ಪಾಟ್ನಾ: ಇಂಡಿಗೋ ಏರ್ಲೈನ್ಸ್ ಮ್ಯಾನೇಜರ್ ರೂಪೇಶ್ ಕುಮಾರ್ ಸಿಂಗ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಿತುರಾಜ್ ಸಿಂಗ್ಗೆ ಕೊಲೆ ಮಾಡಿರುವುದಾಗಿ ಒಪ್ಪಿಕೊಳ್ಳುವಂತೆ ಪೊಲೀಸರು ಒತ್ತಡ ಹೇರುತ್ತಿದ್ದಾರೆ ಎಂದು ರಿತುರಾಜ್ ಸಿಂಗ್ ಕುಟುಂಬಸ್ಥರು ಆರೋಪಿಸಿದ್ದಾರೆ.
ರೂಪೇಶ್ ಕುಮಾರ್ ಸಿಂಗ್ ಕೊಲೆ ಪ್ರಕರಣ: ಸುಳ್ಳು ಆರೋಪ ಒಪ್ಪಿಕೊಳ್ಳುವಂತೆ ಆರೋಪಿಗೆ ಪೊಲೀಸರಿಂದ ಒತ್ತಡ - ರೂಪೇಶ್ ಕುಮಾರ್ ಸಿಂಗ್ ಕೊಲೆ ಪ್ರಕರಣ
ರೂಪೇಶ್ ಕುಮಾರ್ ಸಿಂಗ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಪತಿಗೆ ಸುಳ್ಳು ಆರೋಪ ಒಪ್ಪಿಕೊಳ್ಳುವಂತೆ ಪೊಲೀಸರು ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪಿ ರಿತುರಾಜ್ ಅವರ ಪತ್ನಿ ಸಾಕ್ಷಿ ಸಿಂಗ್ ಆರೋಪಿಸಿದ್ದಾರೆ.
ರಿತುರಾಜ್ ಅವರ ಪತ್ನಿ ಸಾಕ್ಷಿ ಸಿಂಗ್ ಈ ಕುರಿತು ಮಾತನಾಡಿ, ಪಾಟ್ನಾ ಪೊಲೀಸರು ನನ್ನ ಪತಿಗೆ ಅವರು ಮಾಡದ ಕೊಲೆಯನ್ನು ಒಪ್ಪಿಕೊಳ್ಳುವಂತೆ ಒತ್ತಡ ಹೇರುತ್ತಿದ್ದಾರೆ. ಇಂಡಿಗೋ ವಿಮಾನಯಾನ ಸಂಸ್ಥೆಗಳ ಸ್ಟೇಷನ್ ಮ್ಯಾನೇಜರ್ ರೂಪೇಶ್ ಕುಮಾರ್ ಸಿಂಗ್ ಅವರ ಹತ್ಯೆಗೂ, ನನ್ನ ಪತಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದರು.
ಜನ ಅಧಿಕಾರಿ ಪಕ್ಷದ (ಜೆಎಪಿ) ಸ್ಥಾಪಕರಲ್ಲೊಬ್ಬರಾದ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಅವರು ನಿನ್ನೆ ಆರೋಪಿ ರಿತುರಾಜ್ ಸಿಂಗ್ ಕುಟುಂಬಸ್ಥರನ್ನು ಭೇಟಿ ಮಾಡಿ ಕೆಲ ಕಾಲ ಚರ್ಚೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ರೂಪೇಶ್ ಸಿಂಗ್ ಕೊಲೆ ಪ್ರಕರಣದ ತನಿಖೆ ಸರಿಯಾಗಿ ನಡೆದಿಲ್ಲ. ಈ ಕೊಲೆ ಪ್ರಕರಣದಲ್ಲಿ ಸಾಕಷ್ಟು ಉನ್ನತ ನಾಯಕರು ಮತ್ತು ಅಧಿಕಾರಿಗಳು ಭಾಗಿಯಾಗಿದ್ದಾರೆ. ಜೊತೆಗೆ ತನಿಖೆ ಸಮಯದಲ್ಲಿ ಪೊಲೀಸರು ಸಾಕ್ಷಿ ಅವರೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಇದು ಖಂಡನೀಯ, ಈ ಕುರಿತು ಮಹಿಳಾ ಆಯೋಗ ಪರಿಶೀಲನೆ ನಡೆಸಬೇಕು ಎಂದು ಯಾದವ್ ಹೇಳಿದರು.