ಡೆಹ್ರಾಡೂನ್ (ಉತ್ತರಾಖಂಡ): ಕ್ಯಾಬಿನೆಟ್ ಸಚಿವ ಸಹೋದರನ ಮನೆಗೆ ಹಾಡಹಗಲೇ ದುಷ್ಕರ್ಮಿಗಳು ನುಗ್ಗಿ ಒಂದು ಕೋಟಿ ರೂಪಾಯಿ ದರೋಡೆ ಮಾಡಿರುವ ಘಟನೆ ಉತ್ತರಾಖಂಡನ ಡೆಹ್ರಾಡೂನ್ ಜಿಲ್ಲೆಯಲ್ಲಿ ನಡೆದಿದೆ.
ಸಚಿವ ಪ್ರೇಮಚಂದ್ ಅಗರ್ವಾಲ್ ಸಹೋದರರಾದ ಉದ್ಯಮಿ ಶೇಷಪಾಲ್ ಅಗರ್ವಾಲ್ ಎಂಬುವರು ಮನೆಯಲ್ಲಿ ಈ ದರೋಡೆ ನಡೆದಿದೆ. ದೋಯಿವಾಲಾ ಕೊಟ್ವಾಲಿ ಪ್ರದೇಶದ ಘರತ್ ವಾಲಿ ಗಲ್ಲಿಯಲ್ಲಿ ಉದ್ಯಮಿ ಶೇಷಪಾಲ್ ಅಗರ್ವಾಲ್ ಅವರ ಮನೆ ಇದ್ದು, ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಆರು ಜನರ ದುಷ್ಕರ್ಮಿಗಳು ಮನೆಗೆ ನುಗ್ಗಿ ದರೋಡೆ ಮಾಡಿದ್ದಾರೆ.
ಹಾಡಹಗಲೇ ಸಚಿವರ ಸಹೋದರನ ಮನೆಗೆ ನುಗ್ಗಿ ಒಂದು ಕೋಟಿ ರೂಪಾಯಿ ದರೋಡೆ ಮನೆಯಲ್ಲಿ ಉದ್ಯಮಿ ಶೇಷಪಾಲ್ ಪತ್ನಿ ಹಾಗೂ ಇಬ್ಬರು ಕೆಲಸದವರು ಇದ್ದಾಗ ಮಾತ್ರ ದುಷ್ಕರ್ಮಿಗಳು ಮನೆಗೆ ಹೊಕ್ಕು, ಅವರನ್ನು ಒತ್ತೆಯಾಳಾಗಿಟ್ಟುಕೊಂಡು ದರೋಡೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಸಚಿವ ಪ್ರೇಮಚಂದ್ ಅಗರ್ವಾಲ್, ಎಸ್‌ಎಸ್‌ಪಿ ದಿಲೀಪ್ ಸಿಂಗ್ ಕುನ್ವಾರ್ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಇನ್ನು, ದುಷ್ಕರ್ಮಿಗಳ ತಂಡ ಮನೆಗೆ ನುಗ್ಗಿರುವ ದೃಶ್ಯಗಳು ಮನೆಯ ಹೊರಗೆ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಇದರ ಆಧಾರದ ಮೇಲೆ ಪೊಲೀಸರು ದರೋಡೆಕೋರರ ಪತ್ತೆ ಕ್ರಮ ವಹಿಸಿದ್ದಾರೆ.
ಇದನ್ನೂ ಓದಿ:ಇಬ್ಬರು ಹೆಣ್ಣು ಮಕ್ಕಳೊಂದಿಗೆ ನದಿಗೆ ಹಾರಿ ತಾಯಿ ಆತ್ಮಹತ್ಯೆ