ಲಖನೌ(ಉತ್ತರ ಪ್ರದೇಶ): ಉತ್ತರ ಪ್ರದೇಶದಲ್ಲಿ ನಕಲಿ ವಧುಗಳ ಕಾಟ ಜೋರಾಗಿದೆ. ಇದೀಗ ಮಥುರಾ ಮತ್ತು ಲಖನೌದಲ್ಲಿ ಎರಡು ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಅಮಾಯಕ ಹುಡುಗರನ್ನು ಪ್ರೀತಿಯ ಬಲೆಗೆ ಬೀಳಿಸುವ ಈ ವಂಚಕಿಯರು ಮದುವೆ ಮಾಡಿಕೊಂಡು, ಬಳಿಕ ಗಂಡನ ಮನೆಯಲ್ಲಿದ್ದ ನಗದು, ಚಿನ್ನಾಭರಣ ದೋಚುತ್ತಿದ್ದಾರೆ. ಇಂಥ ದುಷ್ಕೃತ್ಯಕ್ಕಾಗಿ ಯುವತಿಯರು ಪ್ರಿಯಕರನ ನೆರವು ಪಡೆಯುತ್ತಿದ್ದಾರೆ.
ರಾಜಸ್ಥಾನದಲ್ಲಿ ಓದುತ್ತಿದ್ದೇನೆ. ಲಖನೌ ಗೋಸೈಗಂಜ್ ಪ್ರದೇಶದಲ್ಲಿ ವಾಸವಿರುವುದಾಗಿ ಪರಿಚಯಿಸಿಕೊಂಡ ಯುವತಿಯೊಬ್ಬಳು ಮದುವೆ ದಿನ ಚಿನ್ನಾಭರಣದೊಂದಿಗೆ ಪ್ರಿಯಕರನ ಜೊತೆ ಎಸ್ಕೇಪ್ ಆಗಿದ್ದಾಳೆ. ಈ ಹಿಂದೆಯೂ ಕೂಡ ಇಂತಹ ಅನೇಕ ಪ್ರಕರಣಗಳಲ್ಲಿ ಈಕೆ ಭಾಗಿಯಾಗಿರುವುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ.
ಮತ್ತಷ್ಟು ವಿವರ: 2022ರ ಜುಲೈ 4ರಂದು ಯುವಕನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಯುವತಿಯೊಬ್ಬಳು ತನ್ನ ಅತ್ತೆ ಹಾಗೂ ಗಂಡನಿಗೆ ಆಹಾರದಲ್ಲಿ ಅಮಲು ಬರುವ ಪದಾರ್ಥ ತಿನ್ನಿಸಿ, ಮೂರ್ಛೆಗೊಳಿಸಿದ್ದಾಳೆ. ನಂತರ ಮನೆಯಿಂದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿ ಆಗಿದ್ದಾಳೆ. ಬೆಳಗ್ಗೆದ್ದು ನೋಡಿದಾಗ ಎಲ್ಲರಿಗೂ ದಿಗ್ಬ್ರಮೆಯಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಆರೋಪಿ ವಧುವಿಗೋಸ್ಕರ ಹುಡುಕಾಟ ನಡೆಸಿದ್ದ ಪೊಲೀಸರು ಕೊನೆಗೂ ಆಕೆಯನ್ನು ಬಂಧಿಸಿದ್ದಾರೆ.