ಕರ್ನಾಟಕ

karnataka

ETV Bharat / bharat

10 ಸಾವಿರ ಪಿಂಚಣಿ ಹಣ ಪಡೆಯಲು ಬಂದಿದ್ದ ವೃದ್ಧನ ಬ್ಯಾಂಕ್‌ ಖಾತೆಯಲ್ಲಿತ್ತು 75 ಕೋಟಿ ರೂಪಾಯಿ! - ಸೆಂಟ್ರಲ್​ ಬ್ಯಾಂಕ್​ ಆಫ್​ ಇಂಡಿಯಾ ಜಾರ್ಖಂಡ್

ವೃದ್ಧನ ಬ್ಯಾಂಕ್​ ಖಾತೆಗೆ 75 ಕೋಟಿ ರೂಪಾಯಿ ಹಣ ಜಮೆಯಾಗಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ಅನೇಕರು ಹುಬ್ಬೇರಿಸಿದ್ದಾರೆ. ಈ ಘಟನೆ ಜಾರ್ಖಂಡ್​ನ ದಮ್ಕಾದಲ್ಲಿ ನಡೆದಿದ್ದು, ಬ್ಯಾಂಕ್‌ ತನಿಖೆಗೆ ಮುಂದಾಗಿದೆ.

roopsagar village in dumka district of jharkhand
roopsagar village in dumka district of jharkhand

By

Published : Jan 12, 2022, 4:49 PM IST

ದುಮ್ಕಾ(ಜಾರ್ಖಂಡ್​​​):ತನ್ನಬ್ಯಾಂಕ್​ ಖಾತೆಯಿಂದ 10 ಸಾವಿರ ರೂ. ಹಣ ಡ್ರಾ ಮಾಡಿಕೊಳ್ಳಲು ತೆರಳಿದ್ದ ವೃದ್ಧನೋರ್ವ ದಿಢೀರ್​ ಶಾಕ್​ ಆಗಿದ್ದಾನೆ. ಏಕೆಂದರೆ, ಆತನ ಅಕೌಂಟ್‌ಗೆ 75 ಕೋಟಿ ರೂಪಾಯಿ ಜಮೆಯಾಗಿತ್ತು!.

ಜಾರ್ಖಂಡ್​ನ ದುಮ್ಕಾದಲ್ಲಿ ಈ ಘಟನೆ ನಡೆದಿದೆ. 60 ವರ್ಷದ ಫುಲೋ ರೈ ಎಂಬವರು ಹತ್ತು ಸಾವಿರ ರೂಪಾಯಿ ಪಡೆದುಕೊಳ್ಳಲು ಸೆಂಟ್ರಲ್​ ಬ್ಯಾಂಕ್​ ಆಫ್​ ಇಂಡಿಯಾದ ಗ್ರಾಹಕ ಸೇವಾ ಕೇಂದ್ರಕ್ಕೆ ಭೇಟಿ ನೀಡಿದ್ದರು. ಹಣ ಪಡೆದುಕೊಂಡ ಬಳಿಕ ತಮ್ಮ ಅಕೌಂಟ್​​ನಲ್ಲಿ ಉಳಿದ ಹಣದ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ಅಕೌಂಟ್​​ನಲ್ಲಿ 75,28,68,870 ರೂ ಇರುವುದು ಗೊತ್ತಾಗಿದೆ.

ಇದನ್ನೂ ಓದಿ:ಯುಪಿಯಲ್ಲಿ ಬಿಜೆಪಿಗೆ ಮತ್ತೊಂದು ಶಾಕ್: ಸಚಿವ ದಾರಾ ಸಿಂಗ್​ ಚೌಹಾಣ್​ ರಾಜೀನಾಮೆ

ಫುಲೋ ರೈ ಅವರು ಸೆಂಟ್ರಲ್​ ಬ್ಯಾಂಕ್​ ಆಫ್ ಇಂಡಿಯಾ ರೈಕಿನರಿ ಶಾಲೆಯಲ್ಲಿ ಬ್ಯಾಂಕ್​ ಖಾತೆ ಹೊಂದಿದ್ದಾರೆ. ಇವರು ದುಮ್ಕಾದ ಬೆಲ್ದಾರ್​ ಗ್ರಾಮದಲ್ಲಿನ ಸಿಎಸ್​ಪಿ ಕೇಂದ್ರಕ್ಕೆ ತಮ್ಮ ಪಿಂಚಣಿ ಹಣ ಬಂದಿರುವ ಬಗ್ಗೆ ವಿಚಾರಿಸಿ, ಹಣ ಡ್ರಾ ಮಾಡಲು ತೆರಳಿದ್ದರು. ಈ ವೇಳೆ ಇಷ್ಟೊಂದು ಹಣ ಅವರ ಅಕೌಂಟ್​ನಲ್ಲಿರುವುದು ತಿಳಿದುಬಂದಿದೆ.

ಈ ಕುರಿತಂದೆ ಸೆಂಟ್ರಲ್​ ಬ್ಯಾಂಕ್​ ಆಫ್​ ಇಂಡಿಯಾದ ಮ್ಯಾನೇಜರ್​ ಪ್ರವೀರ್​ ಚಂದ್ರ ಘೋಷ್​ ಮಾತನಾಡಿದ್ದು, 'ಕಳೆದ ಕೆಲ ವರ್ಷಗಳಿಂದ ಯಾವುದೇ ರೀತಿಯ ವಹಿವಾಟು ನಡೆಯದ ಕಾರಣ ಫುಲೋ ರೈ ಅವರ ಬ್ಯಾಂಕ್ ಖಾತೆ ನಿಷ್ಕ್ರಿಯವಾಗಿದೆ. ಬ್ಯಾಂಕ್ ಖಾತೆಗೆ ಇಷ್ಟೊಂದು ಹಣ ಹೇಗೆ ಜಮಾವಣೆಗೊಂಡಿದೆ ಎಂಬುದರ ಕುರಿತು ತನಿಖೆ ನಡೆಸಲಾಗುವುದು' ಎಂದು ತಿಳಿಸಿದರು.

ABOUT THE AUTHOR

...view details