ಲಂಡನ್:ಪೈಪ್‌ಲೈನ್‌ಗಳಲ್ಲಿ ಕಂಡುಬರುವ ಸಮಸ್ಯೆಗಳು ಮತ್ತು ಸೋರಿಕೆಗಳನ್ನು ಪತ್ತೆ ಹಚ್ಚುವ ಪುಟ್ಟದಾದ ರೋಬೋಟ್‌ಗಳನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಈ ಚಿಕಣಿ ರೋಬೋಗಳು ಪೈಪ್‌ಲೈನ್ ಅಲ್ಲಿ ಸಣ್ಣ ಬಿರುಕುಗಳನ್ನೂ ಸಹ ಪತ್ತೆ ಹಚ್ಚುತ್ತದೆ ಮತ್ತು ಮುಂಚಿತವಾಗಿಯೇ ಇದರ ಬಗ್ಗೆ ಎಚ್ಚರಿಕೆ ನೀಡುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಇದಕ್ಕಾಗಿ ಪ್ರಪಂಚದಾದ್ಯಂತ ಕಂಪನಿಗಳು ಸಾಕಷ್ಟು ಹಣ ಖರ್ಚು ಮಾಡುತ್ತಿವೆ. ಆದರೆ ಬ್ರಿಟಿಷ್ ವಿಜ್ಞಾನಿಗಳು ಹೇಳುವಂತೆ, ಮನುಷ್ಯರು ದೊಡ್ಡ ರೀತಿಯ ಪೈಪ್ಲೈನ್ನ ಸೋರಿಕೆಯನ್ನು ಪತ್ತೆ ಮಾಡಬಹುದು. ಆದರೆ ಚಿಕ್ಕದಾಗಿರುವ ಸೋರಿಕೆಯನ್ನು ಗ್ರಹಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಈ ಸಲುವಾಗಿ ಚಿಕ್ಕ ರೋಬೋಟ್‌ಗಳು ಆವಿಷ್ಕಾರಕ್ಕೆ ಬಂದಿವೆ. ತಪಾಸಣೆ ಮಾಡಲು ಮತ್ತು ದೋಷಗಳನ್ನು ಗುರುತಿಸಲು ಸೂಕ್ತವಲ್ಲದ ಪೈಪ್‌ಗಳಿಗೆ ಹೋಗಲು ಕೆಲವು ಕಂಪನಿಗಳು ಟೆಥರ್ಡ್ ರೋಬೋಟ್‌ಗಳನ್ನು ಬಳಸುತ್ತಿವೆ. ಆದರೆ ಅವುಗಳನ್ನು ತಂತಿಗಳು ಮತ್ತು ಇತರ ಸಾಧನಗಳಿಂದ ಸಂಪರ್ಕಿಸಲಾಗಿದೆ.