ನವದೆಹಲಿ :ಮೇಕ್ ಇನ್ ಇಂಡಿಯಾವನ್ನು ಉತ್ತೇಜಿಸುವ ಸಲುವಾಗಿ ಭಾರತೀಯ ಸೇನೆಯು 14,000 ಕೋಟಿ ಮೌಲ್ಯದ ಸ್ವದೇಶಿ ಕ್ಷಿಪಣಿಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಮುಂದಾಗಿದೆ.
ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಭಾರತೀಯ ಸೇನೆಯು ಎರಡು ರೆಜಿಮೆಂಟ್‌ಗಳನ್ನು ಆಕಾಶ್-ಎಸ್ ಏರ್ ಡಿಫೆನ್ಸ್ ಮಿಸೈಲ್ ಸಿಸ್ಟಮ್ ಮತ್ತು 25 ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್‌ಗಳನ್ನು ಖರೀದಿಸಲಿದೆ. ಈಗಾಗಲೇ ಭಾರತೀಯ ಸೇನೆಯು ರಕ್ಷಣಾ ಸಚಿವಾಲಯಕ್ಕೆ ಈ ಕುರಿತಾದ ಪ್ರಸ್ತಾವನೆಯನ್ನು ಕಳುಹಿಸಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಈ ಪ್ರಸ್ತಾವನೆಗೆ ಶೀಘ್ರದಲ್ಲೇ ಅನುಮೋದನೆ ಸಿಗುವ ಸಾಧ್ಯತೆಯಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶೀಘ್ರದಲ್ಲೇ ಉನ್ನತ ಮಟ್ಟದ ಸಭೆ ನಡೆಸುವ ನಿರೀಕ್ಷೆಯಿದೆ. ಆಕಾಶ್-ಎಸ್ ಏರ್ ಡಿಫೆನ್ಸ್ ಕ್ಷಿಪಣಿ 25-30 ಕಿ.ಮೀ ದೂರದಿಂದ ಶತ್ರುವಿನ ವಿಮಾನ ಮತ್ತು ಕ್ರೂಸ್ ಕ್ಷಿಪಣಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ. ವಿಶೇಷವೆಂದರೆ, ಈ ಕ್ಷಿಪಣಿಗಳು ಲಡಾಖ್ನಂತಹ ವಿಪರೀತ ಶೀತ ಪ್ರದೇಶಗಳಲ್ಲಿಯೂ ಶತ್ರುಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿವೆ.