ಹೈದರಾಬಾದ್ :ಕೇಂದ್ರ ಸರ್ಕಾರ(Central Government) ಜಾರಿಗೊಳಿಸಿದ್ದ ವಿವಾದಿತ ಮೂರು ಕೃಷಿ ಕಾಯ್ದೆ(farm law) ವಿರುದ್ಧ ಕಳೆದ ಒಂದು ವರ್ಷದಿಂದ ಅನ್ನದಾತರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಕೊನೆಗೂ ತಮ್ಮ ಹೋರಾಟದಲ್ಲಿ ಗೆಲುವು ಕಂಡಿದ್ದಾರೆ. ಆದರೆ, ಈ ವೇಳೆ ಸುಮಾರು 750ಕ್ಕೂ ಅಧಿಕ ರೈತರು ತಮ್ಮ ಪ್ರಾಣ ಕಳೆದುಕೊಂಡಿದ್ದಾಗಿ ತಿಳಿದು ಬಂದಿದೆ.
ನಿನ್ನೆ ಕೇಂದ್ರ ಸರ್ಕಾರ ದಿಢೀರ್ ಆಗಿ ವಿವಾದಿತ ಕೃಷಿ ಕಾಯ್ದೆ ವಾಪಸ್(repeal of farm laws) ಪಡೆದುಕೊಳ್ಳುವುದಾಗಿ ಘೋಷಣೆ ಮಾಡಿದ್ದು, ಈ ವೇಳೆ ರೈತ ಹೋರಾಟದ ವೇಳೆ ಮೃತರಾಗಿರುವ ಅನ್ನದಾತರಿಗೆ ಪರಿಹಾರ ನೀಡುವಂತೆ ದೊಡ್ಡ ಮಟ್ಟದ ಕೂಗು ಕೇಳಿ ಬರಲು ಶುರುವಾಗಿದೆ.
ಇದೀಗ ತೆಲಂಗಾಣ ಸರ್ಕಾರ ಕೃಷಿ ಕಾಯ್ದೆ ವಿರುದ್ಧದ ಹೋರಾಟದಲ್ಲಿ ಸಾವನ್ನಪ್ಪಿರುವ 750 ರೈತ ಕುಟುಂಬಕ್ಕೆ 3 ಲಕ್ಷ ರೂ. ಪರಿಹಾರ(RS 3 lakha compensation) ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಕೆಟಿಆರ್(Minister KTR) ಟ್ವೀಟ್ ಮಾಡಿದ್ದಾರೆ.