ಕರ್ನಾಟಕ

karnataka

ಕುಟುಂಬ ಯೋಜನೆ ಕಿಟ್‌ನಲ್ಲಿ ರಬ್ಬರ್ ಶಿಶ್ನ : ಬೆಚ್ಚಿಬಿದ್ದ ಆಶಾ ಕಾರ್ಯಕರ್ತೆಯರು

By

Published : Mar 21, 2022, 3:21 PM IST

Updated : Mar 21, 2022, 3:29 PM IST

ಕಿಟ್​​ನಲ್ಲಿ ಪುರುಷರ ಮರ್ಮಾಂಗ ಹೋಲುವ ರಬ್ಬರ್ ನೀಡಿರುವುದು ಬೆಳಕಿಗೆ ಬಂದಿದೆ. ಇದರಿಂದ ಕೆರಳಿದ ಆಶಾ ಕಾರ್ಯಕರ್ತೆಯರು ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ..

ಕುಟುಂಬ ಯೋಜನೆ ಕಿಟ್‌ನಲ್ಲಿ ರಬ್ಬರ್ ಶಿಶ್ನ: ಬೆಚ್ಚಿಬಿದ್ದ ಆಶಾಕಾರ್ಯಕರ್ತೆಯರು
ಕುಟುಂಬ ಯೋಜನೆ ಕಿಟ್‌ನಲ್ಲಿ ರಬ್ಬರ್ ಶಿಶ್ನ: ಬೆಚ್ಚಿಬಿದ್ದ ಆಶಾಕಾರ್ಯಕರ್ತೆಯರು

ಬುಲ್ದಾನ(ಮಹಾರಾಷ್ಟ್ರ): ರಾಜ್ಯ ಸರ್ಕಾರ ಆಶಾ ಕಾರ್ಯಕರ್ತೆಯರಿಗೆ ಕುಟುಂಬ ಯೋಜನೆ ಸಮಾಲೋಚನೆಗಾಗಿ ಕಿಟ್ ಒದಗಿಸಿದೆ. ಆದರೆ, ಇಲ್ಲೊಂದು ಮಹಾ ಯಡವಟ್ಟು ಸಂಭವಿಸಿದ್ದು, ಆಶಾ ಕಾರ್ಯಕರ್ತರು ಗೊಂದಲಕ್ಕೆ ಸಿಲುಕಿದ್ದಾರೆ.

ಈ ಕಿಟ್​​ನಲ್ಲಿ ಪುರುಷರ ಮರ್ಮಾಂಗ ಹೋಲುವ ರಬ್ಬರ್ ನೀಡಿರುವುದು ಬೆಳಕಿಗೆ ಬಂದಿದೆ. ಇದರಿಂದ ಕೆರಳಿದ ಆಶಾ ಕಾರ್ಯಕರ್ತೆಯರು ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕಿಟ್‌ನೊಂದಿಗೆ ಕೌನ್ಸೆಲಿಂಗ್ ಮಾಡುವುದು ಹೇಗೆ? ಎಂಬಂತಹ ಸಂದಿಗ್ಧ ಪರಿಸ್ಥಿತಿ ಆಶಾ ಕಾರ್ಯಕರ್ತೆಯರ ಮುಂದಿದೆ. ಈ ಘಟನೆ ಸಂಬಂಧ ಬಿಜೆಪಿ ನಾಯಕಿ ಚಿತ್ರಾ ವಾಘ್ ಸರ್ಕಾರದ ಗಮನ ಸೆಳೆದಿದ್ದಾರೆ.

ಚಿತ್ರಾ ವಾಘ್ ಟ್ವೀಟ್ ಮಾಡಿದ್ದು, ಇದರಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆಶಾ ಕಾರ್ಯಕರ್ತೆಯರ ಗೌರವಧನದ ವಿಚಾರವನ್ನು ಪ್ರಸ್ತಾಪಿಸಿದ ಚಿತ್ರಾ ವಾಘ್, ಕೊರೊನಾ ಅವಧಿಯಲ್ಲಿ ಆಶಾ ಕಾರ್ಯಕರ್ತೆಯರಿಗೆ ದಿನಕ್ಕೆ 35 ರೂ. ನೀಡಲಾಗುತ್ತಿತ್ತು.

ಆದಾಗ್ಯೂ, ಕೊರೊನಾದ ಮೂರನೇ ಅಲೆಯಲ್ಲಿ ಅವರ ಬಾಕಿಯನ್ನು ಪಾವತಿಸಲಿಲ್ಲ. ಇದರ ನಡುವೆ ಈಗ ಅಂತಹ ವಸ್ತುಗಳನ್ನು ಅವರಿಗೆ ನೀಡಲಾಗುತ್ತಿದೆ. ಸರಕಾರಕ್ಕೆ ನಾಚಿಕೆಯಾಗಬೇಕು. ಕಷ್ಟಪಟ್ಟು ದುಡಿಯುವ ಆಶಾ ಕಾರ್ಯಕರ್ತೆಯರ ಶಾಪ ಎದುರಾಗುತ್ತದೆ ಎಂದು ಹರಿಹಾಯ್ದಿದ್ದಾರೆ.

ಇದನ್ನೂ ಓದಿ: ಬಿಜೆಪಿಗೆ ವೋಟ್​ ಹಾಕಿದ್ದೇ ತಪ್ಪಾಯ್ತು.. ಮಹಿಳೆಗೆ ಥಳಿಸಿ ಮನೆಯಿಂದ ಹೊರಹಾಕಿ, ತ್ರಿವಳಿ ತಲಾಖ್ ಬೆದರಿಕೆ!

ಕೂಲಂಕಷ ತನಿಖೆಗೆ ಆದೇಶ : ಘಟನೆ ಸಂಬಂಧ ಸಚಿವ ರಾಜೇಂದ್ರ ಶಿಂಗಾನೆ ಬುಲ್ದಾನದಲ್ಲಿರುವ ಕುಟುಂಬ ಯೋಜನಾ ಕಿಟ್‌ನಲ್ಲಿನ ಆಕ್ಷೇಪಾರ್ಹ ವಸ್ತುಗಳ ಬಗ್ಗೆ ತನಿಖೆಗೆ ಆದೇಶ ನೀಡಿದ್ದಾರೆ. ಅಲ್ಲದೆ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಇದೊಂದು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಯಾರಾದರೂ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿದರೆ ಅವರನ್ನೇ ಹೊಣೆಗಾರರನ್ನಾಗಿಸಬೇಕು ಎಂದು ಹರಿಹಾಯ್ದರು.

Last Updated : Mar 21, 2022, 3:29 PM IST

For All Latest Updates

TAGGED:

ABOUT THE AUTHOR

...view details