ರಾಣಿಪೇಟೆ(ತಮಿಳುನಾಡು): ಜಿಲ್ಲೆಯ ಪೆರುಂಗಲತೂರು ಪ್ರದೇಶದ ಖಾಸಗಿ ಬ್ಯಾಂಕ್ ಎಟಿಎಂನಲ್ಲಿ ದುಷ್ಕರ್ಮಿಗಳು ನಾಲ್ಕೂವರೆ ಲಕ್ಷ ರೂಪಾಯಿ ದರೋಡೆ ಮಾಡಿದ್ದಾರೆ. ಸೆಪ್ಟೆಂಬರ್ 16 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಎಟಿಎಂಗೆ ಯಾವುದೇ ಭದ್ರತಾ ಸಿಬ್ಬಂದಿಯನ್ನು ನೇಮಿಸಿಲ್ಲ ಹಾಗೂ ಸಿಸಿಟಿವಿ ಕೂಡಾ ಅಳವಡಿಸಿಲ್ಲ ಎಂದು ತಿಳಿದು ಬಂದಿದೆ. ಖದೀಮರು, ವೆಲ್ಡಿಂಗ್ ಕಟರ್ಗಳನ್ನು ಬಳಸಿ ಮಷಿನ್ ಕತ್ತರಿಸಿ ಹಣ ಹೊತ್ತೊಯ್ದಿದ್ದಾರೆ.