ಕರ್ನಾಟಕ

karnataka

ETV Bharat / bharat

ಡಾಲರ್​ ಎದುರು ಮತ್ತೆ ಮಂಡಿಯೂರಿದ ರೂಪಾಯಿ.. 83.08 ರೂ.ಗೆ ಕುಸಿತ - 83 ರೂ 08 ಪೈಸೆಗೆ ಕುಸಿತ ಕಂಡು ಮತ್ತೊಂದು ದಾಖಲೆ

ಇಂದೂ ಕೂಡ ರೂಪಾಯಿ ಮೌಲ್ಯ ಡಾಲರ್​ ಎದುರು ಮಂಡಿಯೂರಿದೆ. 83 ರೂ 08 ಪೈಸೆಗೆ ಕುಸಿತ ಕಂಡು ಮತ್ತೊಂದು ದಾಖಲೆ ಬರೆದಿದೆ.

Rupee Hits a fresh record low, at 83.08 against US Dollar
ಡಾಲರ್​ ಎದುರು ಮತ್ತೆ ಮಂಡಿಯೂರಿದ ರೂಪಾಯಿ.. 83.08 ರೂ.ಗೆ ಕುಸಿತ

By

Published : Oct 20, 2022, 10:57 AM IST

ಮುಂಬೈ: ಅಮೆರಿಕ ಡಾಲರ್​ ಎದುರು ಭಾರತದ ರೂಪಾಯಿ ಮೌಲ್ಯ ಹೊಸ ಸಾರ್ವಕಾಲಿಕ ಕುಸಿತ ಕಂಡಿದ್ದು, ನಿನ್ನೆ ಮೊದಲ ಬಾರಿಗೆ 83 ರೂ. ಗೆ ಇಳಿಕೆ ಕಂಡಿತ್ತು. ನಿನ್ನೆಯಷ್ಟೇ 61 ಪೈಸೆಯಷ್ಟು ಕಡಿಮೆಯಾಗಿತ್ತು. ಇಂದು ಮತ್ತೆ 83.08 ಕ್ಕೆ ಕುಸಿತ ಕಂಡಿದೆ.

ವಿದೇಶಿ ಬಂಡವಾಳದ ಹೊರಹರಿವು ಮತ್ತು ಸಾಗರೋತ್ತರ ಮಾರುಕಟ್ಟೆಗಳಲ್ಲಿ ಡಾಲರ್ ಶಕ್ತಿ ಹೆಚ್ಚುತ್ತಿದೆ. ಇದಲ್ಲದೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಹೂಡಿಕೆದಾರರಲ್ಲಿ ಆತಂಕದ ಮನೋಭಾವ ಸ್ಥಳೀಯ ರೂಪಾಯಿ ಮೇಲೆ ಪರಿಣಾಮ ಬೀರುತ್ತಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

ಇದನ್ನು ಓದಿ:ಭಾರತದ ಪಟಾಕಿ ಕೇಂದ್ರ​ ಶಿವಕಾಶಿಗೆ ಡಬಲ್​ ಹೊಡೆತ: ಶೇ.40ರಷ್ಟು ಉತ್ಪಾದನೆ ಕುಸಿತ

ABOUT THE AUTHOR

...view details