ಕರ್ನಾಟಕ

karnataka

ETV Bharat / bharat

2 ಸಾವಿರ ರೂ. ಮುಖಬೆಲೆಯ ಶೇ 97ರಷ್ಟು ನೋಟು ವಾಪಸ್: ಆರ್​ಬಿಐ

Rs 2,000 banknotes: ಚಲಾವಣೆಯಲ್ಲಿದ್ದ ಶೇ 97ರಷ್ಟು 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳು ವಾಪಸ್ ಬಂದಿವೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ.

Over 97% of Rs 2,000 banknotes have been returned: RBI
Over 97% of Rs 2,000 banknotes have been returned: RBI

By ETV Bharat Karnataka Team

Published : Dec 1, 2023, 2:15 PM IST

ಮುಂಬೈ: ಚಲಾವಣೆಯಲ್ಲಿರುವ 2 ಸಾವಿರ ರೂಪಾಯಿ ನೋಟುಗಳ ಒಟ್ಟು ಮೌಲ್ಯ ನವೆಂಬರ್ 30, 2023ರ ವಹಿವಾಟಿನ ಅಂತ್ಯದ ವೇಳೆಗೆ 9,760 ಕೋಟಿ ರೂ.ಗೆ ಇಳಿದಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ಶುಕ್ರವಾರ ಪ್ರಕಟಿಸಿದೆ. ಅಂದರೆ ಮೇ 19, 2023 ರ ವೇಳೆಗೆ ಚಲಾವಣೆಯಲ್ಲಿದ್ದ 2,000 ರೂ.ಗಳ ನೋಟುಗಳ ಪೈಕಿ ಶೇಕಡಾ 97.26 ರಷ್ಟು ನೋಟುಗಳು ಹಿಂತಿರುಗಿವೆ. ನೋಟು ಹಿಂಪಡೆಯುವಿಕೆಯನ್ನು ಘೋಷಿಸಿದಾಗ ಮಾರುಕಟ್ಟೆಯಲ್ಲಿ 3.56 ಲಕ್ಷ ಕೋಟಿ ರೂ. ಮೌಲ್ಯದ 2 ಸಾವಿರ ರೂಪಾಯಿ ನೋಟುಗಳು ಚಲಾವಣೆಯಲ್ಲಿದ್ದವು.

2 ಸಾವಿರ ರೂ.ಗಳ ನೋಟುಗಳ ಠೇವಣಿ ಅಥವಾ ವಿನಿಮಯದ ಸೌಲಭ್ಯ ಆರಂಭದಲ್ಲಿ ಸೆಪ್ಟೆಂಬರ್ 30ರವರೆಗೆ ದೇಶದ ಎಲ್ಲಾ ಬ್ಯಾಂಕ್ ಶಾಖೆಗಳಲ್ಲಿ ಲಭ್ಯವಿತ್ತು. ನಂತರ ಅದನ್ನು ಅಕ್ಟೋಬರ್ 7 ರವರೆಗೆ ವಿಸ್ತರಿಸಲಾಯಿತು. ಆರ್​ಬಿಐನ 19 ವಿತರಣಾ ಕಚೇರಿಗಳಲ್ಲಿಯೂ 2 ಸಾವಿರ ರೂ. ನೋಟುಗಳ ವಿನಿಮಯ ಸೌಲಭ್ಯವಿದೆ. 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಕೌಂಟರ್​ಗಳಲ್ಲಿ ವಿನಿಮಯ ಮಾಡಿಕೊಳ್ಳುವುದರ ಜೊತೆಗೆ, ಆರ್​ಬಿಐ ಕಚೇರಿಗಳು ಗ್ರಾಹಕರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲು ವ್ಯಕ್ತಿಗಳು / ಸಂಸ್ಥೆಗಳಿಂದ 2 ಸಾವಿರ ರೂ.ಗಳ ನೋಟುಗಳನ್ನು ಸ್ವೀಕರಿಸುತ್ತಿವೆ.

ದೇಶದ ಸಾರ್ವಜನಿಕರು 2 ಸಾವಿರ ರೂ.ಗಳ ನೋಟುಗಳನ್ನು ದೇಶದ ಯಾವುದೇ ಅಂಚೆ ಕಚೇರಿಯಿಂದ ಇಂಡಿಯಾ ಪೋಸ್ಟ್ ಮೂಲಕ ಭಾರತದಲ್ಲಿನ ತಮ್ಮ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲು ಯಾವುದೇ ಆರ್​ಬಿಐ ವಿತರಣಾ ಕಚೇರಿಗಳಿಗೆ ಕಳುಹಿಸಬಹುದು. ಆದಾಗ್ಯೂ 2 ಸಾವಿರ ರೂ. ನೋಟುಗಳು ಈಗಲೂ ಕಾನೂನುಬದ್ಧವಾಗಿಯೇ ಇವೆ.

2 ಸಾವಿರ ನೋಟು ವಿನಿಮಯಕ್ಕೆ ಬೇಕಾದ ದಾಖಲೆಗಳು: ಈ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅಥವಾ ಠೇವಣಿ ಮಾಡಲು, ಪ್ಯಾನ್, ಆಧಾರ್ ಅಥವಾ ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿಯಿರಿ) ಗಾಗಿ ಡ್ರೈವಿಂಗ್ ಲೈಸೆನ್ಸ್ ನಂತಹ ಗುರುತಿನ ದಾಖಲೆಗಳು ಬೇಕಾಗುತ್ತವೆ. 2 ಸಾವಿರ ರೂ.ಗಳ ನೋಟುಗಳನ್ನು ಬ್ಯಾಂಕುಗಳಲ್ಲಿ ವಿನಿಮಯ ಮಾಡುವ ಅಥವಾ ಠೇವಣಿ ಇಡುವ ಗಡುವು ಮುಗಿದಿದ್ದರೂ, ಅವು ಇನ್ನೂ ಮೌಲ್ಯ ಹೊಂದಿವೆ. ಆದಾಗ್ಯೂ ಆರ್​ಬಿಐ ತನ್ನ ಪ್ರಾದೇಶಿಕ ಕಚೇರಿಗಳಲ್ಲಿ 2 ಸಾವಿರ ರೂ.ಗಳ ನೋಟುಗಳನ್ನು ವಿನಿಮಯ ಮಾಡಲು ಅಥವಾ ಠೇವಣಿ ಇಡಲು ಗಡುವನ್ನು ನಿರ್ದಿಷ್ಟಪಡಿಸಿಲ್ಲ. ಈ ಸೌಲಭ್ಯವು ಮುಂದಿನ ಸೂಚನೆಯವರೆಗೆ ಲಭ್ಯವಿರುತ್ತದೆ.

ಇದನ್ನೂ ಓದಿ: ಭಾರತದ 5G ಮೊಬೈಲ್ ಸಂಪರ್ಕಗಳ ಸಂಖ್ಯೆ 130 ಮಿಲಿಯನ್​ಗೆ ತಲುಪುವ ಅಂದಾಜು

ABOUT THE AUTHOR

...view details