ಕರ್ನಾಟಕ

karnataka

ETV Bharat / bharat

Farm Laws : ಆಡಳಿತಗಾರರು ಜನರಿಗೆ ತಲೆಬಾಗುವುದು ಅವಮಾನವಲ್ಲ: ETV Bharat ಜತೆ ಮೇಘಾಲಯ ಗವರ್ನರ್ ಮಾತು

ಕೇಂದ್ರ ಸರ್ಕಾರ ವಾಪಸ್​ ಪಡೆದುಕೊಂಡಿರುವ ಮೂರು ಕೃಷಿ ಕಾಯ್ದೆ ಹಾಗೂ ವಿವಿಧ ವಿಚಾರವಾಗಿ ಮೇಘಾಲಯ ಗವರ್ನರ್​ ಸತ್ಯಪಾಲ್​ ಮಲಿಕ್​​ ಈಟಿವಿ ಭಾರತ್ ಜೊತೆ ತಮ್ಮ ಮನದಾಳ ಹಂಚಿಕೊಂಡಿದ್ದಾರೆ..

Meghalaya Governor
Meghalaya Governor

By

Published : Nov 20, 2021, 10:22 PM IST

ನವದೆಹಲಿ :ದಿಢೀರ್​ ಬೆಳವಣಿಗೆವೊಂದರಲ್ಲಿ ಕೇಂದ್ರ ಸರ್ಕಾರ ವಿವಾದಿತ ಮೂರು ಕೃಷಿ ಕಾಯ್ದೆ(three agriculture laws) ವಾಪಸ್​ ಪಡೆದುಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ತರಹೇವಾರಿ ಹೇಳಿಕೆ ವ್ಯಕ್ತವಾಗ್ತಿವೆ.

ಇದೇ ವಿಚಾರವಾಗಿ ಮೇಘಾಲಯ ರಾಜ್ಯಪಾಲ ಸತ್ಯಪಾಲ್​ ಮಲಿಕ್(Meghalaya Governor Satya Pal Malik)​ ಅವರು ಈಟಿವಿ ಭಾರತ್​ನ ರಾಕೇಶ್​ ತ್ರಿಪಾಠಿ ಅವರೊಂದಿಗೆ ವಿಶೇಷ ಸಂದರ್ಶನದಲ್ಲಿ ಭಾಗಿಯಾಗಿ ಮಾತನಾಡಿದ್ದಾರೆ.

ವಿವಾದಿತ ಮೂರು ಕೃಷಿ ಕಾಯ್ದೆ(Repeal of farm laws) ಹಿಂತೆಗೆದುಕೊಳ್ಳುವ ನಿರ್ಧಾರದಿಂದ ಪ್ರಧಾನಿ ಮೋದಿ ಅವಮಾನ ಎದುರಿಸುತ್ತಿದ್ದಾರೆ ಎಂಬ ಮಾತು ಸಂಪೂರ್ಣವಾಗಿ ತಳ್ಳಿ ಹಾಕಿರುವ ಅವರು, ನಮ್ಮ ಜನರಿಗೆ ತಲೆಬಾಗುವುದರಿಂದ ಯಾವುದೇ ರೀತಿಯ ಅವಮಾನವಿಲ್ಲ. ರೈತರು ವಿದೇಶಿಯರಲ್ಲ ಎಂದಿದ್ದಾರೆ.

ಸಂಪೂರ್ಣ ಸಂದರ್ಶನದ ಸಾರಾಂಶ ಇಂತಿದೆ :ರಾಷ್ಟ್ರೀಯ ಹಿತಾಸಕ್ತಿ ವಿಚಾರವಾಗಿ ದನಿಯೆತ್ತಿರುವ ಮೇಘಾಲಯ ರಾಜ್ಯಪಾಲ ಸತ್ಯಪಾಲ್​ ಮಲಿಕ್, ರಾಜ್ಯಪಾಲ ಸ್ಥಾನದಿಂದ ಕೆಳಗಿಳಿಯಲು ಸಿದ್ಧನಿದ್ದೇನೆ. ಹೊರತು ರೈತರ ಆಂದೋಲನಕ್ಕೆ ನೀಡಿರುವ ಬೆಂಬಲ ಹಿಂಪಡೆದುಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ಈಟಿವಿ ಭಾರತ್​ನ ರಾಕೇಶ್ ತ್ರಿಪಾಠಿ ಅವರೊಂದಿಗೆ ನಡೆದಿರುವ ವಿಶೇಷ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.

ಇದನ್ನೂ ಓದಿರಿ: ದೇಶಕ್ಕೆ ಇಂದಿರಾ ಗಾಂಧಿಯಂತಹ ಪ್ರಧಾನಿ ಅಗತ್ಯವಿದೆ.. ನಟಿ ಕಂಗನಾ ರಣಾವತ್​​

ಕೃಷಿ ಕಾನೂನು ರದ್ಧುಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ನಿರ್ಧಾರ ಪ್ರತಿಭಟನಾಕಾರರನ್ನ ಸಮಾಧಾನಪಡಿಸಿದೆ. ಈ ನಿರ್ಧಾರ ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ಆರ್ಟಿಕಲ್​​ 370(Artical 370) ಮರುಸ್ಥಾಪನೆ, ಪೌರತ್ವ ಕಾಯ್ದೆ(CAA) ರದ್ಧುಗೊಳಿಸಲು ಕಾರಣವಾಗುತ್ತದೆಯೇ ಎಂದು ಕೇಳಿದಾಗ, ಅಂತಹ ಬೇಡಿಕೆ ಕೇಳುವ ಹಕ್ಕು ಜನರಿಗೆ ಇದೆ ಎಂದಿದ್ದಾರೆ.

  • ಪ್ರಶ್ನೆ: ಪಿಎಂ ಮೋದಿ ಅವರು ಮೂರು ಕೃಷಿ ಕಾನೂನು ಹಿಂಪಡೆದಿದ್ದಾರೆ. ಈ ಬೆಳವಣಿಗೆ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?

ಉತ್ತರ : ಪ್ರಧಾನಿ ಮೋದಿ(PM Modi) ಸರಿಯಾದ ಹೆಜ್ಜೆ ಇಟ್ಟಿದ್ದಕ್ಕಾಗಿ ನಾನು ಅವರಿಗೆ ಧನ್ಯವಾದ ಮತ್ತು ಅಭಿನಂದಿಸುತ್ತೇನೆ. ಹಿಂಸಾಚಾರವಿಲ್ಲದೇ ಇಷ್ಟು ಸುದೀರ್ಘ ಹೋರಾಟ ನಡೆಸಿದ ರೈತರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

  • ಕೃಷಿ ಕಾನೂನು ಬಹಳ ಹತ್ತಿರದಿಂದ ಅರ್ಥಮಾಡಿಕೊಂಡಿದ್ದೀರಿ. ಈ ಕಾನೂನು ದೇಶದ ರೈತರಿಗೆ ಒಳ್ಳೆಯದಲ್ಲ ಎಂಬುದು ಹೇಗೆ ತಿಳಿಸುತ್ತೀರಿ?

ಈ ಕಾಯ್ದೆ ಜಾರಿಯಿಂದಾಗಿ ಕೇಂದ್ರ ಸರ್ಕಾರ(Central Government) ರೈತರ ಜಮೀನು ಕಿತ್ತುಕೊಂಡು ದೊಡ್ಡ ಕಾರ್ಪೊರೇಟ್​ಗಳಿಗೆ ನೀಡುತ್ತಾರೆಂಬ ನಂಬತೊಡಗಿದರು. ಹೀಗಾಗಿ, ಕೇಂದ್ರ ಸರ್ಕಾರದ ಮೇಲಿನ ವಿಶ್ವಾಸ ಕಡಿಮೆಯಾಗಲು ಶುರುವಾಯಿತು. ಅದೇ ಕಾರಣಕ್ಕಾಗಿ ರೈತರು ಈ ಕಾನೂನುಗಳಿಂದ ಭಯಗೊಂಡಿದ್ದರು ಎಂದರು. ಗುತ್ತಿಗೆ ಬೇಸಾಯದವರಿಗೆ ಈ ಸಮಸ್ಯೆ ಎದುರಾಗಿತ್ತು. ಜೊತೆಗೆ ಅನೇಕ ವಿಷಯಗಳು ರೈತರ ಮನಸ್ಸಿನಲ್ಲಿ ಇದ್ದವು ಎಂದರು.

  • ಕೇಂದ್ರದ ನಿರ್ಧಾರ ಆರ್ಟಿಕಲ್ 370, ಸಿಎಎ ಹಿಂಪಡೆದುಕೊಳ್ಳುವ ಬೇಡಿಕೆ ಕೂಗು ಪುನರಾವರ್ತನೆ ಯಾಗಬಹುದೇ?

ಮಸೂದೆ ವಾಪಸ್​ ಪಡೆದುಕೊಳ್ಳುವಂತೆ ಆಗ್ರಹಿಸುವುದ ಸಾರ್ವಜನಿಕರ ಹಕ್ಕು. ಯಾವುದು ಸಮರ್ಥವಾಗಿರುವುದೋ ಅದನ್ನ ಸ್ವೀಕಾರ ಮಾಡಬಹುದು. ಒಮ್ಮೆ ರಚನೆ ಮಾಡಿರುವ ಕಾನೂನು ಹಿಂಪಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಏನೂ ಇಲ್ಲ. ಬ್ರಿಟಿಷರೂ ಹಿಂಪಡೆದುಕೊಂಡಿರುವ ಉದಾಹರಣೆಗಳಿವೆ. ಆರ್ಟಿಕಲ್​ 370 ರದ್ಧತಿ ಸರಿಯಾಗಿದೆ. ಆದರೆ ಸಿಎಎ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲ ಎಂದರು.

  • ಕೃಷಿ ಮಸೂದೆ ಹಿಂದಕ್ಕೆ ಪಡೆಯುವುದನ್ನ ಇಷ್ಟಪಡದವರು ಯಾರು?

ಈ ವಿಚಾರವಾಗಿ ನಾನು ಪ್ರತಿಕ್ರಿಯೆ ನೀಡಲ್ಲ. ಅನೇಕರು ಅದರಲ್ಲಿ ಇದ್ದಾರೆ. ರಾಜಕೀಯ ಪಕ್ಷದ ನಾಯಕರು ಸೇರಿದಂತೆ ಅಧಿಕಾರಶಾಹಿ ಜನರು ಇದರಲ್ಲಿ ಇರಬಹುದು.

  • ಕೃಷಿ ಕಾನೂನು ಮುಂಬರುವ ಚುನಾವಣೆಯಲ್ಲಿ ಸರ್ಕಾರಕ್ಕೆ ನಷ್ಟವಾಗಬಹುದು ಎಂದು ಬಹಿರಂಗವಾಗಿ ಹೇಳಿದ್ದೀರಿ. ಇದೀಗ ವಾಪಸ್​ ಪಡೆದುಕೊಳ್ಳಲಾಗಿದೆ. ಈ ಬಗ್ಗೆ ಬಿಜೆಪಿಗೆ ಲಾಭವಾಗುತ್ತದೆ ಎಂದು ನೀವು ಭಾವಿಸುತ್ತೀರಾ?

ಈ ಬಗ್ಗೆ ನಾನು ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ಆದರೆ ಹೌದು, ಕೃಷಿ ಕಾಯ್ದೆ ವಾಪಸ್ ಪಡೆದುಕೊಂಡಿರುವುದು ತುಂಬಾ ಸಮಾಧಾನಕರ ವಿಚಾರ.

  • ನೀವು ಸಾಂವಿಧಾನಿಕ ಹುದ್ದೆ ಹೊಂದಿದ್ದೀರಿ. ಸಾಮಾನ್ಯವಾಗಿ ರಾಜ್ಯಪಾಲರು ಎಂದಿಗೂ ಇದರ ಬಗ್ಗೆ ಮಾತನಾಡಿಕೊಳ್ಳಲ್ಲ. ಆದರೆ ನೀವೂ ತುಂಬಾ ಪ್ರಾಮಾಣಿಕವಾಗಿ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದೀರಿ. ಇದೀಗ ಕೇಂದ್ರದಿಂದ ಏನಾದ್ರೂ ಪ್ರತಿಕ್ರಿಯೆ ಬರಬಹುದು ಅನಿಸುತ್ತದೆಯೇ?

ನಾನು ರಾಜ್ಯಪಾಲ ಹುದ್ದೆ ತೊರೆಯಲು ಸಿದ್ಧನಿದ್ದೇನೆ. ನಾನು ನೀಡಿರುವ ಹೇಳಿಕೆಗಳಿಂದ ಕೇಂದ್ರಕ್ಕೆ ಹಾನಿಯಾಗಿದ್ದರೆ ಅಥವಾ ನನ್ನ ಹೇಳಿಕೆ ತಪ್ಪಾಗಿದ್ದರೆ ನಾನು ಈ ಹುದ್ದೆ ಬಿಡುತ್ತೇನೆ. ರಾಜ್ಯಪಾಲರ ಹುದ್ದೆ ತೊರೆಯಲು ನಾನು ಸಿದ್ಧ. ಆದರೆ ರೈತರ ಬೆಂಬಲ ಬಿಡಲು ಸಿದ್ಧನಿಲ್ಲ ಎಂದಿದ್ದಾರೆ.

  • ನಿಮ್ಮ ಆಲೋಚನೆ ನೇರವಾಗಿ ಪ್ರಧಾನಮಂತ್ರಿ ಅಥವಾ ಗೃಹ ಸಚಿವರೊಂದಿಗೆ ಹಂಚಿಕೊಂಡಿದ್ದೀರಾ?

ಹೌದು, ನಾನು ಈಗಾಗಲೇ ಅವರಿಗೆ ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ನನ್ನ ಮತ್ತು ಅವರ ನಡುವೆ ಭಿನ್ನಾಭಿಪ್ರಾಯವಿತ್ತು. ಜನರ ಸಮಸ್ಯೆಗಳಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದರು.

  • ನೀವು ಕಾಶ್ಮೀರದ ರಾಜ್ಯಪಾಲರೂ ಆಗಿದ್ದೀರಿ. ನಿಮ್ಮ ಅನುಭವ?

ಕಾಶ್ಮೀರದಲ್ಲಿ ಇತ್ತೀಚೆಗೆ ಕೆಲವು ಹಿಂಸಾತ್ಮಕ ಘಟನೆ ನಡೆದಿರುವ ಬಗ್ಗೆ ನಾನು ಕೇಳಿದ್ದೇನೆ. ಆ ರಾಜ್ಯದ ಗವರ್ನರ್​ ಆಗಿದ್ದಾಗ ನಾನು ಪುಸ್ತಕ ಬರೆಯುತ್ತಿದ್ದೇನು ಎಂದಿದ್ದಾರೆ.

ABOUT THE AUTHOR

...view details