ಕರ್ನಾಟಕ

karnataka

ETV Bharat / bharat

Watch: ಚಲಿಸುತ್ತಿದ್ದ ರೈಲು ಏರುವಾಗ ಕೆಳಗೆ ಬಿದ್ದ ಮಹಿಳೆ..ಆಪತ್ಬಾಂಧವನಾಗಿ ಬಂದು ರಕ್ಷಿಸಿದ ಕಾನ್ಸ್​ಟೇಬಲ್

ಚಲಿಸುತ್ತಿದ್ದ ರೈಲನ್ನು ಏರಲು ಹೊರಟ್ಟಿದ್ದ ಮಹಿಳೆ ಆಯತಪ್ಪಿ ಕೆಳಗೆ ಬಿದ್ದಿದ್ದು, ತಕ್ಷಣವೇ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ ಕಾನ್ಸ್​ಟೇಬಲ್ ಆಕೆಯನ್ನ ರಕ್ಷಿಸಿದ್ದಾರೆ. ಈ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನೋಡುಗರ ಎದೆನಡುಗಿಸುವಂತಿದೆ.

rpf-saved-a-woman-from-falling-under-moving-train
ಚಲಿಸುತ್ತಿದ್ದ ರೈಲು ಏರುವಾಗ ಕೆಳಗೆ ಬಿದ್ದ ಮಹಿಳೆ

By

Published : Jul 31, 2021, 4:08 PM IST

ಸಿಖಂದರಾಬಾದ್ (ತೆಲಂಗಾಣ): ದೇಶದ ಹಲವು ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪೊಲೀಸರು, ಅಧಿಕಾರಿಗಳು, ಸಿಬ್ಬಂದಿ ಪ್ರಯಾಣಿಕರ ಪ್ರಾಣ ಉಳಿಸುವ ಘಟನೆಗಳು ವರದಿಯಾಗುತ್ತಿದ್ದವು. ಇದೀಗ ಇಂತಹದ್ದೇ ಘಟನೆಯೊಂದು ತೆಲಂಗಾಣದ ಸಿಖಂದರಾಬಾದ್ ರೈಲ್ವೆ ನಿಲ್ದಾಣದಲ್ಲಿ ನಡೆದಿದ್ದು, ರೈಲ್ವೆ ಪೊಲೀಸರು ಮಹಿಳೆಯೋರ್ವಳ ಜೀವ ಉಳಿಸಿದ್ದಾರೆ.

ಚಲಿಸುತ್ತಿದ್ದ ರೈಲು ಏರುವಾಗ ಕೆಳಗೆ ಬಿದ್ದ ಮಹಿಳೆ

ಚಲಿಸುತ್ತಿದ್ದ ರೈಲನ್ನು ಏರಲು ಹೊರಟ್ಟಿದ್ದ ಮಹಿಳೆ ಆಯತಪ್ಪಿ ಕೆಳಗೆ ಬಿದ್ದಿದ್ದು, ತಕ್ಷಣವೇ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ ಕಾನ್ಸ್​ಟೇಬಲ್ ಆಕೆಯನ್ನ ರಕ್ಷಿಸಿದ್ದಾರೆ. ರೈಲು ನಿಧಾನವಾಗಿ ಹೊರಟ್ಟಿದ್ದ ವೇಳೆ ಹತ್ತಲು ಪ್ರಯತ್ನಿಸಿದಾಗ ಆಯತಪ್ಪಿ ಬಿದ್ದಿದ್ದಾಳೆ. ಪಕ್ಕದಲ್ಲೇ ಇದ್ದ ಸಿಬ್ಬಂದಿ ಆಕೆಯನ್ನ ಮೇಲೆತ್ತಿ ರೈಲು ಸಿಬ್ಬಂದಿಗೆ ಕೈ ಮಾಡಿ ರೈಲು ನಿಲ್ಲಿಸಿದ್ದಾರೆ. ಈ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ನೋಡುಗರು ಎದೆ ನಡುಗಿಸುವಂತಿದೆ.

ABOUT THE AUTHOR

...view details