ಪುಣೆ(ಮಹಾರಾಷ್ಟ್ರ): ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS) ಧರ್ಮದ ಆಧಾರದ ಮೇಲೆ ಯಾವುದೇ ರೀತಿಯ ತಾರತಮ್ಯ ಮಾಡುವುದಿಲ್ಲ. ಮಹಾರಾಷ್ಟ್ರದ ಸಚಿವನಾಗಿದ್ದ ವೇಳೆ ಕೈಗಾರಿಕೋದ್ಯಮಿ ರತನ್ ಟಾಟಾ ಅವರು ಕೇಳಿದ್ದ ಪ್ರಶ್ನೆವೊಂದಕ್ಕೆ ನಾನು ಈ ರೀತಿಯಾಗಿ ಉತ್ತರ ನೀಡಿದ್ದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿಕೊಂಡಿದ್ದಾರೆ.
ಮಹಾರಾಷ್ಟ್ರದ ಪುಣೆ ಬಳಿಯ ಸಿಂಹಗಢ್‌ದಲ್ಲಿ ಚಾರಿಟೇಬಲ್ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿರುವ ನಿತಿನ್ ಗಡ್ಕರಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದಿಗೂ ಧರ್ಮ ಹಾಗೂ ಜಾತಿಯ ಆಧಾರದ ಮೇಲೆ ಜನರನ್ನು ವಿಭಜಿಸುವುದಿಲ್ಲ. ಸಮಾಜದ ಎಲ್ಲಾ ವರ್ಗದ ಜನರ ಸೇವೆ ಮಾಡುವುದೇ ಸಂಘದ ಗುರಿ ಎಂದು ಹೇಳಿದರು. ಈ ವೇಳೆ ತಾವು ಮಹಾರಾಷ್ಟ್ರದ ಸಚಿವರಾಗಿದ್ದ ವೇಳೆ ನಡೆದ ಘಟನೆವೊಂದನ್ನು ಮೆಲುಕು ಹಾಕಿದ್ದಾರೆ.
ರಾಜ್ಯದಲ್ಲಿ ಸಚಿವನಾಗಿದ್ದ ವೇಳೆ ನನ್ನ ಕೋರಿಕೆ ಮೇರೆಗೆ ಉದ್ಯಮಿ ರತನ್ ಟಾಟಾ ಅವರು ಔರಂಗಾಬಾದ್ನಲ್ಲಿ ನಿರ್ಮಾಣಗೊಂಡಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಆಸ್ಪತ್ರೆ ಉದ್ಘಾಟನೆಗೆ ಆಗಮಿಸಿದ್ದರು. ಅದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಆಸ್ಪತ್ರೆಯಾಗಿದ್ದ ಕಾರಣ ಅದು ಹಿಂದೂಗಳಿಗೆ ಮಾತ್ರವೇ? ಎಂದು ನನಗೆ ಪ್ರಶ್ನೆ ಮಾಡಿದ್ದರು. ಈ ರೀತಿಯಾಗಿ ಯಾಕೆ ಪ್ರಶ್ನೆ ಮಾಡ್ತಿದ್ದೀರಿ ಎಂದು ನಾನು ಅವರನ್ನು ಕೇಳಿದೆ. ಅವರು, ಆಸ್ಪತ್ರೆ ಆರ್ಎಸ್ಎಸ್ಗೆ ಸಂಬಂಧಿಸಿದ್ದು ಎಂದು ಹೇಳಿದ್ರು.
ಇದನ್ನೂ ಓದಿ:ಗಂಡ-ಹೆಂಡ್ತಿ ವೈವಾಹಿಕ ಬಿರುಕು: 3 ತಿಂಗಳ ಕಂದಮ್ಮನ ಕೊಂದ ತಾಯಿ
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ನಾನು ಆಸ್ಪತ್ರೆ ಎಲ್ಲರಿಗೂ ನಿರ್ಮಾಣಗೊಂಡಿದೆ. ಇಡೀ ಸಮಾಜಕ್ಕಾಗಿ ಈ ಆಸ್ಪತ್ರೆ ಚಿಕಿತ್ಸೆ ನೀಡಲಿದೆ. ಅಂತಹ ಚಿಂತನೆಗಳನ್ನು ಆರ್‌ಎಸ್‌ಎಸ್ ಕಲಿಸುವುದಿಲ್ಲ ಎಂದು ಹೇಳಿದ್ದೆ ಎಂದಿದ್ದಾರೆ. ಈ ಮಾತು ಕೇಳಿದ ಬಳಿಕ ಅವರು ಬಹಳ ಸಂತೋಷದಿಂದಲೇ ಆಸ್ಪತ್ರೆ ಉದ್ಘಾಟನೆ ಮಾಡಿದ್ರು ಎಂದಿದ್ದಾರೆ. ಕಾರ್ಯಕ್ರಮದಲ್ಲಿ ದೇಶದ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆ ಬಗ್ಗೆ ಮಾತನಾಡಿರುವ ಗಡ್ಕರಿ, ಈ ಎರಡು ಕ್ಷೇತ್ರಗಳಲ್ಲಿ ಅಗತ್ಯವಿರುವ ಸೌಲಭ್ಯ ಲಭ್ಯವಾಗ್ತಿಲ್ಲ. ಗ್ರಾಮೀಣ ಪ್ರದೇಶದ ಪರಿಸ್ಥಿತಿ ಇನ್ನೂ ಭೀಕರವಾಗಿದೆ ಎಂದರು.