ರೂರ್ಕಿ( ಉತ್ತರಾಖಂಡ್):ರೂರ್ಕಿ ರೈಲ್ವೆ ಅಧೀಕ್ಷಕರಿಗೆ ಬೆದರಿಕೆ ಪತ್ರವೊಂದು ಬಂದಿತ್ತು. ರೂರ್ಕಿ ರೈಲ್ವೆ ನಿಲ್ದಾಣ ಸೇರಿದಂತೆ ಇತರ 6 ರೈಲ್ವೆ ನಿಲ್ದಾಣಗಳನ್ನು ಬಾಂಬ್‌ಗಳಿಂದ ಸ್ಫೋಟಿಸಲಾಗುವುದು ಎಂದು ಆ ಬೆದರಿಕೆ ಪತ್ರದಲ್ಲಿ ಎಚ್ಚರಿಕೆ ನೀಡಲಾಗಿತ್ತು. ಕೇವಲ ರೈಲ್ವೆ ನಿಲ್ದಾಣಗಳು ಅಷ್ಟೇ ಅಲ್ಲ ದೊಡ್ಡ ದೊಡ್ಡ ಧಾರ್ಮಿಕ ಸ್ಥಳಗಳಿಗೆ ಬಾಂಬ್ ಇಟ್ಟು ಉಡಾಯಿಸಲಾಗುವುದು ಎಂದು ಬೆದರಿಕೆ ಪತ್ರದಲ್ಲಿ ಹೇಳಲಾಗಿತ್ತು.
ಈ ಪತ್ರದಲ್ಲಿ ಮುಖ್ಯಮಂತ್ರಿಯವರ ಹೆಸರನ್ನೂ ಉಲ್ಲೇಖಿಸಲಾಗಿದೆ. ಇದು ಉತ್ತರಪ್ರದೇಶ - ಉತ್ತರಾಖಂಡದ ರೈಲು ನಿಲ್ದಾಣಗಳು ಸೇರಿದಂತೆ 24 ಧಾರ್ಮಿಕ ಸ್ಥಳಗಳ ಹೆಸರನ್ನು ಪತ್ರದಲ್ಲಿ ಸೇರಿಸಲಾಗಿದೆ. ಈ ಪತ್ರದಲ್ಲಿನ ವಿಷಯ ತಿಳಿದ ಪೊಲೀಸರು ಬೆಚ್ಚಿ ಬಿದ್ದಿದ್ದರೆ, ಆಡಳಿತಗಳ ನಿದ್ದೆಯನ್ನೂ ಕಸಿದುಕೊಂಡಿದೆ. ಈ ಬೆದರಿಕೆ ಪತ್ರವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಮತ್ತು ರಾಜ್ಯ ಗುಪ್ತಚರ ಇಲಾಖೆಗಳು ತನಿಖೆ ಆರಂಭಿಸಿವೆ.
ಮೇ 21ರಂದು ಸ್ಫೋಟದ ಬೆದರಿಕೆ:ರೂರ್ಕಿ ರೈಲು ನಿಲ್ದಾಣದ ಸೂಪರಿಂಟೆಂಡೆಂಟ್ ಕಚೇರಿಗೆ ಬಂದಿರುವ ಪತ್ರದಲ್ಲಿ, ರೂರ್ಕಿ ರೈಲ್ವೆ ನಿಲ್ದಾಣ ಸೇರಿದಂತೆ ಇತರ ನಿಲ್ದಾಣಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ. ಜೈಷ್-ಎ-ಮೊಹಮ್ಮದ್ ನ ಗ್ಯಾಂಗ್‌ನ ಏರಿಯಾ ಕಮಾಂಡರ್ ಎಂದು ಹೇಳಿಕೊಂಡಿರುವ ವ್ಯಕ್ತಿ, ಲಕ್ಸರ್, ರೂರ್ಕಿ, ಹರಿದ್ವಾರ, ಡೆಹ್ರಾಡೂನ್, ರಿಷಿಕೇಶ್, ಕತ್ಗೊಡಮ್, ಮೊರಾದಾಬಾದ್ ಮತ್ತು ಬರೇಲಿ ರೈಲು ನಿಲ್ದಾಣಗಳನ್ನು ಬಾಂಬ್‌ಗಳಿಂದ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲ ಹರಿದ್ವಾರದ ಧಾರ್ಮಿಕ ಸ್ಥಳಗಳಾದ ಮಾನಸಾ ದೇವಿ, ಹರ್ಕಿ ಪೈಡಿ, ಚಂಡಿ ದೇವಿ, ಕಂಖಾಲ್ ದಕ್ಷ ದೇವಸ್ಥಾನ ಮತ್ತು ಪಿರಾನ್ ಕಲಿಯಾರ್‌ಗಳನ್ನು ಉಡಾಯಿಸುವುದಾಗಿ ಪತ್ರದಲ್ಲಿ ಬೆದರಿಕೆ ಹಾಕಲಾಗಿದೆ. ಆದರೆ, ಈ ಪತ್ರವನ್ನು ಮಾತ್ರ ಇನ್ನೂ ಬಹಿರಂಗ ಪಡಿಸಲಾಗಿಲ್ಲ.