ಹೈದರಾಬಾದ್, ತೆಲಂಗಾಣ:ಚಹಾ ಪ್ರಿಯರಿಗಾಗಿ ತೆಲಂಗಾಣದ ಹೈದರಾಬಾದ್ನಲ್ಲಿ ಇದೇ ಮೊದಲ ಬಾರಿಗೆ ಟೀ ಚಾಂಪಿಯನ್ಶಿಪ್ ಆಯೋಜನೆ ಮಾಡಲು ಸಿದ್ಧವಾಗಿದ್ದು, ಈ ಚಾಂಪಿಯನ್ಶಿಪ್ನಲ್ಲಿ ಗೆಲುವು ಸಾಧಿಸಿದವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದೆ.
ಖ್ಯಾತ ಕಂಪನಿಯೊಂದು ಅಂತಾರಾಷ್ಟ್ರೀಯ ಮಹಿಳಾ ದಿನದ ಹಿಂದಿನ ದಿನವಾದ ಮಾರ್ಚ್ 6ರಂದು ಮಹಿಳೆಯರಿಗಾಗಿ ಈ ಚಾಂಪಿಯನ್ ಶಿಪ್ ಅನ್ನು ಆಯೋಜನೆ ಮಾಡಲಿದ್ದು, ಎರಡು ಮತ್ತು ಮೂರನೇ ಸ್ಥಾನ ಪಡೆದವರಿಗೆ ಕ್ರಮವಾಗಿ 50 ಸಾವಿರ ಮತ್ತು 25 ಸಾವಿರ ರೂಪಾಯಿಗಳ ಬಹುಮಾನ ನೀಡಲಾಗುತ್ತದೆ. ಈ ಚಾಂಪಿಯನ್ಶಿಪ್ ಹೈದರಾಬಾದ್‌ನ ಹೈಟೆಕ್ ಸಿಟಿಯ ನೋವಾಟೆಲ್ ಹೋಟೆಲ್‌ನಲ್ಲಿ ನಡೆಯಲಿದೆ. ಮಾರ್ಚ್ 6ರ ಮಧ್ಯಾಹ್ನ 3.00 ಗಂಟೆಗೆ ಸ್ಪರ್ಧೆ ಆರಂಭವಾಗಲಿದೆ.
ಇದನ್ನೂ ಓದಿ:ಸ್ಥಳೀಯರಿಗೆ ಶೇ.75ರಷ್ಟು ಉದ್ಯೋಗ ಮೀಸಲಾತಿ ತಡೆ ಆದೇಶ ರದ್ದುಗೊಳಿಸಿದ ಸುಪ್ರೀಂಕೋರ್ಟ್
ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಲು: ಈ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಲು ಬಯಸುವ ಮಹಿಳೆಯರು ತಾವು ತಯಾರಿಸುವ ಚಹಾದ ಬಗ್ಗೆ ಒಂದು ನಿಮಿಷದ ವಿಡಿಯೋವನ್ನು ವಾಟ್ಸ್ಆ್ಯಪ್ ಸಂಖ್ಯೆ 8340974747 ನಂಬರ್ಗೆ ಕಳುಹಿಸಬೇಕು. ಈ ರೀತಿಯಾಗಿ ವಿಡಿಯೋ ಕಳುಹಿಸಿದ ನೂರು ಮಂದಿಯನ್ನು ಆಯೋಜಕರು ಚಾಂಪಿಯನ್ಶಿಪ್ಗೆ ಆಯ್ಕೆ ಮಾಡುತ್ತಾರೆ.
ಆಯ್ಕೆಯಾದ ಸ್ಪರ್ಧಿಗಳು ಮಾರ್ಚ್ 6ರಂದು ನೊವಾಟೆಲ್ ಹೋಟೆಲ್‌ಗೆ ಆಗಮಿಸಿ, ಚಹಾವನ್ನು ತಯಾರಿಸಬೇಕು. ಅಲ್ಲಿಗೆ ಬರುವ ಅತಿಥಿಗಳಲ್ಲಿ ಕೆಲವರು ಚಹಾವನ್ನು ರುಚಿ ನೋಡುತ್ತಾರೆ. ಅವರ ಫೀಡ್ಬ್ಯಾಕ್ಗೆ ಅನುಗುಣವಾಗಿ ಆಯೋಜಕರು ವಿಜೇತರನ್ನು ಆಯ್ಕೆ ಮಾಡುತ್ತಾರೆ.