ಕರ್ನಾಟಕ

karnataka

ETV Bharat / bharat

ರಷ್ಯಾ ಇತರ ಭಯೋತ್ಪಾದಕರಿಗಿಂತ ಭಿನ್ನವಾಗಿಲ್ಲ : ಝೆಲೆನ್ಸ್ಕಿ - Ukrainian President Volodymyr Zelensky addressed the United Nations Security Council

ಬುಚಾದಲ್ಲಿನ ರಷ್ಯಾದ ಪಡೆಗಳನ್ನು ಉಲ್ಲೇಖಿಸಿ ಮಾತನಾಡಿ, ರಷ್ಯಾವು ದಾಯೆಶ್‌ನಂತಹ ಇತರ ಭಯೋತ್ಪಾದಕರಿಂದ ಭಿನ್ನವಾಗಿಲ್ಲ. ಉಕ್ರೇನ್‌ನ ಸಂಪೂರ್ಣ ಸತ್ಯವನ್ನು ಜಗತ್ತು ಇನ್ನೂ ಅರಿಯಬೇಕಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.

ರಷ್ಯಾ ಇತರ ಭಯೋತ್ಪಾದಕರಿಂದ ಭಿನ್ನವಾಗಿಲ್ಲ
ರಷ್ಯಾ ಇತರ ಭಯೋತ್ಪಾದಕರಿಂದ ಭಿನ್ನವಾಗಿಲ್ಲ

By

Published : Apr 5, 2022, 9:45 PM IST

ಹೈದರಾಬಾದ್​: ರಷ್ಯಾ ತನ್ನ ದೇಶದ ಮೇಲೆ ಆಕ್ರಮಣ ಮಾಡಿದ ನಂತರ ಮೊದಲ ಬಾರಿಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಂಗಳವಾರ ಸಂಜೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಎರಡನೆಯ ಮಹಾಯುದ್ಧದ ನಂತರದ ಅತ್ಯಂತ ಭೀಕರ ಯುದ್ಧಾಪರಾಧಗಳು ಉಕ್ರೇನ್‌ನಲ್ಲಿ ನಡೆಯುತ್ತಿವೆ ಎಂದು ಹೇಳಿದ್ದಾರೆ.

ಬುಚಾದಲ್ಲಿನ ರಷ್ಯಾದ ಪಡೆಗಳನ್ನು ಉಲ್ಲೇಖಿಸಿ ಮಾತನಾಡಿದ ಅವರು, ರಷ್ಯಾವು ದಾಯೆಶ್‌ನಂತಹ ಇತರ ಭಯೋತ್ಪಾದಕರಿಂದ ಭಿನ್ನವಾಗಿಲ್ಲ. ಉಕ್ರೇನ್‌ನ ಸಂಪೂರ್ಣ ಸತ್ಯವನ್ನು ಜಗತ್ತು ಇನ್ನೂ ಅರಿಯಬೇಕಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಉಕ್ರೇನ್​ ಮೇಲೆ ರಷ್ಯಾ ನಡೆಸುತ್ತಿರುವ ಭೀಕರ ಯುದ್ಧದ ಬಗ್ಗೆ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: ದೆಹಲಿಗೆ ದ್ರಾವಿಡ ನಾಡಿನ ಸಿಎಂ : ಪ್ರತಿಪಕ್ಷಗಳ ಒಗ್ಗಟ್ಟಿನ ಆಧಾರದಲ್ಲಿ ಹೊರ ಹೊಮ್ಮುತ್ತಿದ್ದಾರೆಯೇ ಎಂಕೆ ಸ್ಟಾಲಿನ್!?

ಪ್ರಮುಖಾಂಶಗಳು:

  • ಇದರ ನಡುವೆ ಯುಎಸ್ ಅಧ್ಯಕ್ಷ ಜೋ ಬೈಡೆನ್ ಅವರು ಬುಚಾದಲ್ಲಿನ ಸಾವು-ನೋವುಗಳ ಬಗ್ಗೆ ಯುದ್ಧ ಅಪರಾಧಗಳ ವಿಚಾರಣೆ ಮತ್ತು ರಷ್ಯಾದ ಮೇಲೆ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಲು ಕರೆ ನೀಡಿದ್ದಾರೆ. ಐರೋಪ್ಯ ಒಕ್ಕೂಟವು ತನಿಖಾಧಿಕಾರಿಗಳ ತಂಡವನ್ನು ಉಕ್ರೇನ್‌ಗೆ ಕಳುಹಿಸುವ ಉದ್ದೇಶದಿಂದ ಪುರಾವೆಗಳನ್ನು ಸಂಗ್ರಹಿಸಲು ಮುಂದಾಗಿದೆ. ಮಾಸ್ಕೋ ವಿರುದ್ಧ ಹೊಸ ದಂಡನಾತ್ಮಕ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಈ ಮೂಲಕ ಚರ್ಚಿಸುತ್ತಿದೆ ಎಂದು ಯುರೋಪಿಯನ್​ ಒಕ್ಕೂಟ ಹೇಳಿದೆ. ರಷ್ಯಾದ ತೈಲ ಮತ್ತು ಕಲ್ಲಿದ್ದಲಿನ ಮೇಲಿನ ನಿರ್ಬಂಧಗಳನ್ನು ಇಯು ಪರಿಗಣಿಸುತ್ತಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
  • ಇದರ ಬೆನ್ನಲ್ಲೇ ನಾಗರಿಕ ಸಾವುಗಳಿಗೆ ನಾವು ಜವಾಬ್ದಾರರಲ್ಲ ಎಂದು ಮಾಸ್ಕೋ ಉಕ್ರೇನ್​ ಆರೋಪವನ್ನು ನಿರಾಕರಿಸಿದೆ. ಬುಚಾ ಮತ್ತು ಇತರ ಕೈವ್ ಉಪನಗರಗಳಲ್ಲಿನ ಮೃತ ದೇಹಗಳ ಚಿತ್ರಗಳನ್ನು ನಕಲಿ ಎಂದು ಪ್ರತಿಪಾದಿಸಿದೆ. ಉಕ್ರೇನಿಯನ್ ಮಿಲಿಟರಿಯು ನಾಗರಿಕರ ಸಾವುಗಳನ್ನು ಪ್ರದರ್ಶಿಸುತ್ತಿದೆ. ಅದು ಸೋಮವಾರ ಮೋಟಿಜಿನ್ ಗ್ರಾಮದಲ್ಲಿ ನಡೆದಿದೆ ಎಂದು ಹೇಳಿಕೊಂಡಿದೆ. ಆದರೆ, ಅದನ್ನು ಸ್ಪಷ್ಟಪಡಿಸಲು ಯಾವುದೇ ಪುರಾವೆಯನ್ನು ಒದಗಿಸಿಲ್ಲ ಎಂದು ರಷ್ಯಾದ ರಕ್ಷಣಾ ಸಚಿವಾಲಯವು ತಿಳಿಸಿದೆ.
  • ಮೇಯರ್ ಹಾಗೂ ಅವರ ಪತಿ ಮತ್ತು ಮಗ ಸೇರಿದಂತೆ ಐವರು ನಾಗರಿಕರ ಶವಗಳು ಪತ್ತೆಯಾಗಿವೆ ಎಂದು ಉಕ್ರೇನಿಯನ್ ಅಧಿಕಾರಿಗಳು ತಿಳಿಸಿದ್ದಾರೆ. ಹಾಗೆ ಮುತ್ತಿಗೆ ಹಾಕಿದ ಬಂದರು ನಗರವಾದ ಮರಿಯುಪೋಲ್‌ನಿಂದ ನಾಗರಿಕರನ್ನು ಸ್ಥಳಾಂತರಿಸಲು ಸಹಾಯ ಮಾಡುವ ಮಾರ್ಗದಲ್ಲಿ ಬಂಧಿತರಾಗಿದ್ದ ತಂಡವನ್ನು ಬಿಡುಗಡೆ ಮಾಡಲಾಗಿದೆ ಎಂದು ರೆಡ್‌ಕ್ರಾಸ್ ಹೇಳಿಕೆ ನೀಡಿದೆ.
  • ಪೂರ್ವ ಉಕ್ರೇನ್‌ನ ಲುಗಾನ್ಸ್ಕ್ ಪ್ರದೇಶದಲ್ಲಿ ರಷ್ಯಾದ ಪಡೆಗಳು ದೊಡ್ಡ ದಾಳಿಗೆ ಸಜ್ಜಾಗುತ್ತಿವೆ ಎಂದು ಸ್ಥಳೀಯ ಗವರ್ನರ್ ಸೆರ್ಗಿ ಗೈಡೆ ಟೆಲಿಗ್ರಾಮ್‌ನಲ್ಲಿ ತಿಳಿಸಿದ್ದಾರೆ. ವಿವಿಧ ಕಡೆಗಳಿಂದ ಉಪಕರಣಗಳು ಬರುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಅವು ಮಾನವಶಕ್ತಿ, ಇಂಧನವನ್ನು ತರುತ್ತಿವೆ ಎಂದು ಹೇಳಿಕೆ ನೀಡಿದ್ದಾರೆ.
  • ಬೇಹುಗಾರಿಕೆ ಹಿನ್ನೆಲೆ 15 ರಷ್ಯಾದ ರಾಜತಾಂತ್ರಿಕರನ್ನು ಹೊರಹಾಕುವುದಾಗಿ ಡೆನ್ಮಾರ್ಕ್ ಹೇಳಿಕೆ ನೀಡಿದೆ. ಜರ್ಮನಿ ಮತ್ತು ಫ್ರಾನ್ಸ್ ಡಜನ್​ಗಟ್ಟಲೇ ರಷ್ಯಾದ ರಾಜತಾಂತ್ರಿಕರಿಗೆ ತಮ್ಮ ಮನೆಗೆ ಹಿಂತಿರುಗಲು ಆದೇಶಿಸಿದ ಒಂದು ದಿನದ ನಂತರ ಈ ಆದೇಶ ಬಂದಿದೆ.
  • ರಷ್ಯಾದ ಆಕ್ರಮಣದ ನಂತರ 4.2 ದಶಲಕ್ಷಕ್ಕೂ ಹೆಚ್ಚು ಉಕ್ರೇನಿಯನ್ ನಿರಾಶ್ರಿತರು ದೇಶವನ್ನು ತೊರೆದಿದ್ದಾರೆ ಎಂದು ಯುಎನ್ ಹೇಳಿದೆ.

For All Latest Updates

TAGGED:

ABOUT THE AUTHOR

...view details