ಕರ್ನಾಟಕ

karnataka

ETV Bharat / bharat

ರೋಹಿಂಗ್ಯಾಗಳ ವಾಸಸ್ಥಳವೇ ಬಂಧನ ಕೇಂದ್ರ: ಕೇಜ್ರಿವಾಲ್ ಸರ್ಕಾರಕ್ಕೆ ಗೃಹ ಸಚಿವಾಲಯ ಸೂಚನೆ - ರೋಹಿಂಗ್ಯಾ ವಲಸಿಗರನ್ನು ಕಾನೂನಿನ ಪ್ರಕಾರ ಗಡಿಪಾರು

ಸುಮಾರು 1,100 ರೋಹಿಂಗ್ಯಾಗಳನ್ನು ಫ್ಲ್ಯಾಟ್​ಗಳಿಗೆ ಸ್ಥಳಾಂತರಿಸುವ ಸಚಿವರ ಹೇಳಿಕೆಯಿಂದ ಭಾರಿ ವಿವಾದ ಸೃಷ್ಟಿ. ಈಗ ಇದಕ್ಕೆ ಸ್ಪಷ್ಟನೆ ನೀಡಿದ ಕೇಂದ್ರ ಗೃಹ ಸಚಿವಾಲಯ.​

ರೋಹಿಂಗ್ಯಾ
Rohingyas

By

Published : Aug 17, 2022, 5:29 PM IST

ನವದೆಹಲಿ:ದೆಹಲಿಯಲ್ಲಿ ರೋಹಿಂಗ್ಯಾ ಮುಸ್ಲಿಮರಿಗೆ ಇಡಬ್ಲ್ಯೂಎಸ್ ಫ್ಲಾಟ್‌ಗಳನ್ನು ಒದಗಿಸಲು ಯಾವುದೇ ನಿರ್ದೇಶನವನ್ನು ನೀಡಿಲ್ಲ ಎಂದು ಗೃಹ ಸಚಿವಾಲಯ (MHA) ಬುಧವಾರ ಸ್ಪಷ್ಟಪಡಿಸಿದೆ ಮತ್ತು ಅಕ್ರಮ ವಲಸಿಗರು ಪ್ರಸ್ತುತ ಸ್ಥಳದಲ್ಲಿಯೇ ಇರುವಂತೆ ಖಾತ್ರಿಪಡಿಸುವಂತೆ ಅರವಿಂದ್ ಕೇಜ್ರಿವಾಲ್ ಸರ್ಕಾರಕ್ಕೆ ಸೂಚನೆ ನೀಡಿದೆ. ರೋಹಿಂಗ್ಯಾ ವಲಸಿಗರನ್ನು ಕಾನೂನಿನ ಪ್ರಕಾರ ಗಡಿಪಾರು ಮಾಡುವವರೆಗೆ ಬಂಧನ ಕೇಂದ್ರಗಳಲ್ಲಿ ಇರಿಸಲಾಗುವುದು ಮತ್ತು ಅವರು ಪ್ರಸ್ತುತ ವಾಸವಾಗಿರುವ ಸ್ಥಳವನ್ನು ಬಂಧನ ಕೇಂದ್ರ (ಜೈಲು) ವೆಂದು ಘೋಷಿಸುವಂತೆ ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ ಎಂದು ಗೃಹ ಸಚಿವಾಲಯ ಹೇಳಿದೆ.

"ರೋಹಿಂಗ್ಯಾ ಅಕ್ರಮ ವಿದೇಶಿಯರ ಕುರಿತಾಗಿ ಕೆಲವು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳಿಗೆ ಸಂಬಂಧಿಸಿದಂತೆ, ಹೊಸದಿಲ್ಲಿಯ ಬಕ್ಕರ್ವಾಲಾದಲ್ಲಿ ರೋಹಿಂಗ್ಯಾ ಅಕ್ರಮ ವಲಸಿಗರಿಗೆ ಇಡಬ್ಲ್ಯೂಎಸ್ ಫ್ಲಾಟ್‌ಗಳನ್ನು ಒದಗಿಸಲು ಗೃಹ ಸಚಿವಾಲಯ ಯಾವುದೇ ನಿರ್ದೇಶನಗಳನ್ನು ನೀಡಿಲ್ಲ" ಎಂದು ಗೃಹ ಸಚಿವಾಲಯದ ವಕ್ತಾರರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ರೋಹಿಂಗ್ಯಾ ಮುಸ್ಲಿಮರನ್ನು ಹೊಸ ಸ್ಥಳಕ್ಕೆ ಸ್ಥಳಾಂತರಿಸುವ ದೆಹಲಿ ಸರ್ಕಾರದ ಉದ್ದೇಶಿತ ನಡೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹ ಸಚಿವಾಲಯ, ರೋಹಿಂಗ್ಯಾ ಅಕ್ರಮ ವಿದೇಶಿಗರು ತಮ್ಮ ಪ್ರಸ್ತುತ ಸ್ಥಳದಲ್ಲಿಯೇ ಇರುವುದನ್ನು ಖಚಿತಪಡಿಸಿಕೊಳ್ಳುವಂತೆ ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ ಸಂಬಂಧಿತ ದೇಶದೊಂದಿಗೆ ಅವರನ್ನು ಗಡೀಪಾರು ಮಾಡುವ ಪ್ರಕ್ರಿಯೆ ಈಗಾಗಲೇ ಚಾಲನೆಯಲ್ಲಿದೆ ಎಂದು ಕೆಂದ್ರ ಸರ್ಕಾರ ತಿಳಿಸಿದೆ.

ಕಾನೂನು ಪ್ರಕಾರ ಅಕ್ರಮ ವಿದೇಶಿಗರನ್ನು ಗಡಿಪಾರು ಮಾಡುವವರೆಗೆ ಬಂಧನ ಕೇಂದ್ರದಲ್ಲಿ ಇರಿಸಲಾಗುವುದು. ದೆಹಲಿ ಸರ್ಕಾರವು ಅವರ ಪ್ರಸ್ತುತ ಸ್ಥಳವನ್ನು ಬಂಧನ ಕೇಂದ್ರವೆಂದು ಘೋಷಿಸಿಲ್ಲ. ತಕ್ಷಣವೇ ಅವರಿರುವ ಸ್ಥಳವನ್ನು ಬಂಧನ ಕ್ಷೇತ್ರವೆಂದು ಘೋಷಿಸಬೇಕೆಂದು ನಿರ್ದೇಶನ ನೀಡಲಾಗಿದೆ ಎಂದು ಗೃಹ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಪ್ರಸ್ತುತ ರಾಷ್ಟ್ರ ರಾಜಧಾನಿಯ ಮದನ್‌ಪುರ್ ಖಾದರ್ ಪ್ರದೇಶದಲ್ಲಿ ಟೆಂಟ್‌ಗಳಲ್ಲಿ ವಾಸಿಸುತ್ತಿರುವ ಸುಮಾರು 1,100 ರೋಹಿಂಗ್ಯಾಗಳನ್ನು ಮೂಲಭೂತ ಸೌಲಭ್ಯಗಳಿರುವ ಮತ್ತು ದಿನದ 24 ಗಂಟೆಗಳ ಕಾಲ ಭದ್ರತಾ ಕಣ್ಗಾವಲು ಇರುವ ಫ್ಲಾಟ್‌ಗಳಲ್ಲಿ ಪುನರ್ವಸತಿ ನೀಡಲು ಕೇಂದ್ರವು ಯೋಜಿಸಿದೆ ಎಂದು ಕೇಂದ್ರ ವಸತಿ ಮತ್ತು ನಗರಾಡಳಿತ ವ್ಯವಹಾರಗಳ ಸಚಿವ ಹರ್ದೀಪ್ ಪುರಿ ಬುಧವಾರ ಹೇಳಿದ್ದು ಸಾಕಷ್ಟು ವಿವಾದ ಸೃಷ್ಟಿಸಿತ್ತು. ಹೀಗಾಗಿ ಈ ಬಗ್ಗೆ ಇಂದು ಕೇಂದ್ರ ಗೃಹ ಸಚಿವಾಲಯ ಸ್ಪಷ್ಟನೆ ನೀಡಿದ್ದು, ಅಂಥ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ತಿಳಿಸಿದೆ.

ABOUT THE AUTHOR

...view details