಮದ ತಳಹದಿಯ ಮೇಲೆ ನಿಂತಿದೆ. ಚೀನಾ, ಶ್ರೀಲಂಕಾದಂತಹ ದೇಶಗಳ ಅಧಿಕೃತ ಧರ್ಮ ಬೌದ್ಧ ಧರ್ಮ, ಅಮೆರಿಕ-ಯುರೋಪಿಯನ್ ದೇಶಗಳು ಕ್ರಿಶ್ಚಿಯನ್ ಮತ್ತು ಕೆಲ ರಾಷ್ಟ್ರಗಳು 'ಇಸ್ಲಾಮಿಕ್ ರಿಪಬ್ಲಿಕ್' ಎಂದು ಹೆಮ್ಮೆಪಡುತ್ತವೆ. ಆದರೆ ವಿಶ್ವ ವೇದಿಕೆಯಲ್ಲಿ ಹಿಂದೂ ರಾಷ್ಟ್ರವಿದೆಯೇ? ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದರೂ, ಈ ರಾಷ್ಟ್ರವು ಜಾತ್ಯತೀತತೆಯನ್ನು ಎತ್ತಿ ಹಿಡಿಯುತ್ತದೆ. ರಾಷ್ಟ್ರೀಯ ಸ್ವಯಂಸೇವಕ ಸಂಘವು ರಾಷ್ಟ್ರೀಯ ಸ್ವಾಭಿಮಾನಿ ಸಂಸ್ಥೆ. ಈ ಬಗ್ಗೆ ಬೇರೆ ಮಾತಿಲ್ಲ ಎಂದು ಶಿವಸೇನೆ ಆರ್​ಎಸ್​ಎಸ್​ ಪರ ಬ್ಯಾಟ್​ ಬೀಸಿದೆ.

ABOUT THE AUTHOR

...view details