ನವದೆಹಲಿ: ಇಲ್ಲಿನ ರೋಹಿಣಿ ಕೋರ್ಟ್ ಆವರಣದಲ್ಲಿ ಗ್ಯಾಂಗ್ವಾರ್ ನಡೆದ ಬಳಿಕ ಎಲ್ಲ ಜೈಲುಗಳಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು. ಆದರೆ, ಈ ನಡುವೆ ನಗರದ ಮಂಡೋಲಿ ಜೈಲಿನಲ್ಲಿ ಕೈದಿಗಳು ತಮ್ಮನ್ನು ತಾವೇ ಗಾಯಮಾಡಿಕೊಂಡಿರುವ ಘಟನೆ ನಡೆದಿದೆ.
50ಕ್ಕೂ ಹೆಚ್ಚು ಕೈದಿಗಳ ತಮ್ಮ ಮೇಲೆಯೇ ಹಲ್ಲೆ ಮಾಡಿಕೊಂಡಿದ್ದಾರೆ. ಇದರಲ್ಲಿ 23 ಕೈದಿಗಳು ಗಾಯಗೊಂಡಿದ್ದು, ಜೈಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಓರ್ವ ಕೈದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಟಿಬಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಕೆಲ ದಿನದ ಹಿಂದೆ ಗ್ಯಾಂಗ್ಸ್ಟರ್ ಜಿತೇಂದ್ರ ಗೋಗಿ ಹತ್ಯೆಯಾದ ಬಳಿಕ ಜೈಲಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು. ಕೈದಿಗಳ ನಡುವೆ ಮಾರಾಮಾರಿ ನಡೆಯಬಹುದು ಎಂದು ಈ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿತ್ತು. ಈ ಕಾರಣದಿಂದಲೇ ಕೈದಿಗಳನ್ನು ಅವರ ವಾರ್ಡ್ನಿಂದ ಹೊರ ಬಿಡದೆ ಕಟ್ಟೆಚ್ಚರ ವಹಿಸಿದ್ದರು.