ಕರ್ನಾಟಕ

karnataka

ETV Bharat / bharat

ಮಹಾರಾಷ್ಟ್ರದ ಗಡಿ ಭಾಗದಲ್ಲಿ ಪೆಟ್ರೋಲ್​ ದರ 10 ರೂ. ಕಡಿಮೆ.. ಬಂಕ್​ಗೆ ಮುಗಿಬಿದ್ದ ಬೈಕ್ ಸವಾರರು! - ಬಂಕ್​ಗೆ ಮುಗಿಬಿದ್ದ ಬೈಕ್ ಸವಾರರು,

ಗುಜರಾತ್​ನಲ್ಲಿ ಪ್ರತಿ ಲೀಟರ್‌ಗೆ 91.41 ರೂ. ಪೆಟ್ರೋಲ್​ ಬೆಲೆ ಇದೆ. ಅಲ್ಲಿಂದ ಗಡಿ ಪ್ರದೇಶವಾದ ಮಹಾರಾಷ್ಟ್ರದಲ್ಲಿ ಪೆಟ್ರೋಲ್​ ಬೆಲೆ 100ರ ಗಡಿ ದಾಟಿದೆ..

Rs 10 cheaper petrol, Rs 10 cheaper petrol in Gujarat, Rs 10 cheaper petrol in Gujarat than in Maharashtra, Petrol news, ಮಹಾರಾಷ್ಟ್ರದ ಗಡಿ ಭಾಗದಲ್ಲಿ ಪೆಟ್ರೋಲ್​ ದರ 10 ರೂ. ಕಡಿಮೆ, ಗುಜರಾತ್​ನ ಮಹಾರಾಷ್ಟ್ರದ ಗಡಿ ಭಾಗದಲ್ಲಿ ಪೆಟ್ರೋಲ್​ ದರ 10 ರೂ. ಕಡಿಮೆ, ಬಂಕ್​ಗೆ ಮುಗಿಬಿದ್ದ ಬೈಕ್ ಸವಾರರು, ಪೆಟ್ರೋಲ್​ ಸುದ್ದಿ,
ಮಹಾರಾಷ್ಟ್ರದ ಗಡಿ ಭಾಗದಲ್ಲಿ ಪೆಟ್ರೋಲ್​ ದರ 10 ರೂ. ಕಡಿಮೆ

By

Published : May 31, 2021, 2:12 PM IST

ನಂದುರ್ಬಾರ್ : 'ಪೆಟ್ರೋಲ್ ಬೆಲೆ ಮಹಾರಾಷ್ಟ್ರಕ್ಕಿಂತ ಹತ್ತು ರೂಪಾಯಿ ಅಗ್ಗವಾಗಿದೆ. ದಯವಿಟ್ಟು ನಿಮ್ಮ ವಾಹನ ಟ್ಯಾಂಕ್‌ನ ಇಲ್ಲಿ ತುಂಬಿಸಿ!’ ಎಂದು ಮಾಲೀಕನೊಬ್ಬ ಬಂಕ್​​ ಮುಂದೆ ಜಾಹೀರಾತು ಹಾಕುತ್ತಿದ್ದಂತೆ ಗಡಿ ಪ್ರದೇಶದ ಜನ ತಮ್ಮ ಬೈಕ್​ಗಳಲ್ಲಿ ಪೆಟ್ರೋಲ್​ ತುಂಬಿಸಿಕೊಳ್ಳಲು ಮುಗಿ ಬಿದ್ದರು. ಈ ಘಟನೆ ಜಿಲ್ಲೆಯ ಉಚ್ಛಲನಲ್ಲಿ ಕಂಡು ಬಂತು.

ಮಹಾರಾಷ್ಟ್ರದ ಗಡಿ ಭಾಗದಲ್ಲಿ ಪೆಟ್ರೋಲ್​ ದರ 10 ರೂ. ಕಡಿಮೆ

ಗುಜರಾತ್​ನಲ್ಲಿ ಪ್ರತಿ ಲೀಟರ್‌ಗೆ 91.41 ರೂ. ಪೆಟ್ರೋಲ್​ ಬೆಲೆ ಇದೆ. ಅಲ್ಲಿಂದ ಗಡಿ ಪ್ರದೇಶವಾದ ಮಹಾರಾಷ್ಟ್ರದಲ್ಲಿ ಪೆಟ್ರೋಲ್​ ಬೆಲೆ 100ರ ಗಡಿ ದಾಟಿದೆ.

ಇಂತಹ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರದ ಗಡಿ ಪ್ರದೇಶಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬಳಕೆ ಶೇ.20ರಷ್ಟು ಕಡಿಮೆಯಾಗಿದೆ. ಮಹಾರಾಷ್ಟ್ರ ಮತ್ತು ಗುಜರಾತ್​ ಗಡಿ ಭಾಗದಲ್ಲಿ ಪೆಟ್ರೋಲ್​ ಬೆಲೆ ₹10 ಕಡಿಮೆ ಸಿಗುವುದರಿಂದ ಜನ ತಮ್ಮ ಬೈಕ್​ಗಳನ್ನ ಫುಲ್​ ಟ್ಯಾಂಕ್​ ಮಾಡಿಸುತ್ತಿದ್ದಾರೆ.

ಪೆಟ್ರೋಲ್​ ಏಕೆ ಕಡಿಮೆ..ಮಹಾರಾಷ್ಟ್ರದಲ್ಲಿ ಪೆಟ್ರೋಲ್‌ಗೆ ಶೇ.27ರಷ್ಟು ವ್ಯಾಟ್ ವಿಧಿಸಲಾಗಿದೆ. ಗುಜರಾತ್‌ನಲ್ಲಿ ಶೇ.17ರಷ್ಟು ವ್ಯಾಟ್​ ಇದೆ. ಹೀಗಾಗಿ, ಗುಜರಾತ್‌ನಲ್ಲಿ ಪ್ರತಿ ಲೀಟರ್ ಪೆಟ್ರೋಲ್​​ಗೆ ಸುಮಾರು 9.50 ರೂಪಾಯಿ ಕಡಿಮೆ ಆಗುತ್ತೆ. ಹೀಗಾಗಿ, ಗುಜರಾತ್​ನಲ್ಲಿ ಪೆಟ್ರೋಲ್​ ಬೆಲೆ ಮಹಾರಾಷ್ಟ್ರಕ್ಕಿಂತ 10 ರೂ. ಕಡಿಮೆಯಾಗಿದೆ.

ABOUT THE AUTHOR

...view details