ಕರ್ನಾಟಕ

karnataka

ETV Bharat / bharat

ಭ್ರಷ್ಟಾಚಾರ ಆರೋಪ: ತಿಹಾರ್ ಜೈಲು ಪ್ರಧಾನ ಕಚೇರಿ ಬಳಿ ರೋಹಿಣಿ ಜೈಲಿನ 80 ಸಿಬ್ಬಂದಿ ಪ್ರತಿಭಟನೆ - ಭ್ರಷ್ಟಾಚಾರದ ಆರೋಪ ಹೊತ್ತಿರುವ ರೋಹಿಣಿ ಜೈಲು ಸಿಬ್ಬಂದಿ

ಸುಮಾರು 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ಸುಖೇಶ್ ಚಂದ್ರಶೇಖರ್​ಗೆ ಜೈಲಿನಿಂದಲೇ ವ್ಯವಹಾರಗಳನ್ನು ನಡೆಸಲು ಸಹಕಾರ ನೀಡಿದ ಆರೋಪ ಜೈಲು ಸಿಬ್ಬಂದಿಯ ಮೇಲಿದೆ.

Rohini jail staff protesting at Tihar headquarter in Delhi
ತಿಹಾರ್ ಜೈಲಿನ ಪ್ರಧಾನ ಕಚೇರಿ ಬಳಿ ರೋಹಿಣಿ ಜೈಲಿನ 80 ಸಿಬ್ಬಂದಿ ಪ್ರತಿಭಟನೆ

By

Published : Jan 23, 2022, 7:51 AM IST

ನವದೆಹಲಿ:ಭ್ರಷ್ಟಾಚಾರದ ಆರೋಪ ಹೊತ್ತಿರುವ 80 ಮಂದಿ ನೌಕರರ ವಿರುದ್ಧ ಕ್ರಮ ಕೈಗೊಳ್ಳುವ ಭೀತಿಯ ನಡುವೆಯೇ ರೋಹಿಣಿ ಜೈಲು ಸಿಬ್ಬಂದಿ ಶನಿವಾರ ತಿಹಾರ್ ಜೈಲಿನ ಪ್ರಧಾನ ಕಚೇರಿಯ ಬಳಿ ಧರಣಿ ನಡೆಸಿದ್ದಾರೆ.

ತಿಹಾರ್ ಜೈಲು ರೋಹಿಣಿ ಜೈಲಿಗೆ ಕೇಂದ್ರ ಕಚೇರಿಯಾಗಿದ್ದು, ಮೂಲಗಳ ಪ್ರಕಾರ, ಕೆಲವು ಉದ್ಯೋಗಿಗಳು ಶನಿವಾರ ಕೇಂದ್ರ ಕಚೇರಿಗೆ ಬಂದಿದ್ದರು. ಹಲವಾರು ಗಂಟೆಗಳ ಕಾಲ ಕಚೇರಿಯ ಮುಂದೆ ಕುಳಿರು ಪ್ರತಿಭಟನೆ ನಡೆಸಿದರು. ಆದರೂ ತಿಹಾರ್ ಜೈಲಿನ ಡಿಜಿ ಸಂದೀಪ್ ಗೋಯಲ್ ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ.

ತಿಹಾರ್ ಜೈಲಿನ ಡಿಜಿ ಸಂದೀಪ್ ಗೋಯಲ್ ಅವರನ್ನು ಭೇಟಿ ಮಾಡಿ, ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳದಂತೆ ಮನವಿ ಮಾಡಲು ಬಂದಿದ್ದರು. ಆದರೆ, ಭೇಟಿಯಾಗಲು ಸಾಧ್ಯವಾಗಲಿಲ್ಲ. ಧರಣಿಯಲ್ಲಿ ಕೆಲವು ಮಹಿಳಾ ಸಿಬ್ಬಂದಿಯೂ ಭಾಗಿಯಾಗಿದ್ದರು. ಸಂದೀಪ್ ಗೋಯಲ್ ಅವರನ್ನು ರೋಹಿಣಿ ಜೈಲಿನ ಸಿಬ್ಬಂದಿ ಸೋಮವಾರ ಭೇಟಿಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ರೋಹಿಣಿ ಜೈಲು ಸಿಬ್ಬಂದಿ ಪ್ರತಿಭಟನೆ ಯಾಕೆ?

ಸುಮಾರು 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ಸುಖೇಶ್ ಚಂದ್ರಶೇಖರ್​ಗೆ ಜೈಲಿನಿಂದಲೇ ವ್ಯವಹಾರಗಳನ್ನು ನಡೆಸಲು ಸಹಕಾರ ನೀಡಿದ ಆರೋಪ ಜೈಲು ಸಿಬ್ಬಂದಿಯ ಮೇಲಿದೆ. ಸುಮಾರು 80 ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ಈ ಆರೋಪವಿದ್ದು, ದೆಹಲಿ ಪೊಲೀಸರು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.

ಸುಖೇಶ್ ಚಂದ್ರಶೇಖರ್​​ಗೆ ಸಹಕಾರ ನೀಡಿದ ಆರೋಪದಲ್ಲಿ ಸಿಬ್ಬಂದಿಯ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲು ಪೊಲೀಸ್ ಕಮಿಷನರ್ ರಾಕೇಶ್ ಅಸ್ತಾನಾ ಒಪ್ಪಿಗೆ ನೀಡಿದ್ದು, ಎಲ್ಲಾ 80 ಸಿಬ್ಬಂದಿಯನ್ನು ಕೂಡಲೇ ಅಮಾನತು ಮಾಡುವಂತೆ ದೆಹಲಿ ಸರ್ಕಾರಕ್ಕೆ ಪತ್ರ ಬರೆಯುವ ಸಾಧ್ಯತೆಯಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಈ ಕಾರಣದಿಂದಲೇ ಅವರ ವಿರುದ್ಧ ಜೈಲು ಆಡಳಿತ ಕ್ರಮ ಕೈಗೊಳ್ಳುವ ಸಾಧ್ಯತೆ ಇದ್ದು, ಕ್ರಮ ಕೈಗೊಳ್ಳದಂತೆ ಮನವಿ ಮಾಡುವ ಸಲುವಾಗಿ ಸಿಬ್ಬಂದಿ ತಿಹಾರ್ ಜೈಲಿನ ಪ್ರಧಾನ ಕಚೇರಿ ಬಳಿ ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ:ಜೈಲು ಅಧಿಕಾರಿಗಳಿಗೆ ಹೆದರಿ ಮೊಬೈಲ್​ ಫೋನ್​​ ನುಂಗಿದ ಕೈದಿ

For All Latest Updates

ABOUT THE AUTHOR

...view details