ಕರ್ನಾಟಕ

karnataka

ETV Bharat / bharat

RSS - BJPಯಿಂದ ಕಾಶ್ಮೀರದ ಸಂಯೋಜಿತ ಸಂಸ್ಕೃತಿ ಒಡೆಯಲು ಯತ್ನ: ರಾಹುಲ್ ಗಾಂಧಿ

ಜಮ್ಮು-ಕಾಶ್ಮೀರ ಪ್ರವಾಸ ಕೈಗೊಂಡಿರುವ ರಾಹುಲ್ ಗಾಂಧಿ, ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಹುಲ್ ಗಾಂಧಿ
ರಾಹುಲ್ ಗಾಂಧಿ

By

Published : Sep 11, 2021, 12:40 PM IST

ಜಮ್ಮು-ಕಾಶ್ಮೀರ: ಬಿಜೆಪಿ ಮತ್ತು ಆರ್​​ಎಸ್​ಎಸ್​​ ಕಾಶ್ಮೀರದ ಸಂಯೋಜಿತ ಸಂಸ್ಕೃತಿಯನ್ನು ಮುರಿಯಲು ಯತ್ನಿಸುತ್ತಿವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಸಂಸ್ಕೃತಿ ಮುರಿಯಲು ಬಿಜೆಪಿ - ಆರ್​ಎಸ್​ಎಸ್​ ಯತ್ನ

ಎರಡು ದಿನಗಳ ಕಾಲ ಕೇಂದ್ರಾಡಳಿತ ಪ್ರದೇಶದ ಪ್ರವಾಸದಲ್ಲಿದ್ದ ರಾಹುಲ್ ಗಾಂಧಿ ನಿನ್ನೆ ಅಲ್ಲಿನ ಸ್ಥಳೀಯರನ್ನುದ್ದೇಶಿಸಿ ಮಾತನಾಡಿದರು. ನಿಮ್ಮೆಲ್ಲರ ನಡುವೆ ಪ್ರೀತಿ, ಸಹೋದರತ್ವ ಮತ್ತು ಸಮ್ಮಿಶ್ರ ಸಂಸ್ಕೃತಿಯ ಭಾವನೆ ಇದೆ. ಈ ಸಂಸ್ಕೃತಿಯನ್ನು ಮುರಿಯಲು ಆರ್‌ಎಸ್‌ಎಸ್ ಮತ್ತು ಬಿಜೆಪಿ ಪ್ರಯತ್ನಿಸುತ್ತಿರುವುದಕ್ಕೆ ನನಗೆ ಬೇಸರವಿದೆ ಎಂದರು.

ನಿಮ್ಮ ಪ್ರೀತಿ, ಸಹೋದರತ್ವದ ಮೇಲೆ ದಾಳಿ ಮಾಡುವ ಮೂಲಕ ಬಿಜೆಪಿ - ಆರ್​ಎಸ್​ಎಸ್​​ ನಿಮ್ಮ ರಾಜ್ಯತ್ವವನ್ನು ಕಿತ್ತುಕೊಂಡರು. ಇದರಿಂದಾಗಿ ಆರ್ಥಿಕತೆ, ಪ್ರವಾಸೋದ್ಯಮ ಮತ್ತು ವ್ಯವಹಾರಗಳು ಹೇಗೆ ನೆಲಕಚ್ಚಿವೆ ಅನ್ನೋದನ್ನು ನೀವು ಈಗಾಗಲೇ ನೋಡಿದ್ದೀರಿ ಎಂದು ಹೇಳಿದರು.

ಮೂರು ಸಂಕೇತಗಳ ವೈಶಿಷ್ಟ್ಯ

ನಾನು ಗುರುವಾರ ಮಾತಾ ವೈಷ್ಣೋದೇವಿ ದೇಗುಲಕ್ಕೆ ಹೋಗಿದ್ದೆ. ಅಲ್ಲಿ ಮೂರು ಸಂಕೇತಗಳಿವೆ. ಮಾತಾ ದುರ್ಗಾ, ಮಾತಾ ಲಕ್ಷ್ಮಿ ಮತ್ತು ಮಾತಾ ಸರಸ್ವತಿ ಇವೆ. ಇಲ್ಲಿ ದುರ್ಗಾದೇವಿ ರಕ್ಷಿಸುವ ಶಕ್ತಿಯನ್ನು ಸಂಕೇತಿಸುತ್ತದೆ. ಲಕ್ಷ್ಮಿ ದೇವಿಯು ಸಾಧಿಸುವ ಶಕ್ತಿಯನ್ನು ನೀಡುತ್ತದೆ. ಸರಸ್ವತಿ ದೇವಿಯು ಶಿಕ್ಷಣ ಮತ್ತು ಜ್ಞಾನವನ್ನು ಸೂಚಿಸುತ್ತದೆ ಎಂದು ಹೇಳಿದರು.

ಬಿಜೆಪಿ ವಿರುದ್ಧ ಕುಟುಕಿದ ರಾಗಾ

ಆದರೆ, ನೋಟು ರದ್ಧತಿ, ಕೃಷಿ ಕಾನೂನುಗಳು ಮತ್ತು ಸರಕು ಮತ್ತು ಸೇವಾ ತೆರಿಗೆಯಂತಹ ನಿರ್ಧಾರಗಳು ದುರ್ಗಾದೇವಿಯ ಬಲವನ್ನು ಹೇಗೆ ಕುಗ್ಗಿಸಿದವು ಎಂಬುದನ್ನು ನಾವು ನೋಡಿದ್ದೇವೆ. ದೇಶದ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಆರ್‌ಎಸ್‌ಎಸ್-ಸಂಬಂಧಿತ ಜನರ ನೇಮಕಾತಿ ಹೇಗೆ ಸರಸ್ವತಿ ದೇವಿಯನ್ನು ಋಣಾತ್ಮಕವಾಗಿ ಪ್ರಭಾವಿಸಿದೆ ಅನ್ನೋದು ಎಲ್ಲರಿಗೂ ತಿಳಿದಿರುವ ಸಂಗತಿ ಎಂದರು.

ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳು ಮತ್ತು ನಿರ್ಧಾರಗಳು ದೇವತೆಗಳ ಶಕ್ತಿಯನ್ನು ಕುಗ್ಗಿಸಿವೆ. ಈ ಮೂರು ಶಕ್ತಿಗಳು ದೇಶದಲ್ಲಿದ್ದಾಗ ದೇಶವು ಪ್ರಗತಿ ಸಾಧಿಸುತ್ತವೆ ಎಂದು ಹೇಳಿದ್ದಾರೆ.

‘ಕೈ’ ಧೈರ್ಯದ ಸಂಕೇತ

ಕಾಂಗ್ರೆಸ್ ಚಿಹ್ನೆಯಾದ ಕೈಯನ್ನು ತೋರಿಸಿ ಶಿವ ಮತ್ತು ಗುರು ನಾನಕ್​ನೊಂದಿಗೆ ಹೋಲಿಕೆ ಮಾಡಿದರು. ‘ಕೈ’ ಇದು ನೀವು ಯಾವುದಕ್ಕೂ ಹೆದರಬಾರದು ಎಂಬುದರ ಸಂಕೇತ. ಬಿಜೆಪಿ ಎಲ್ಲದ್ದಕ್ಕೂ ಹೆದರುತ್ತದೆ ಎಂದು ಕೇಸರಿ ಪಡೆ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಜಮ್ಮು-ಕಾಶ್ಮೀರದ ಆತಂಕಕಾರಿ ಸಮಸ್ಯೆಗಳಿಗೆ ‘ಗಾಂಧಿ ಕುಟುಂಬದ ಪರಂಪರೆಯೇ ಕಾರಣ’ : BJP

ಕಣಿವೆ ರಾಜ್ಯ ಸಂಯುಕ್ತ ಸಂಸ್ಕೃತಿಯ ಸಂಕೇತ

ಜಮ್ಮು ಮತ್ತು ಕಾಶ್ಮೀರ ಸಂಯುಕ್ತ ಸಂಸ್ಕೃತಿಯ ಸಂಕೇತ ಎಂದು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಹೇಳಿದ್ದಾರೆ. ಬಿಜೆಪಿ ಸರ್ಕಾರದ ಅಭಿವೃದ್ಧಿ ಹೇಳಿಕೆಗಳು ಆಧಾರ ರಹಿತ ಎಂದು ಹೇಳಿದರು. ಮೋದಿ ಸರ್ಕಾರ ತೆಗೆದುಕೊಂಡ ನಿರ್ಧಾರದಿಂದ ಆರ್ಥಿಕತೆ ನೆಲ ಕಚ್ಚಿದ್ದು, ನಿರುದ್ಯೋಗ ಹೆಚ್ಚಾಗಿದೆ. ಜನರಿಗೆ ಇಲ್ಲಿ ಮೂಲ ಸೌಕರ್ಯಗಳೂ ಇಲ್ಲ ಎಂದು ಆರೋಪಿಸಿದರು.

ABOUT THE AUTHOR

...view details