ಮುಂಬೈ: ಮುಂಬೈ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಹಾಗು ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ ಇಂದು ಬೆಳಗ್ಗೆ ವ್ಯವಹಾರ ಆರಂಭವಾಗುತ್ತಿದ್ದಂತೆ ಭಾರಿ ಕುಸಿತ ಕಂಡಿತು. ಇದೇ ವೇಳೆ ರುಪಾಯಿ ಮೌಲ್ಯವೂ ಸಾರ್ವಕಾಲಿಕವಾಗಿ ಕೆಳಗಿಳಿಯಿತು. ಶಾಂಘೈನಲ್ಲಿ ವಿಧಿಸಲಾಗಿರುವ ಕೋವಿಡ್-19 ಕಠಿಣ ನಿರ್ಬಂಧಗಳು ಚೀನಾದ ಆರ್ಥಿಕತೆಯ ಮೇಲೆ ತೀವ್ರ ಸ್ವರೂಪದಲ್ಲಿ ಪ್ರಭಾವ ಬೀರುವ ಆತಂಕದಿಂದ ಏಷ್ಯಾದ ಮಾರುಕಟ್ಟೆಗಳಲ್ಲಿ ಷೇರು ಮೌಲ್ಯ ಗಣನೀಯ ಕುಸಿದಿದೆ.
ಸದ್ಯ, ಎನ್‌ಎಸ್‌ಇ ನಿಫ್ಟಿ 50 ಇಂಡೆಕ್ಸ್ ಶೇ 1.34 ರಷ್ಟು ಅಥವಾ 218 ಅಂಕ ಕುಸಿದು 16,192ರಲ್ಲಿ ವ್ಯವಹಾರ ನಡೆಸುತ್ತಿದೆ. ಬಿಎಸ್‌ಇ ಸೆನ್ಸೆಕ್ಸ್ ಶೇ 1.24ರ ಅಥವಾ 732 ಅಂಕ ಕುಸಿದು 54,099 ರಲ್ಲಿ ವಹಿವಾಟು ನಡೆಸುತ್ತಿದೆ.