ಕರ್ನಾಟಕ

karnataka

ETV Bharat / bharat

'ಅಖಂಡ ಭಾರತ'ದ ಅವಶ್ಯಕತೆ ಪ್ರತಿಪಾದಿಸಿದ ಆರ್​ಎಸ್​ಎಸ್​ ಮುಖ್ಯಸ್ಥ ಭಾಗವತ್

ಇಡೀ ಬ್ರಹ್ಮಾಂಡದ ಕಲ್ಯಾಣಕ್ಕಾಗಿ ಅದ್ಭುತವಾದ ಅಖಂಡ ಭಾರತದ ಅವಶ್ಯಕತೆಯಿದೆ. ಅದಕ್ಕಾಗಿಯೇ ದೇಶಪ್ರೇಮ ಜಾಗೃತಗೊಳಿಸುವ ಅವಶ್ಯಕತೆಯಿದೆ. ಭಾರತವು ಮತ್ತೆ ಒಗ್ಗೂಡಬೇಕಾದ ಅವಶ್ಯಕತೆಯಿದೆ. ಎಲ್ಲ ವಿಭಜಿತ ಭಾಗಗಳು ಮತ್ತೊಮ್ಮೆ ಭಾರತಕ್ಕೆ ಸೇರುವ ಅಗತ್ಯವಿದೆ ಎಂದು ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.

mohan bhagavath
mohan bhagavath

By

Published : Feb 25, 2021, 7:25 PM IST

ಹೈದರಾಬಾದ್:'ಅಖಂಡ ಭಾರತ' (ಅವಿಭಜಿತ ಭಾರತ)ದ ಅಗತ್ಯತೆಯನ್ನು ಪ್ರತಿಪಾದಿಸಿದ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್, ಭಾರತದಿಂದ ದೂರವಾದ ಪಾಕಿಸ್ತಾನದಂತಹ ದೇಶಗಳು ಈಗ ಸಂಕಷ್ಟದಲ್ಲಿದೆ ಎಂದು ಹೇಳಿದರು.

'ವಿಶ್ವ ಭಾರತಮ್' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಭಾಗವತ್, ಅಖಂಡ ಭಾರತ ಹಿಂದೂ ಧರ್ಮದ ಮೂಲಕ ಮಾತ್ರ ಸಾಧ್ಯ ಎಂದರು.

ಇಡೀ ಬ್ರಹ್ಮಾಂಡದ ಕಲ್ಯಾಣಕ್ಕಾಗಿ ಅದ್ಭುತವಾದ ಅಖಂಡ ಭಾರತದ ಅವಶ್ಯಕತೆಯಿದೆ. ಅದಕ್ಕಾಗಿಯೇ ದೇಶಪ್ರೇಮ ಜಾಗೃತಗೊಳಿಸುವ ಅವಶ್ಯಕತೆಯಿದೆ. ಭಾರತವು ಮತ್ತೆ ಒಗ್ಗೂಡಬೇಕಾದ ಅವಶ್ಯಕತೆಯಿದೆ. ಎಲ್ಲ ವಿಭಜಿತ ಭಾಗಗಳು ಮತ್ತೊಮ್ಮೆ ಭಾರತಕ್ಕೆ ಸೇರುವ ಅಗತ್ಯವಿದೆ ಎಂದು ಅವರು ಹೇಳಿದರು.

ಭಾರತದಿಂದ ವಿಭಜನೆಯಾಗಿರುವ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದಲ್ಲಿ ಎಂದದರೂ ಶಾಂತಿ ನೆಲೆಸಿದೆಯೇ ಎಂದು ಅವರು ಪ್ರಶ್ನಿಸಿದರು.

'ವಸುದೈವ ಕುಟುಂಬಕಂ' (ಜಗತ್ತೇ ಒಂದು ಕುಟುಂಬ) ನಂಬಿಕೆಯೊಂದಿಗೆ, ಭಾರತವು ಮತ್ತೆ ಜಗತ್ತಿಗೆ ಸಂತೋಷ ಮತ್ತು ಶಾಂತಿಯನ್ನು ನೀಡಬಲ್ಲದು ಎಂದು ಅವರು ಹೇಳಿದರು.

ABOUT THE AUTHOR

...view details