ಕರ್ನಾಟಕ

karnataka

ETV Bharat / bharat

ಈ ಗ್ರಾಮದಲ್ಲಿದ್ದಾರೆ ಅಮೆರಿಕ, ಆಫ್ರಿಕಾ, ಜಪಾನ್ ಸಹೋದರರು..ಇವರಿಗೆ ಉಕ್ರೇನ್-ರಷ್ಯಾ ಯುದ್ಧದ್ದೇ ಚಿಂತೆ - ಉಕ್ರೇನ್-ರಷ್ಯಾ ಯುದ್ಧದ ಚಿಂತೆ

ಪಶ್ಚಿಮ ಚಂಪಾರಣ್ ಜಿಲ್ಲೆಯ ಬಸಂತಪುರ ಪಂಚಾಯತ್ ವ್ಯಾಪ್ತಿಯ ಜಮದರ್ ತೋಲಾ ಗ್ರಾಮದಲ್ಲಿ ಐದೂ ಜನ ಸಹೋದರಿಗೆ ಐದು ದೇಶದ ಹೆಸರನ್ನು ಇಡಲಾಗಿದೆ. ರಷ್ಯಾ ಮತ್ತು ಜರ್ಮನಿ ಹೆಸರಿನ ಇಬ್ಬರು ಮೃತಪಟ್ಟಿದ್ದಾರೆ. ಅಮೆರಿಕ, ಆಫ್ರಿಕಾ ಮತ್ತು ಜಪಾನ್​ಗೆ ಈ ನಡೆಯುತ್ತಿರುವ ಉಕ್ರೇನ್ - ರಷ್ಯಾ ನಡುವಿನ ಯುದ್ಧದ ಚಿಂತೆ ಇದೆ.

ಅಮೆರಿಕ, ಆಫ್ರಿಕಾ, ಜಪಾನ್ ಸಹೋದರರು
five countries reside

By

Published : Apr 1, 2022, 7:53 PM IST

Updated : Apr 1, 2022, 8:12 PM IST

ಬಾಘಾ(ಬಿಹಾರ): ಸಾಮಾನ್ಯವಾಗಿ ಮನುಷ್ಯರಿಗೆ ದೇವರ ಹೆಸರು, ಪುರಾಣ ಪುರುಷರ ಹೆಸರು ಅಥವಾ ಪ್ರಸಿದ್ಧ ವ್ಯಕ್ತಿಗಳ ಹೆಸರು ಇಡಲಾಗುತ್ತಿದೆ. ಆದರೆ, ಬಿಹಾರದ ಗ್ರಾಮವೊಂದರಲ್ಲಿ ವಿವಿಧ ದೇಶಗಳ ಹೆಸರನ್ನೇ ಮನಷ್ಯರಿಗೆ ಇಡಲಾಗಿದೆ. ಅಮೆರಿಕ, ಆಫ್ರಿಕಾ, ಜಪಾನ್...ಹೀಗೆ ಗ್ರಾಮದಲ್ಲಿ ಹೆಸರಿನ ಸಹೋದರರು ಇದ್ದಾರೆ.!

ಪಶ್ಚಿಮ ಚಂಪಾರಣ್ ಜಿಲ್ಲೆಯ ಬಸಂತಪುರ ಪಂಚಾಯತ್ ವ್ಯಾಪ್ತಿಯ ಜಮದರ್ ತೋಲಾ ಗ್ರಾಮದಲ್ಲಿ ಐದೂ ಜನ ಸಹೋದರಿಗೆ ಐದು ದೇಶದ ಹೆಸರನ್ನು ಇಡಲಾಗಿದೆ. ರಷ್ಯಾ ಮತ್ತು ಜರ್ಮನಿ ಹೆಸರಿನ ಇಬ್ಬರು ಮೃತಪಟ್ಟಿದ್ದಾರೆ. ಅಮೆರಿಕ, ಆಫ್ರಿಕಾ ಮತ್ತು ಜಪಾನ್​ಗೆ ಈ ನಡೆಯುತ್ತಿರುವ ಉಕ್ರೇನ್-ರಷ್ಯಾ ನಡುವಿನ ಯುದ್ಧದ ಚಿಂತೆ ಇದೆ.

ಈ ಹೆಸರುಗಳು ಬಂದಿದ್ದೇಗೆ?: ಈ ಜನ ಸಹೋದರರ ಹೆಸರಿನ ಹಿಂದೆ ಒಂದು ಕುತೂಹಲಕಾರಿ ಕಥೆಯಿದೆ. ಇವರ ಸೋದರ ಸಂಬಂಧಿ ಅಕ್ಲು ಶರ್ಮಾ ಎಂಬುವವರು ಭಾರತೀಯ ಸೇನೆಯಲ್ಲಿದ್ದರು. ಎರಡನೇ ಮಹಾಯುದ್ಧದಲ್ಲೂ ಅವರು ಭಾಗವಹಿಸಿದ್ದರು. ಯುದ್ಧದಲ್ಲಿ ಗುಂಡು ತಲುಗಿ ಅವರು ಮನೆಗೆ ಬಂದಿದ್ದರು. ಈ ಸಂದರ್ಭದಲ್ಲಿ ಮನೆಯಲ್ಲಿ ಮಗುವೊಂದು ಜನಿಸಿದಾಗ ಆ ಮಗುವಿಗೆ ಅಮೆರಿಕ ಎಂದು ಹೆಸರಿಡುವಂತೆ ಅಕ್ಲು ಶರ್ಮಾ ಸೂಚಿಸುತ್ತಾರೆ. ಅಂತೆಯೇ, ಮಗುವಿಗೆ ಅಮೆರಿಕ ಎಂದು ಹೆಸರಿಡಲಾಗುತ್ತದೆ.

ಆಗ ಮಹಾಯುದ್ಧ ಸಮಯವಾಗಿದ್ದರಿಂದ ಅಮೆರಿಕ, ಜರ್ಮನಿ, ಜಪಾನ್, ರಷ್ಯಾ ಮತ್ತು ಆಫ್ರಿಕಾ ದೇಶಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದವು. ಆದ್ದರಿಂದ, ಒಬ್ಬರ ನಂತರ ಒಬ್ಬರು ನಾಲ್ಕು ಸಹೋದರರು ಜನಿಸಿದಾಗ ಅವರಿಗೆ ಆಫ್ರಿಕಾ, ಜಪಾನ್, ರಷ್ಯಾ ಹಾಗೂ ಜರ್ಮನಿ ಎಂದು ಹೆಸರಿಸಲಾಗುತ್ತದೆ. ಆಗಿನಿಂದಲೂ ಈ ಗ್ರಾಮದಲ್ಲಿ ಅಮೆರಿಕ, ಆಫ್ರಿಕಾ, ಜಪಾನ್, ರಷ್ಯಾ ಹಾಗೂ ಜರ್ಮನಿ ಮತ್ತಷ್ಟು ಹೆಸರು ಪಡೆದಿವೆ. ಎಲ್ಲರ ಹೆಸರುಗಳ ಮುಂದೆ ಶರ್ಮಾ ಎಂಬ ಸರ್​ನೇಮ್​ ಸಹ ಇದೆ. ಇನ್ನು, ಐವರ ಪೈಕಿ 2012ರಲ್ಲಿ ರಷ್ಯಾ ಶರ್ಮಾ ಹಾಗೂ 2017ರಲ್ಲಿ ಜರ್ಮನ್​ ಶರ್ಮಾ ನಿಧನ ಹೊಂದಿದ್ದಾರೆ.

ಈ ಗ್ರಾಮದಲ್ಲಿದ್ದಾರೆ ಅಮೆರಿಕ, ಆಫ್ರಿಕಾ, ಜಪಾನ್ ಸಹೋದರರು..ಇವರಿಗೆ ಉಕ್ರೇನ್-ರಷ್ಯಾ ಯುದ್ಧದ್ದೇ ಚಿಂತೆ

ಈ ಹೆಸರುಗಳಿಂದ ಎಫ್‌ಐಆರ್ ದಾಖಲಾಗಲಿಲ್ಲ: ಈ ಹೆಸರನ್ನು ಮೊದಲ ಬಾರಿಗೆ ಕೇಳಿದರೆ ಅಚ್ಚರಿ ಆಗುವುದು ಎಷ್ಟು ನಿಜವೋ, ಅಷ್ಟೇ ಅಚ್ಚರಿ ಪೊಲೀಸರಿಗೂ ಆಗಿದೆ. ಈ ಹಿಂದೆ ಒಮ್ಮೆ ಪಕ್ಕದ ಊರಿನಲ್ಲಿ ಇವರ ತಾಯಿಯ ಚಿಕ್ಕಪ್ಪನ ಕುಟುಂಬದವರು ಮತ್ತು ನೆರೆಹೊರೆಯವರೊಂದಿಗೆ ಜಗಳವಾಗಿತ್ತು. ಆಗ ದೂರು - ಪ್ರತಿದೂರು ದಾಖಲಿಸಲು ಎರಡೂ ಕಡೆಯವರು ಪೊಲೀಸ್​ ಠಾಣೆಗೆ ಹೋಗಿದ್ದರು. ಹೀಗಿರುವಾಗ ನೆರೆಹೊರೆಯವರು ಐವರು ಸಹೋದರರ ಹೆಸರನ್ನು ತಮ್ಮ ದೂರಿನಲ್ಲಿ ಸೇರಿದ್ದರು. ಇದನ್ನು ಕಂಡ ಪೊಲೀಸರು ದಿಗ್ಭ್ರಮೆಗೊಂಡು ಬಲಿಷ್ಠ ದೇಶಗಳ ಮೇಲೆ ಕೇಸ್​ ಹೂಡುವುದಿಲ್ಲ ಎಂದು ಹೇಳಿದ್ದರು ಎಂದು ಸ್ಮರಿಸುತ್ತಾರೆ ಜಪಾನ್ ಶರ್ಮಾ.

ಉಕ್ರೇನ್ ಮತ್ತು ರಷ್ಯಾಕ್ಕೆ ಸಂದೇಶ:ನಮ್ಮ ಕುಟುಂಬದ ಕಸುಬು ಮರಗೆಲಸ. ನಾವು ಐದು ಜನ ಸಹೋದರರು ಬಹಳ ಪ್ರೀತಿಯಿಂದ ಒಟ್ಟಿಗೆ ವಾಸಿಸುತ್ತಿದ್ದೆವು. ಕೆಲವೊಮ್ಮೆ ನಮ್ಮಲ್ಲಿ ಜಗಳ ನಡೆದರೂ ತಕ್ಷಣಕ್ಕೆ ಮರೆತು ಮತ್ತೆ ಒಂದಾಗುತ್ತಿದ್ದೇವೆ ಎನ್ನುತ್ತಾರೆ ಅಮೆರಿಕ, ಆಫ್ರಿಕಾ, ಜಪಾನ್ ಶರ್ಮಾ ಸಹೋದರರು. ಅಲ್ಲದೇ, ಈಗ ಯುದ್ಧ ನಡೆಯುತ್ತಿರುವ ಉಕ್ರೇನ್ - ರಷ್ಯಾಕ್ಕೂ ಸಹೋದರತ್ವ ಸಂದೇಶವನ್ನು ನೀಡಿದ್ದಾರೆ. ಎರಡೂ ರಾಷ್ಟ್ರಗಳ ಯುದ್ಧವನ್ನು ಕೇಳಿ ನಮಗೆ ತುಂಬಾ ದುಃಖವಾಗಿದೆ. ಶಾಂತಿಯಿಂದ ಪರಿಹಾರ ಕಂಡುಕೊಳ್ಳಬೇಕೆಂದು ಸಹೋದರರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ:ಶೀಘ್ರವೇ ವೃದ್ಧರು, ವಿಕಲಚೇತನ ಭಕ್ತರಿಗೆ ತಿಮ್ಮಪ್ಪನ ವಿಶೇಷ ದರ್ಶನ

Last Updated : Apr 1, 2022, 8:12 PM IST

ABOUT THE AUTHOR

...view details