ಕರ್ನಾಟಕ

karnataka

ETV Bharat / bharat

ಹಳೆ ಪಿಂಚಣಿ ಯೋಜನೆ ಮರು ಜಾರಿಗೆ ಕೇಂದ್ರ ಸರ್ಕಾರಕ್ಕೆ ಆರ್​ಎಸ್​ಎಸ್​ ಸಲಹೆ - ಹಳೆ ಪಿಂಚಣಿ ಯೋಜನೆ ಮರು ಜಾರಿ

ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿ ಮಾಡಲು ಕೇಂದ್ರ ಸರ್ಕಾರವನ್ನು ಆರ್​ಎಸ್​​ಎಸ್​ನ ಅಂಗಸಂಸ್ಥೆಗಳು ಸಲಹೆ ನೀಡಿವೆ. ಇದು ರಾಜಕೀಯವಾಗಿ ಹೆಚ್ಚಿನ ಕುತೂಹಲ ಕೆರಳಿಸಿದೆ.

restore-old-pension-scheme
ಹಳೆ ಪಿಂಚಣಿ ಯೋಜನೆ ಮರು ಜಾರಿ

By

Published : Dec 3, 2022, 1:48 PM IST

ನವದೆಹಲಿ:ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿ ಮಾಡಬೇಕು ಎಂದು ಆರ್​ಎಸ್​ಎಸ್​ನ ಕಾರ್ಮಿಕ ಸಂಘಟನೆಯಾದ ಭಾರತೀಯ ಮಜ್ದೂರ್ ಸಂಘ (ಬಿಎಂಎಸ್​) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ನವೆಂಬರ್ 21 ಮತ್ತು ನವೆಂಬರ್ 29 ರ ನಡುವೆ ನಡೆದ ಸಭೆಯಲ್ಲಿ ಈ ಬೇಡಿಕೆಯನ್ನು ಮಂಡಿಸಲಾಗಿದೆ.

ಕೇಂದ್ರ ಬಜೆಟ್‌ನ ರೂಪುರೇಷೆಗಳನ್ನು ಸಿದ್ಧಪಡಿಸುವ ಸಲುವಾಗಿ ಹಣಕಾಸು ಸಚಿವೆ, ವಿವಿಧ ಸಂಸ್ಥೆಗಳು, ಉದ್ಯಮಿಗಳು ಮತ್ತು ತಜ್ಞರಿಂದ ಚರ್ಚಿಸಿ ಸಲಹೆಗಳನ್ನು ಪಡೆಯುತ್ತಿರುವುದರ ಜೊತೆಗೆ ಕಾರ್ಮಿಕ ಸಂಘಟನೆಗಳಿಂದಲೂ ಸಲಹೆಗಳನ್ನು ಪಡೆಯುತ್ತಿದ್ದ ಸಭೆಯಲ್ಲಿ ಈ ಆಗ್ರಹ ಕೇಳಿಬಂದಿದೆ.

ರೈತರು ಮತ್ತು ಕಾರ್ಮಿಕರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಆರ್‌ಎಸ್‌ಎಸ್‌ಗೆ ಅಂಗ ಸಂಸ್ಥೆಗಳಾದ ಸ್ವದೇಶಿ ಜಾಗರಣ್​ ಮಂಚ್​, ಭಾರತೀಯ ಕಿಸಾನ್​ ಸಂಘ ಹಣಕಾಸು ಸಚಿವರಿಗೆ ಹಲವಾರು ಸಲಹೆಗಳನ್ನು ನೀಡಿವೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ನೀಡಲಾಗುವ ಮೊತ್ತವನ್ನೂ ಹೆಚ್ಚಿಸಲು ಸರ್ಕಾರಕ್ಕೆ ಕೋರಲಾಗಿದೆ.

ಚೀನಾದೊಂದಿಗೆ ನಿರಂತರವಾಗಿ ಹೆಚ್ಚುತ್ತಿರುವ ವ್ಯಾಪಾರ ಬಿಕ್ಕಟ್ಟಿನ ಬಗ್ಗೆ ಕಳವಳ ವ್ಯಕ್ತಪಡಿಸಿದ ಸ್ವದೇಶಿ ಜಾಗರಣ್ ಮಂಚ್, ಆಮದು ಮಾಡಿದ ಸರಕುಗಳ ಮೇಲೆ ಸುಂಕವನ್ನು ಹೆಚ್ಚಿಸಲು ಸೂಚಿಸಿತು. ಕುತೂಹಲಕಾರಿ ವಿಷಯವೆಂದರೆ ಹಳೆಯ ಪಿಂಚಣಿ ಯೋಜನೆಯನ್ನು ಮರುಸ್ಥಾಪನೆ ಮಾಡಲೂ ತಿಳಿಸಿತು. ಕಾಂಗ್ರೆಸ್ ಕೂಡ ಚುನಾವಣಾ ಪ್ರಚಾರದಲ್ಲಿ ಈ ವಿಷಯ ಪ್ರಸ್ತಾಪಿಸಿ ಜನರನ್ನು ಸೆಳೆಯುತ್ತಿರುವುದರ ಬಗ್ಗೆಯೂ ಸಲಹೆ ನೀಡಿತು.

ಜನಪರ ಬಜೆಟ್​ಗೆ ಸೂಚನೆ:2024ರ ಲೋಕಸಭೆ ಚುನಾವಣೆಯಲ್ಲಿ ಹಳೆಯ ಪಿಂಚಣಿಯನ್ನೇ ದಾಳವನ್ನಾಗಿಟ್ಟುಕೊಂಡು ವಿಪಕ್ಷಗಳು ಸಿದ್ಧತೆ ನಡೆಸುತ್ತಿವೆ. ಅವುಗಳು ರಾಜಕೀಯ ಲಾಭ ಪಡೆಯುವ ಮುನ್ನವೇ ಸರ್ಕಾರ ಮರು ಜಾರಿ ಮಾಡಬೇಕು. 2023ರ ಬಜೆಟ್ ಮೋದಿ ನೇತೃತ್ವದ ಸರ್ಕಾರದ ಎರಡನೇ ಅವಧಿಯ ಕೊನೆಯ ಪೂರ್ಣ ಬಜೆಟ್ ಆಗಿದ್ದು, ಜನರಿಗೆ ಹೆಚ್ಚಿನ ಆರ್ಥಿಕ ಅನುಕೂಲ ನೀಡುವ ಬಜೆಟ್ ರೂಪಿಸಲು ಸಲಹೆ ಬಂದಿದೆ.

ಓದಿ:ಮೆಕ್ಯಾನಿಕ್​ ಕೈಚಳಕದಲ್ಲಿ 'ಲಂಬೋರ್ಗಿನಿ'ಯಾದ ಮಾರುತಿ ಸ್ವಿಫ್ಟ್​​.. ಅಸ್ಸೋಂ ಸಿಎಂಗೆ ಗಿಫ್ಟ್​

ABOUT THE AUTHOR

...view details