ನವದೆಹಲಿ: ತೆಲಂಗಾಣದ ಮುಲುಗು ಜಿಲ್ಲೆಯ NH-163 ರ ಹೈದರಾಬಾದ್-ಭೂಪಾಲಪಟ್ಟಣಂ ಪ್ರದೇಶದ ದ್ವಿಪಥದ ರಸ್ತೆಯನ್ನು ಚತುಷ್ಪಥಕ್ಕೆ ವಿಸ್ತರಿಸಲು ಒಟ್ಟು ರೂ. 136.22 ಕೋಟಿ. ವೆಚ್ಚವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಗುರುವಾರ ಹೇಳಿದರು.
ತೆಲಂಗಾಣ ಮತ್ತು ಆಂಧ್ರಪ್ರದೇಶದ ನಾಗರ್‌ಕರ್ನೂಲ್ ಜಿಲ್ಲೆಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿರುವ ಕಟ್ಟಿರುವ ಸೇತುವೆಯ ಮಾರ್ಗಗಳ ನವೀಕರಣಕ್ಕೆ 436.91 ಕೋಟಿ ರೂಪಾಯಿಯನ್ನು ಅನುಮೋದಿಸಲಾಗಿದೆ ಎಂದು ಗಡ್ಕರಿ ಹೇಳಿದರು. ಈ ಯೋಜನೆಯು ಪ್ರವಾಸಿ ತಾಣಗಳ ಜೊತೆ ಲಕ್ನವರಂ ಸರೋವರ ಮತ್ತು ಬೊಗೊಥಾ ಜಲಪಾತಗಳನ್ನು ಸಂಧಿಸುತ್ತದೆ. ಅಲ್ಲದೆ ರಸ್ತೆ ವಿಸ್ತರಣೆಯಿಂದ ತೆಲಂಗಾಣ ಮತ್ತು ಛತ್ತೀಸ್‌ಗಡದ ನಡುವೆ ಸಂಪರ್ಕವಾಗಲಿದೆ. ಇದೆಲ್ಲದಕ್ಕಿಂಥ ಮುಖ್ಯವಾಗಿ ಎಡಪಂಥೀಯ ಉಗ್ರ ಪೀಡಿತ ಜಿಲ್ಲೆ ಮುಳುಗು ಜಿಲ್ಲೆಯಲ್ಲಿ ನಿಯಂತ್ರಣ ಸಾಧಿಸಲು ಸಾಧ್ಯವಾಗುತ್ತದೆ ಎಂಬುದು ಸಚಿವರ ಅಭಿಪ್ರಾಯ.