ತೂತುಕುಡಿ(ತಮಿಳುನಾಡು):ಕಳೆದ ಆರು ವರ್ಷಗಳಿಂದ ಚುನಾಯಿತ ಸಂಸ್ಥೆ ಮತ್ತು ಮುಕ್ತ ಪತ್ರಿಕಾ ವ್ಯವಸ್ಥೆಗಳ ಮೇಲೆ ವ್ಯವಸ್ಥಿತವಾಗಿ ದಾಳಿ ಮಾಡುವ ಮೂಲಕ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ಎಸ್ಎಸ್) ದೇಶದಲ್ಲಿನ ಸಾಂಸ್ಥಿಕ ಸಮತೋಲನ ಹಾಳುಮಾಡಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.
ಆರ್ಎಸ್ಎಸ್ ವಿರುದ್ಧ ರಾಹುಲ್ ವಾಗ್ದಾಳಿ ತಮಿಳುನಾಡಿನ ತೂತುಕುಡಿಯಲ್ಲಿನ ಕಾಲೇಜ್ನಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ರಾಹುಲ್ ಗಾಂಧಿ, ಒಂದು ರಾಷ್ಟ್ರ ತನ್ನ ಸಂಸ್ಥೆಗಳೊಂದಿಗೆ ಸಮತೋಲನದಲ್ಲಿರಬೇಕು. ಆ ಸಮತೋಲನಕ್ಕೆ ತೊಂದರೆಯಾದರೆ ರಾಷ್ಟ್ರವು ತೊಂದರೆಗೀಡಾಗುತ್ತದೆ. ಚುನಾಯಿತ ಸಂಸ್ಥೆಗಳಾದ ಲೋಕಸಭೆ, ವಿಧಾನಸಭೆ, ಪಂಚಾಯಿತಿಗಳು, ಮುಕ್ತ ಪತ್ರಿಕಾ ವ್ಯವಸ್ಥೆ ಒಟ್ಟಾಗಿ ಕೆಲಸ ಮಾಡುವ ಮೂಲಕ ರಾಷ್ಟ್ರದ ಸಮತೋಲನದಲ್ಲಿಡುತ್ತವೆ.
ಇದನ್ನೂ ಓದಿ: ಕೆಲಸದ ಸ್ಥಳದಲ್ಲಿ ಸಂಗಾತಿ ತೇಜೋವಧೆ ಮಾಡಿದರೆ ವಿಚ್ಛೇದನ ಪಡೆಯಬಹುದು : ಸುಪ್ರೀಂ
ಆದರೆ ಕಳೆದ ಆರು ವರ್ಷಗಳಿಂದ ನಾನು ನೋಡಿದ ಪ್ರಕಾರ ಎಲ್ಲ ವ್ಯವಸ್ಥೆಗಳ ಮೇಲೆ ದಾಳಿಯಾಗಿದೆ. ಪ್ರಜಾಪ್ರಭುತ್ವದ ಅಬ್ಬರ ನಿಧಾನವಾಗಿ ಸಾಯುತ್ತಿದೆ.ಆರ್ಎಸ್ಎಸ್ ಸಾಂಸ್ಥಿಕ ಸಮತೋಲನ ನಾಶ ಮಾಡಿದೆ ಎಂದಿದ್ದಾರೆ. ದೇಶದ್ರೋಹ, ಕಾನೂನಿನ ದುರುಪಯೋಗ, ಜನರ ಕೊಲೆ, ಬೆದರಿಕೆ ಇವೆಲ್ಲವೂ ಇದರ ಲಕ್ಷಣಗಳಾಗಿದ್ದು, ಆರ್ಎಸ್ಎಸ್ ಸಂಘಟನೆಯೊಂದಿಗೆ ಸೇರಿಕೊಂಡಿವೆ ಎಂದು ವೈನಾಡು ಸಂಸದ ಹೇಳಿದ್ದಾರೆ.
ಪ್ರಧಾನ ಮಂತ್ರಿ ಉಪಯುಕ್ತ ಅಥವಾ ನಿಷ್ಪ್ರಯೋಜಕವೇ ಎಂಬ ಪ್ರಶ್ನೆ ಅಲ್ಲ. ಅವರು ಯಾರಿಗೆ ಉಪಯುಕ್ತರು ಎಂಬ ಪ್ರಶ್ನೆ? ಪ್ರಧಾನಿಯಿಂದ ಇಬ್ಬರಿಗೆ ಅತ್ಯಂತ ಉಪಯುಕ್ತವಾಗಿದೆ. ಹಮ್ ದೋ ಹಮಾರಾ ದೋ ಎಂಬ ಘೋಷಣೆ ಅವರಿಗೆ ಸರಿಯಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಏಪ್ರಿಲ್ 6ರಂದು ತಮಿಳುನಾಡಿನ 234 ಕ್ಷೇತ್ರಗಳ ವಿಧಾನಸಭೆ ಚುನಾವಣೆ ಒಂದೇ ಹಂತದಲ್ಲಿ ನಡೆಯಲಿದ್ದು, ಮೇ. 2ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.