ಮುಂಬೈ:ದೇಶದ ಪ್ರಮುಖ ಕಾರು ತಯಾರಿಕಾ ಕಂಪನಿಗಳಲ್ಲಿ ಒಂದಾಗಿರುವ ಮಾರುತಿ ಸುಜುಕಿಗೆ ಇದೀಗ 200 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ. ಭಾರತದ ಸ್ಪರ್ಧಾ ಆಯೋಗ(CCI) ಈ ಕ್ರಮ ಕೈಗೊಂಡಿದೆ.
ಗ್ರಾಹಕರಿಗೆ ನೀಡಬಹುದಾಗಿರುವ ರಿಯಾಯತಿ ಮೀರಿ ಕೆಲವೊಂದು ನೀತಿ ಕೈಗೊಂಡಿದ್ದು, ಸ್ಪರ್ಧಾ ವಿರೋಧಿ ನೀತಿ ಅನುಸರಣೆ ಮಾಡಿರುವ ಕಾರಣದಿಂದಾಗಿ ಈ ದಂಡ ವಿಧಿಸಲಾಗಿದೆ ಎಂದು ಸಿಸಿಐ ತಿಳಿಸಿದ್ದು, ಇದರಿಂದ ಮಾರುಕಟ್ಟೆಯಲ್ಲಿ ವಿವಿಧ ಕಂಪನಿ ಕಾರುಗಳ ಮಾರಾಟ ಕುಂಠಿತಗೊಳ್ಳಲು ಕಾರಣವಾಗಿದೆ ಎಂಬುದು ಖಚಿತಗೊಂಡಿದೆ.
ತಕ್ಷಣದಿಂದಲೇ ತಾನು ತೆಗೆದುಕೊಂಡಿರುವ ನಿರ್ಧಾರ ಹಿಂಪಡೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಸಿಸಿಐ ತಿಳಿಸಿದೆ. 2019ರಿಂದಲೂ ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಅನೇಕ ರಿಯಾಯತಿ ತೆಗೆದುಕೊಂಡಿದ್ದು, ಇದರಿಂದ ಇತರ ಡೀಲರ್ಗಳು ಮುಕ್ತವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿಲ್ಲ ಎಂಬುದು ಇದೀಗ ಖಚಿತಗೊಂಡಿದೆ.