ತೂತುಕುಡಿ(ತಮಿಳು ನಾಡು): ತೂತುಕುಡಿ ಜಿಲ್ಲೆಯ ತಿರುಚೆಂದೂರು ಬಳಿ ಕಾರಿನಲ್ಲಿ ದುಬಾರಿ ಬೆಲೆಯ ವಸ್ತುಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಕುಲಶೇಖರಪಟ್ಟಣಂ ಪೊಲೀಸರು ಎಬೆಂಕುಡಿ ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದರು.
ಅಲ್ಲಿಗೆ ಬಂದ ಕಾರನ್ನು ಅಡ್ಡಗಟ್ಟಿ ತಪಾಸಣೆ ನಡೆಸಿದಾಗ ಮೂರು ಪ್ಲಾಸ್ಟಿಕ್ ಕವರ್ ಗಳಲ್ಲಿದ್ದ ತಿಮಿಂಗಿಲದ ವಾಂತಿ(ಅಂಬರ್ ಗ್ರಿಸ್) ಎಂಬುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ತಿಮಿಂಗಿಲದ ವಾಂತಿಯನ್ನು ಜಪ್ತಿ ಮಾಡಿದ್ದಾರೆ. ವಿರುದುನಗರ ಜಿಲ್ಲೆಯ ತಂಗಪಾಂಡಿ, ಧರ್ಮರಾಜ್, ಕಿಂಗ್ಸ್ಲಿ, ಮೋಹನ್, ತೂತುಕುಡಿ ಜಿಲ್ಲೆಯ ರಾಜನ್ ಹಾಗೂ ಕಾರಿನಲ್ಲಿ ಬಂದ ಚಾಲಕ ಕರುಪ್ಪಸ್ವಾಮಿ ಸೇರಿದಂತೆ 6 ಮಂದಿಯನ್ನು ಬಂಧಿಸಿ ಕುಲಶೇಖರಪಟ್ಟಣಂ ಠಾಣೆಯಲ್ಲಿ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.