ರೂರ್ಕಿ(ಉತ್ತರಾಖಂಡ):ಡ್ರಗ್ಸ್ ಖರೀದಿಸಲು ತಾಯಿ ಹಣ ನೀಡಲಿಲ್ಲ ಎಂಬ ಕಾರಣಕ್ಕಾಗಿ ಕೋಪಗೊಂಡ ಮಗ ಮನೆಗೆ ಬೆಂಕಿ ಹಚ್ಚಿದ್ದಾನೆ. ಈ ಘಟನೆ ಉತ್ತರಾಖಂಡದ ರೂರ್ಕಿಯಲ್ಲಿ ನಡೆದಿದೆ. ಪರಿಣಾಮ ಮನೆಯಲ್ಲಿದ್ದ ಸಾಮಗ್ರಿಗಳೆಲ್ಲವೂ ಸುಟ್ಟು ಕರಕಲಾಗಿವೆ.
ಡ್ರಗ್ಸ್ ಖರೀದಿಸಲು ಹಣ ನೀಡದ ತಾಯಿ; ಸಿಲಿಂಡರ್ ಸ್ಫೋಟಿಸಿ, ಮನೆಗೆ ಬೆಂಕಿ ಹಚ್ಚಿದ ಪುತ್ರ! - ಡ್ರಗ್ಸ್ಗಾಗಿ ಹಣ ನೀಡಲು ನಿರಾಕರಿಸಿದ ತಾಯಿ
ಕುಡಿದ ಮತ್ತಿನಲ್ಲಿ ತಾಯಿ ಜೊತೆ ಜಗಳವಾಡಿರುವ ಮಗನೋರ್ವ ಆಕ್ರೋಶಗೊಂಡು ಮನೆಗೆ ಬೆಂಕಿ ಹಚ್ಚಿರುವ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.
ಮನೆಗೆ ಬೆಂಕಿ ಹಚ್ಚಿದ ಮಗ
ಕುಡಿದ ಮತ್ತಿನಲ್ಲಿದ್ದ ಮಗ, ತಾಯಿಯ ಬಳಿ ಡ್ರಗ್ಸ್ ಖರೀದಿಸಲು ಹಣ ಕೇಳಿದ್ದಾನೆ. ಇದಕ್ಕೆ ತಾಯಿ ನಿರಾಕರಿಸಿದ್ದಾಳೆ. ಈ ವೇಳೆ ಇಬ್ಬರು ನಡುವೆ ಕೆಲ ಹೊತ್ತು ವಾಗ್ವಾದ ನಡೆದಿದೆ. ಇದರಿಂದ ಕೆರಳಿದ ಆತ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಿಸಿದ್ದಾನೆ. ಪರಿಣಾಮ, ಮನೆಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ತುರ್ತು ಸೇವೆಯ ವಾಹನಗಳು ಘಟನಾ ಸ್ಥಳ ತಲುಪುವಷ್ಟರಲ್ಲಿ ಸಮಯ ಮೀರಿತ್ತು.
ಇದನ್ನೂ ಓದಿ:ಮಲ್ಲಿಕಾರ್ಜುನ ಖರ್ಗೆಗೆ ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ : ವಿಚಾರಣೆಗೆ ಹಾಜರ್