ಹೈದರಾಬಾದ್: ಇಲ್ಲಿನ ನಿಜಾಮಾಬಾದ್‌ನಲ್ಲಿ ರೌಡಿ ಶೀಟರ್ ತನ್ನ ಜನ್ಮದಿನವನ್ನು ಅದ್ಧೂರಿಯಾಗಿ ಆಚರಣೆ ಮಾಡಿಕೊಂಡಿದ್ದು, ತನ್ನ ಹುಟ್ಟುಹಬ್ಬದ ಆಚರಣೆಯಲ್ಲಿ ಫೈರಿಂಗ್ ಮಾಡಿದ್ದಾನೆ.
ಜನ್ಮದಿನದಂದು ಗಾಳಿಯಲ್ಲಿ ಗುಂಡು ಹಾರಿಸಿದ ರೌಡಿ ಶೀಟರ್: ವಿಡಿಯೋ ವೈರಲ್ - BIRTHDAY CELEBRATIONS, NIZAMABAD
ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ರೌಡಿಶೀಟರ್ ಒಬ್ಬ ತನ್ನ ಜನ್ಮದಿನಾಚರಣೆಯನ್ನು ಅದ್ಧೂರಿಯಾಗಿ ಆಚರಣೆ ಮಾಡಿಕೊಂಡಿದ್ದಲ್ಲದೇ, ಈ ವೇಳೆ ಫೈರಿಂಗ್ ಕೂಡ ಮಾಡಿದ್ದಾನೆ.
ಜನ್ಮದಿನದಂದು ಗಾಳಿಯಲ್ಲಿ ಗುಂಡು ಹಾರಿಸಿದ ರೌಡಿ ಶೀಟರ್
ರೌಡಿ ಶೀಟರ್ ಆರಿಫ್ ಹುಟ್ಟುಹಬ್ಬವನ್ನು ಸ್ಥಳೀಯ ಫಾರ್ಮ್ಹೌಸ್ನಲ್ಲಿ ಆಯೋಜಿಸಲಾಗಿತ್ತು. ಆ ವೇಳೆ ಆತ ಪಿಸ್ತೂಲ್ ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಗಾಳಿಯಲ್ಲಿ 3 ಸುತ್ತು ಗುಂಡು ಹಾರಿಸಿದ್ದು, ಈ ವಿಡಿಯೋ ಎಲ್ಲೆಡೆ ಈಗ ವೈರಲ್ ಆಗಿದೆ.
ಆರೀಫ್ ದರೋಡೆ ಮತ್ತು ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಮತ್ತು ಆತನ ಹೆಸರಿನ ಮೇಲೆ ಪಿಡಿ ಕಾಯ್ದೆಯನ್ನು ದಾಖಲಿಸಲಾಗಿದೆ. ಆತನನ್ನು ಪಿಡಿ ಕಾಯ್ದೆಯಡಿ ಬಂಧಿಸಲಾಗಿತ್ತು. ಜಾಮೀನಿನ ಮೇಲೆ ಬಿಡುಗಡೆ ಆಗಿ ಹೊರ ಬಂದಿದ್ದಾನೆ.