ಕರ್ನಾಟಕ

karnataka

ETV Bharat / bharat

ಟಾರ್​​​​​​ ತುಂಬಿದ ಟ್ಯಾಂಕರ್​​ಗೆ ಬಸ್​ ಡಿಕ್ಕಿ: ​​​​​​​​​7 ಮಂದಿಗೆ ಸುಟ್ಟ ಗಾಯ.. ಇಬ್ಬರ ಸ್ಥಿತಿ ಗಂಭೀರ - Roadways bus collides with tanker

ಬಿಜ್ನೋರ್​ನಲ್ಲಿ ಟಾರ್​ ತುಂಬಿದ ಟ್ಯಾಂಕರ್​ಗೆ ಬಸ್​ವೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಟ್ಯಾಂಕರ್​ನಲ್ಲಿದ್ದ ಬಿಸಿ ಟಾರ್​ ಸೋರಿಕೆಯಾಗಿ ಏಳು ಮಂದಿ ಸುಟ್ಟ ಗಾಯಗಳಿಂದ ನರಳುತ್ತಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ.

ಬಿಜ್ನೋರ್‌
ಬಿಜ್ನೋರ್‌

By ETV Bharat Karnataka Team

Published : Nov 3, 2023, 6:28 PM IST

ಬಿಜ್ನೋರ್ (ಉತ್ತರ ಪ್ರದೇಶ) :ಇಲ್ಲಿನಸಿಯೋಹರಾ ಧಾಂಪುರ್ ಮುಖ್ಯರಸ್ತೆಯಲ್ಲಿ ವೇಗವಾಗಿ ಬಂದ ಬಸ್​ವೊಂದು ಟಾರ್ ತುಂಬಿದ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿರುವ ಘಟನೆ ಇಂದು (ಶುಕ್ರವಾರ) ನಡೆದಿದೆ. ಟ್ಯಾಂಕರ್​ನಲ್ಲಿದ್ದ ಬಿಸಿ ಕಲ್ಲಿದ್ದಲು ಟಾರ್ ಸೋರಿಕೆಯಾದ ಪರಿಣಾಮ ಟ್ರ್ಯಾಕ್ಟರ್‌ನಲ್ಲಿ ಕುಳಿತಿದ್ದ ಮೂವರು ಹಾಗೂ ಬಸ್‌ನಲ್ಲಿದ್ದ ನಾಲ್ವರು ಪ್ರಯಾಣಿಕರು ಸೇರಿದಂತೆ ಒಟ್ಟು ಏಳು ಮಂದಿಗೆ ಸುಟ್ಟ ಗಾಯಗಳಾಗಿವೆ. ಅಪಘಾತದ ನಂತರ ಕಿರುಚಾಟ ಕೇಳಿದೆ. ಈ ವೇಳೆ, ಸ್ಥಳದಲ್ಲಿ ಜನ ಜಮಾಯಿಸಿ, ಸುಟ್ಟು ಗಾಯಗೊಂಡಿದ್ದ ಜನರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಡಿಕ್ಕಿಯ ನಂತರ ಜನರ ಮೇಲೆ ಚೆಲ್ಲಿದ ಬಿಸಿ ಟಾರ್:ಸಿಯೋಹರಾ ಪ್ರದೇಶದ ಜಿಲ್ಲಾ ಗ್ರಾಮದಲ್ಲಿ ರಸ್ತೆ ನಿರ್ಮಾಣ ಸಾಮಗ್ರಿಗಳ ಡಿಪೋ ಇದೆ. ಇಲ್ಲಿಂದ ವಿವಿಧ ವಾಹನಗಳ ಮೂಲಕ ವಸ್ತುಗಳನ್ನು ಸಾಗಿಸಲಾಗುತ್ತದೆ. ಶುಕ್ರವಾರ ಬೆಳಗ್ಗೆ ಬಿಸಿ ಟಾರ್ ತುಂಬಿದ ಟ್ಯಾಂಕರ್ ಧಂಪುರ ಕಡೆಗೆ ಹೋಗುತ್ತಿತ್ತು. ಈ ಸಮಯದಲ್ಲಿ ಸಿಯೋಹರಾ-ಧಾಂಪುರ್ ಮುಖ್ಯರಸ್ತೆಯ ಚಂಚಲ್‌ಪುರ ಗ್ರಾಮದ ಬಳಿ ಧಂಪುರ್ ಡಿಪೋದ ರೋಡ್‌ವೇಸ್ ಬಸ್ ವೇಗವಾಗಿ ಹೋಗುತ್ತಿತ್ತು. ಇದೇ ವೇಳೆ, ಟಾರ್ ತುಂಬಿದ ಟ್ಯಾಂಕರ್​ಗೆ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟ್ಯಾಂಕರ್‌ನ ಮುಚ್ಚಳ ತೆರೆದುಕೊಂಡಿದೆ. ಇದಾದ ಬಳಿಕ ಬಿಸಿ ಟಾರ್ ಬಸ್ ಮೇಲೆ ಬಿದ್ದಿದೆ. ಇದರಿಂದಾಗಿ ಕಿಟಕಿಯ ಬಳಿ ಕುಳಿತಿದ್ದ ನಾಲ್ವರು ಪ್ರಯಾಣಿಕರಿಗೆ ಪೆಟ್ಟಾಗಿದೆ. ಇದೇ ವೇಳೆ ಇನ್ನೊಂದು ಕಡೆಯಿಂದ ಟ್ರ್ಯಾಕ್ಟರ್‌ನಲ್ಲಿ ಕುಳಿತಿದ್ದ ಮೂವರು ಕಾರ್ಮಿಕರ ಮೇಲೂ ಬಿಸಿ ಬಿಸಿ ಟಾರ್ ಬಿದ್ದಿದೆ. ಇದರಿಂದ ಒಟ್ಟು ಏಳು ಮಂದಿಗೆ ಸುಟ್ಟ ಗಾಯಗಳಾಗಿವೆ.

ಸುಟ್ಟು ಕರಕಲಾದ ಇಬ್ಬರ ಸ್ಥಿತಿ ಚಿಂತಾಜನಕ: ಅವಘಡ ಸಂಭವಿಸಿದ ಬಳಿಕ ಸ್ಥಳದಲ್ಲಿ ಜನ ಕಿರುಚಾಡಿಕೊಂಡಿದ್ದಾರೆ. ಈ ವೇಳೆ ಗ್ರಾಮಸ್ಥರ ಗುಂಪು ಜಮಾಯಿಸಿದೆ. ಗ್ರಾಮದ ಮುಖ್ಯಸ್ಥ ಖಿಜ್ರಿ ಕೂಡ ಸಮೀಪಕ್ಕೆ ಬಂದಿದ್ದಾರೆ. ಗ್ರಾಮದ ಮುಖ್ಯಸ್ಥರು ಹೇಳುವ ಪ್ರಕಾರ, ಅಪಘಾತದ ನಂತರ ಅವರು 108 ಮತ್ತು 112 ಗೆ ಡಯಲ್ ಮಾಡಿದ್ದಾರೆ. ಆದರೆ, ಆ ಸಮಯದಲ್ಲಿ ಯಾರೊಬ್ಬರು ಕರೆ ಸ್ವೀಕರಿಸಿಲ್ಲ. ನಂತರ ಗ್ರಾಮಸ್ಥರ ಸಹಾಯದಿಂದ ಸುಟ್ಟು ಗಾಯಗೊಂಡವರನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.

ಸಿಎಚ್‌ಸಿಯಿಂದ ಉನ್ನತ ಕೇಂದ್ರಕ್ಕೆ ಶಿಫಾರಸು : ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ವಿಶಾಲ್ ದಿವಾಕರ್ ಮಾತನಾಡಿ, ಕಲ್ಲಿದ್ದಲು ಟಾರ್‌ನಿಂದ ಅನೇಕ ಜನರಿಗೆ ಸುಟ್ಟಗಾಯಗಳಾಗಿವೆ. ಪ್ರಥಮ ಚಿಕಿತ್ಸೆಯ ನಂತರ ಎಲ್ಲರನ್ನೂ ಉನ್ನತ ಚಿಕಿತ್ಸೆಗೆ ರವಾನಿಸಲಾಗಿದೆ. ಅಪಘಾತ ಸಂಭವಿಸಿದ ಸ್ವಲ್ಪ ಸಮಯದ ನಂತರ ಪೊಲೀಸ್ ಠಾಣೆಯ ಮುಖ್ಯಸ್ಥರು ತಂಡದೊಂದಿಗೆ ಸ್ಥಳಕ್ಕೆ ಬಂದಿದ್ದಾರೆ ಎಂದು ಗ್ರಾಮದ ಮುಖಂಡರು ತಿಳಿಸಿದ್ದಾರೆ. ಸುಟ್ಟು ಗಾಯಗೊಂಡವರಲ್ಲಿ ರಸ್ತೆ ಮಾರ್ಗದ ಬಸ್ ಚಾಲಕರು ಮತ್ತು ಕಂಡಕ್ಟರ್‌ಗಳೂ ಇದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಕೆಲವರ ಮುಖದ ಮೇಲೂ ಬಿಸಿ ಟಾರ್ ಬಿದ್ದಿದೆ. ಅವರ ಸ್ಥಿತಿ ನೋಡೋಕೆ ಆಗುತ್ತಿಲ್ಲ ಎಂದಿದ್ದಾರೆ.

ಇದನ್ನೂ ಓದಿ :ಖಾಸಗಿ ಬಸ್ - ಓಮಿನಿ ಕಾರು ಡಿಕ್ಕಿ.. ಇಬ್ಬರ ಸಾವು, 10 ಮಂದಿಗೆ ಗಾಯ

ABOUT THE AUTHOR

...view details