ಬೆರ್ಹಾಂಪುರ, ಒಡಿಶಾ:ಎಲೆಕ್ಟ್ರಾನಿಕ್ ವೇಸ್ಟ್ ಮೂಲಕ ಒಡಿಶಾದಲ್ಲಿ ನಿರ್ಮಿಸಲಾಗಿರುವ ರೋಬೋ ಮಾದರಿಯ ಕಲಾಕೃತಿಯೊಂದು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲಾಗಿದೆ. ಬೆರ್ಹಾಂಪುರದಲ್ಲಿರುವ ಈ ರೋಬೋ 30 ಅಡಿ ಎತ್ತರ ಮತ್ತು 3 ಟನ್ ತೂಕವಿದ್ದು, ಎತ್ತರದ ಇ-ತ್ಯಾಜ್ಯದ ಕಲಾಕೃತಿ ಎಂದು ದಾಖಲಾಗಿದೆ.
2021ರ ವಿಶ್ವ ಪರಿಸರ ದಿನದಂದು ಬೆರ್ಹಾಂಪುರ ನಗರದಲ್ಲಿರುವ ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ನಲ್ಲಿ ತರಬೇತಿ ಪಡೆದವರು ಈ ಕಲಾಕೃತಿಯನ್ನು ರಚನೆ ಮಾಡಿದ್ದು, ಈ ಆ ಕಲಾಕೃತಿ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ಗೆ ಸೇರ್ಪಡೆಯಾಗಿದೆ.
ಎಲೆಕ್ಟ್ರಾನಿಕ್ ಆಟಿಕೆಗಳು, ಪ್ರಿಂಟರ್, ಪ್ರಿಂಟರ್ ಕಾರ್ಟ್ರಿಡ್ಜ್, ರ್ಯಾಮ್, ಕೀಬೋರ್ಡ್, ಮೌಸ್, ಪಿಸಿಬಿ, ಮಾನಿಟರ್, ಮೊಬೈಲ್ ಫೋನ್ಗಳು, ಸಿಡಿ ಪ್ಲೇಯರ್, ಟಿವಿ ಮತ್ತು ವಿಸಿಆರ್ ಮುಂತಾದ ಎಲೆಕ್ಟ್ರಾನಿಕ್ ತ್ಯಾಜ್ಯಗಳಿಂದ ದೈತ್ಯಾಕಾರದ ರೋಬೋ ಅನ್ನು ರಚಿಸಲಾಗಿದೆ.
ಇದನ್ನೂ ಓದಿ:ಜಿಯೋದಿಂದ ಟೂ ಪ್ಲಾಟ್ಫಾರ್ಮ್ನಲ್ಲಿ 15 ಮಿಲಿಯನ್ ಡಾಲರ್ ಹೂಡಿಕೆ
ಈ ಹಿಂದೆ, ಬೆರ್ಹಾಂಪುರದ ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಆವರಣದಲ್ಲಿ ಸ್ಥಾಪಿಸಲಾಗಿದ್ದ ತ್ಯಾಜ್ಯ ಕಲಾಕೃತಿಗಳ ಪಾರ್ಕ್ ಅನ್ನು ಏಷ್ಯಾದ ಅತಿದೊಡ್ಡ ತ್ಯಾಜ್ಯ ಕಲಾಕೃತಿಗಳ ಪಾರ್ಕ್ ಎಂದು ಘೋಷಿಸಲಾಗಿತ್ತು. ಈಗ ಇಲ್ಲಿರುವ ರೋಬೋ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲಿಸಲ್ಪಟ್ಟಿದೆ.