ನವದೆಹಲಿ: ಇನ್ಫೋಸಿಸ್ ಸಂಸ್ಥೆಯನ್ನು ಟೀಕಿಸುವ ಲೇಖನಕ್ಕೂ ನಮಗೂ ಸಂಬಂಧ ಇಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಹೇಳಿದೆ. ಕೇಸರಿ ಸಂಸ್ಥೆಗೆ ಸೇರಿದ ಪಾಂಚಜನ್ಯ ಪತ್ರಿಕೆಯಲ್ಲಿ ವಿವಾದಿತ ಲೇಖನ ಪ್ರಕಟಗೊಂಡಿತ್ತು.
ಆರ್‌ಎಸ್‌ಎಸ್‌ನ ಅಖಿಲ ಭಾರತ ಪ್ರಚಾರ ಪ್ರಮುಖರಾದ ಸುನಿಲ್ ಅಂಬೇಕರ್ ಈ ಸಂಬಂಧ ಮಾತನಾಡಿದ್ದು, ಪಾಂಚಜನ್ಯವು ಆರ್‌ಎಸ್‌ಎಸ್‌ನ ಮುಖವಾಣಿಯಾಗಿಲ್ಲ. ಈ ಲೇಖನವು ಲೇಖಕರ ಅಭಿಪ್ರಾಯವನ್ನು ಪ್ರತಿಬಿಂಬಿಸುತ್ತದೆ. ಸಂಘಟನೆಯೊಂದಿಗೆ ಯಾವುದೇ ಸಂಪರ್ಕ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಪ್ರಕಟಗೊಂಡ ಆವೃತ್ತಿಯಲ್ಲಿ, ಇನ್ಫೋಸಿಸ್‌ನ ಬಗ್ಗೆ ನಾಲ್ಕು ಪುಟಗಳ ಕವರ್ ಸ್ಟೋರಿ ಮಾಡಲಾಗಿದ್ದು ಸಂಸ್ಥೆಯ ಸ್ಥಾಪಕ ನಾರಾಯಣ ಮೂರ್ತಿಯವರ ಚಿತ್ರವನ್ನು ಕವರ್ ಪುಟದಲ್ಲಿ ಮುದ್ರಿಸಲಾಗಿದೆ.
ಈ ಲೇಖನವು ಸಂಸ್ಥೆ ಮೇಲೆ ತೀವ್ರವಾದ ದಾಳಿ ಮಾಡಿದೆ. ಈ ಲೇಖನದಲ್ಲಿ 'Unchi Dukan, Phika Pakwaan' (ದೊಡ್ಡ ಕೂಗು ಮತ್ತು ಸ್ವಲ್ಪ ಉಣ್ಣೆ) ಎಂದು ಬರೆದಿದ್ದು, ಇನ್ಫೋಸಿಸ್ "ದೇಶವಿರೋಧಿ" ಶಕ್ತಿಗಳೊಂದಿಗೆ ಹೊಂದಿಕೊಂಡಿದೆ ಎಂಬ ಗಂಭೀರ ಆರೋಪ ಮಾಡಲಾಗಿದೆ. ಆದಾಗ್ಯೂ, ಅಂಬೇಕರ್ ಅವರು ಟ್ವಿಟರ್‌ನಲ್ಲಿ ಸಂಘದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.