ಕರ್ನಾಟಕ

karnataka

ETV Bharat / bharat

ಮೋದಿಯಿಂದ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪ : RP ಕಾಯ್ದೆ ತಿದ್ದುಪಡಿ ಅಗತ್ಯವೆಂದ ಮಾಜಿ ಚುನಾವಣಾ ಆಯುಕ್ತ - ಪ್ರಧಾನಿ ನರೇಂದ್ರ ಮೋದಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ

ಬಹು ಹಂತದ ಚುನಾವಣೆಗಳಲ್ಲಿ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದ ಯುಗದಲ್ಲಿ ಮಾದರಿ ನೀತಿ ಸಂಹಿತೆಯನ್ನು ಜಾರಿಗೊಳಿಸುವುದು ಅಸಾಧ್ಯ. ಮತದಾನ ಆರಂಭಕ್ಕೂ ಮುನ್ನ ಇರುವ 48 ಗಂಟೆಗಳ ಅವಧಿಯಲ್ಲಿ ದೂರದರ್ಶನದಲ್ಲಿ ಪ್ರಚಾರ ಮಾಡಲು ಎಲ್ಲರಿಗೂ ಅವಕಾಶ ಮಾಡಿಕೊಡಬೇಕು ಎಂದು ಮಾಜಿ ಚುನಾವಣಾ ಆಯುಕ್ತ ಡಾ.ಎಸ್.ವೈ.ಖುರೈಶಿ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ..

ಮೋದಿ
ಮೋದಿ

By

Published : Feb 13, 2022, 7:42 PM IST

ನವದೆಹಲಿ :ಉತ್ತರಪ್ರದೇಶದ ಮೊದಲ ಹಂತದ ವಿಧಾನಸಭೆ ಚುನಾವಣೆಗೆ ಕೇವಲ ಒಂದು ದಿನದ ಮೊದಲು ಸಂದರ್ಶನ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದ್ದರೂ, ಟೀಕೆಗಳ ಸುರಿಮಳೆಯಾಗುತ್ತಿದ್ದರೂ ಭಾರತದ ಚುನಾವಣಾ ಆಯೋಗ ಮಾತ್ರ ಮೌನವಹಿಸಿದೆ.

ಈ ಬೆಳವಣಿಗೆಯ ಕುರಿತು ಭಾರತದ ಮಾಜಿ ಚುನಾವಣಾ ಆಯುಕ್ತ ಡಾ. ಎಸ್‌ವೈ ಖುರೇಶಿ ಈಟಿವಿ ಭಾರತದೊಂದಿಗೆ ಮಾತನಾಡುತ್ತಾ, ಬಹು ಹಂತದ ಚುನಾವಣೆಗಳಲ್ಲಿ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದ ಯುಗದಲ್ಲಿ ಮಾದರಿ ನೀತಿ ಸಂಹಿತೆಯನ್ನು ಜಾರಿಗೊಳಿಸುವುದು ಅಸಾಧ್ಯ.

ಮತದಾನ ಆರಂಭಕ್ಕೂ ಮುನ್ನ ಇರುವ 48 ಗಂಟೆಗಳ ಅವಧಿಯಲ್ಲಿ ದೂರದರ್ಶನದಲ್ಲಿ ಪ್ರಚಾರ ಮಾಡಲು ಎಲ್ಲರಿಗೂ ಅವಕಾಶ ಮಾಡಿಕೊಡಬೇಕು. ಹೀಗಾಗಬೇಕೆಂದರೆ ಆರ್‌ಪಿ (ಜನಪ್ರತಿನಿಧಿ ಕಾಯ್ದೆ) ಕಾಯ್ದೆಯ ಸೆಕ್ಷನ್ 126 ಅನ್ನು ತಿದ್ದುಪಡಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಜಾಪ್ರಭುತ್ವದ ಮಾನದಂಡಗಳನ್ನು ಸುರಕ್ಷಿತವಾಗಿರಿಸಲು, ರಕ್ಷಿಸಲು ಮತ್ತು ನಿರ್ವಹಿಸಲು, ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ನಡೆಸಲು ಮಾದರಿ ನೀತಿ ಸಂಹಿತೆಯನ್ನು ವಿನ್ಯಾಸಗೊಳಿಸಲಾಗಿದೆ. ಆರ್‌ಪಿ ಕಾಯ್ದೆಯ ಸೆಕ್ಷನ್ 126 ಅನ್ನು ತಿದ್ದುಪಡಿ ಮಾಡಿದಲ್ಲಿ 48 ಗಂಟೆಗಳ ಅವಧಿಯಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ರಾಜಕಾರಣಿಗಳು ಸಂದರ್ಶನ ನೀಡಬಹುದು. ಆದರೆ, ಹೊರಗಡೆ ಸಾರ್ವಜನಿಕವಾಗಿ ಭಾಷಣ ಮಾಡಿದರೆ ಅದು ತಪ್ಪಾಗುತ್ತದೆ ಎಂದು ಖುರೇಶಿ ಹೇಳುತ್ತಾರೆ.

ಇದನ್ನೂ ಓದಿ: ಉತ್ತರಪ್ರದೇಶ ಚುನಾವಣೆ: ಸಮಾಜವಾದಿ ಪಕ್ಷದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಮೊದಲ ಹಂತದ ಮತದಾನ ಫೆಬ್ರವರಿ 10ರಂದು ನಡೆದಿತ್ತು. ಫೆ.7ರಂದು ಮೋದಿ ಎಎನ್​ಐಗೆ ಸಂದರ್ಶನ ನೀಡಿದ್ದರು. ಇವರು ಸಂದರ್ಶನ ನೀಡಿದ್ದು ಉತ್ತರಪ್ರದೇಶದಲ್ಲಲ್ಲ, ದೆಹಲಿಯಲ್ಲಿ. ಇದು ಸ್ಥಳೀಯ ಚುನಾವಣೆ ಅಥವಾ ಲೋಕಸಭೆ ಚುನಾವಣೆಯಲ್ಲ, ಆದ್ದರಿಂದ ಭೌಗೋಳಿಕ ಸನ್ನಿವೇಶವು ಇಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅನೇಕರು ಮೋದಿ ಪರವಾಗಿ ಬ್ಯಾಟ್​ ಬೀಸಿದ್ದಾರೆ.

2017ರಲ್ಲಿ ಗುಜರಾತ್ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮುನ್ನಾದಿನದಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಸಂದರ್ಶನವನ್ನು ಪ್ರಸಾರ ಮಾಡಿದ್ದಕ್ಕಾಗಿ ಭಾರತದ ಚುನಾವಣಾ ಆಯೋಗ ವಿವಿಧ ಮಾಧ್ಯಮಗಳ ವಿರುದ್ಧ ಸೆಕ್ಷನ್ 126 ಅನ್ನು ಹೇರಿತ್ತು ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.

ABOUT THE AUTHOR

...view details