ನವದೆಹಲಿ: ಭಾರತವು ಇಡೀ ಜಗತ್ತಿಗೆ ಮಾದರಿ ಸಮಾಜವಾಗಿ ಹೊರಹೊಮ್ಮುವ ನಿಟ್ಟಿನಲ್ಲಿ ಆರೆಸ್ಸೆಸ್, ಸಮಾಜವನ್ನು ಜಾಗೃತಗೊಳಿಸುವ ಮತ್ತು ಒಗ್ಗೂಡಿಸುವ ಕೆಲಸ ಮಾಡುತ್ತಿದೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಹೇಳಿದರು. ಒಬ್ಬ ವ್ಯಕ್ತಿಯಾಗಿ ಅಲ್ಲದೆ ಜನತೆ ಸಮುದಾಯವಾಗಿ ಸಮಾಜಕ್ಕೆ ಸೇವೆ ಸಲ್ಲಿಸಲು ಮುಂದೆ ಬರಬೇಕು ಎಂದು ಭಾಗವತ್ ಹೇಳಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ದೆಹಲಿ ಘಟಕವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ನಡೆಸುತ್ತಿರುವ ವಿವಿಧ ಕಲ್ಯಾಣ ಚಟುವಟಿಕೆಗಳ ಕುರಿತು ಅವರು ಮಾತನಾಡುತ್ತಿದ್ದರು.
ಸಮಾಜದ ಜಾಗೃತಿ, ಒಗ್ಗಟ್ಟಿಗೆ ಆರೆಸ್ಸೆಸ್ ಕೆಲಸ: ಮೋಹನ್ ಭಾಗವತ್ - ಒಂದು ಸಮಾಜವಾಗಿ ಪ್ರವರ್ಧಮಾನಕ್ಕೆ ಬರಲು ಸಾಕಷ್ಟು ಸಮಯ
ಒಂದು ಸಮುದಾಯವಾಗಿ ಕೆಲಸ ಮಾಡುವಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಿಗೆ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಕರೆ. ಭಾರತೀಯರು ತಾವು ಒಂದು ಸಮಾಜ ಎಂದು ಭಾವಿಸುವುದು ಅವರ ಮೂಲ ಸ್ವಭಾವ ಎಂದ ಭಾಗವತ್.
ಸಂಘವು ಸಮಾಜವನ್ನು ಜಾಗೃತಗೊಳಿಸಲು, ಒಗ್ಗೂಡಿಸಲು ಮತ್ತು ಸಮಾಜವನ್ನು ಒಂದೇ ಘಟಕವಾಗಿ ಹೆಚ್ಚು ಸಂಘಟಿತಗೊಳಿಸಲು ಕೆಲಸ ಮಾಡುತ್ತಿದೆ. ಇದರಿಂದಾಗಿ ಭಾರತವು ಇಡೀ ಜಗತ್ತಿಗೆ ಮಾದರಿ ಸಮಾಜವಾಗಿ ಹೊರಹೊಮ್ಮಲಿದೆ. ಸಮಾಜದ ವಿವಿಧ ವರ್ಗಗಳ ಅನೇಕ ವ್ಯಕ್ತಿಗಳು ದೇಶದ ಸ್ವಾತಂತ್ರ್ಯಕ್ಕೆ ತ್ಯಾಗ ಮಾಡಿದ್ದಾರೆ ಮತ್ತು ಕೊಡುಗೆ ನೀಡಿದ್ದಾರೆ. ಆದರೆ ನಾವು ಒಂದು ಸಮಾಜವಾಗಿ ಪ್ರವರ್ಧಮಾನಕ್ಕೆ ಬರಲು ಸಾಕಷ್ಟು ಸಮಯ ತೆಗೆದುಕೊಂಡಿದೆ ಎಂದು ಭಾಗವತ್ ನುಡಿದರು.
ಭಾರತೀಯರು ತಾವು ಒಂದು ವ್ಯಕ್ತಿಯಾಗಿ ಅಲ್ಲದೆ ಒಂದು ಸಮುದಾಯವಾಗಿ ಭಾವಿಸುವುದು ಅವರ ಮೂಲ ಸ್ವಭಾವ ಮತ್ತು ಆ ಸ್ವಭಾವ ಅವರ ಡಿಎನ್ಎ ಯಲ್ಲಿದೆ. ಸಂಘದ ಸಮಾಜ ಕಲ್ಯಾಣ ಕಾರ್ಯಗಳ ಕುರಿತು ಮಾತನಾಡಿದ ಭಾಗವತ್, ವೈಯಕ್ತಿಕ ಹಿತಾಸಕ್ತಿಗಳ ಬಗ್ಗೆ ಯೋಚಿಸದೆ ಸಮಾಜಕ್ಕಾಗಿ ಕೆಲಸ ಮಾಡಬೇಕೆಂದು ಸಂಘದ ಕಾರ್ಯಕರ್ತರಿಗೆ ಕರೆ ನೀಡಿದರು. ಕಲ್ಯಾಣ ಕಾರ್ಯಗಳನ್ನು ಮಾಡುವಾಗ ನಾನು ಮತ್ತು ನನ್ನದು ಎಂಬುದಕ್ಕಿಂತ ನಮಗೆ ಎಂಬುದಕ್ಕೆ ಆದ್ಯತೆ ನೀಡಬೇಕು ಮತ್ತು ಇದರಿಂದ ನಾವೆಲ್ಲ ಒಂದು ಸಮಾಜವಾಗಿ ವಿಕಸನಗೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ತಿಳಿಸಿದರು.