ಅನಂತಪುರ(ಆಂಧ್ರಪ್ರದೇಶ): ರಾಯಲ್ ಎನ್ಫೀಲ್ಡ್ ಬೈಕ್ಗೆ ಹಠಾತ್ ಬೆಂಕಿ ಹೊತ್ತಿಕೊಂಡು ಅದು ಭಾರಿ ಶಬ್ದದೊಂದಿಗೆ ಸ್ಫೋಟಗೊಂಡ ಭೀಕರ ಘಟನೆ ಆಂಧ್ರಪ್ರದೇಶದ ಅನಂತಪುರದಲ್ಲಿ ನಡೆದಿದೆ. ನೋಡನೋಡುತ್ತಿದ್ದಂತೆ ಬುಲೆಟ್ ಬೈಕ್ ಸ್ಫೋಟಗೊಂಡಿದ್ದರಿಂದ ಜನರು ಬೆಚ್ಚಿದ್ದಿದ್ದಾರೆ.
ಅನಂತಪುರದ ಗುಂತಕಲ್ ವಲಯದ ಕಸಪುರಂ ನೆಟ್ಟಿಕಂಟಿಯ ಪ್ರಸಿದ್ಧ ಅಂಜನೇಯ ಸ್ವಾಮಿ ದೇವಸ್ಥಾನದ ಸಮೀಪ ಭಕ್ತರೊಬ್ಬರಿಗೆ ಸೇರಿದ ರಾಯಲ್ ಎನ್ಫೀಲ್ಡ್ ಹೀಗೆ ಸ್ಫೋಟಗೊಂಡು ಸುಟ್ಟು ಹೋಗಿದೆ. ಇದು ರವಿಚಂದ್ರ ಎಂಬುವರಿಗೆ ಸೇರಿದ್ದಾಗಿದ್ದು, ಜಾತ್ರೆ ಮತ್ತು ಯುಗಾದಿ ಹಬ್ಬದ ನಿಮಿತ್ತ ಮೈಸೂರಿನಿಂದ ಈತ ದೇವಸ್ಥಾನಕ್ಕೆ ಬಂದಿದ್ದ ಎನ್ನಲಾಗ್ತಿದೆ. ದೇವಸ್ಥಾನದ ಬಳಿ ನಿಲ್ಲಿಸಿದ್ದಾಗ ಬುಲೆಟ್ ಬೈಕ್ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿಯಲು ಆರಂಭಿಸಿದೆ. ನಂತರ ಎಲ್ಲರ ಕಣ್ಣಿದುರಿಗೇ ಅದು ಸ್ಫೋಟಗೊಂಡಿದೆ.