ಕರ್ನಾಟಕ

karnataka

ETV Bharat / bharat

ಬೈಕ್​ಗಳಿಗೆ ಕಾರು ಡಿಕ್ಕಿ.. ಮಗುವಿನೊಂದಿಗೆ ತಂದೆ-ತಾಯಿ ಸೇರಿ ನಾಲ್ವರು ಸಾವು! - ಸಾಗರ್​ ಅಪಘಾತ ಸುದ್ದಿ

ಮಧ್ಯಪ್ರದೇಶದ ಸಾಗರ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಕಾರು ಇಬ್ಬರು ಬೈಕ್ ಸವಾರರಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಎರಡು ವರ್ಷದ ಬಾಲಕಿ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಸಾಗರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ..

Car collided with two bikes in Madhya Pradesh  Madhya Pradesh crime news  sagar accident news  Road accident in sagar  sagar Car collided with two bikes  ಮಧ್ಯಪ್ರದೇಶದಲ್ಲಿ ಎರಡು ಬೈಕ್​ಗಳಿಗೆ ಡಿಕ್ಕಿ ಹೊಡೆದ ಕಾರು  ಮಧ್ಯಪ್ರದೇಶದ ಅಪರಾಧ ಸುದ್ದಿ  ಸಾಗರ್​ ಅಪಘಾತ ಸುದ್ದಿ  ಸಾಗರದಲ್ಲಿ ಬೈಕ್​ಗಳಿಗೆ ಡಿಕ್ಕಿ ಹೊಡೆದ ಕಾರ್​
ಮಗುವಿನೊಂದಿಗೆ ತಂದೆ-ತಾಯಿ ಸೇರಿ ನಾಲ್ವರು ಸಾವು

By

Published : Apr 22, 2022, 10:16 AM IST

ಸಾಗರ್ ​:ಕಾರೊಂದು ಜಿಲ್ಲೆಯಲ್ಲಿ ಅವಾಂತರ ಸೃಷ್ಟಿಸಿದೆ. ಕಾರನ್ನು ವೇಗವಾಗಿ ಚಲಿಸುತ್ತಿದ್ದ ಚಾಲಕ ನಿಯಂತ್ರಣ ಕಳೆದುಕೊಂಡು ರಸ್ತೆ ಮೇಲೆ ಚಲಿಸುತ್ತಿದ್ದ ಬೈಕ್​ಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ತಂದೆ-ತಾಯಿ ಜೊತೆ ಎರಡು ವರ್ಷದ ಮಗು ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ. ಈ ಘಟನೆ ಬಾಂದ್ರಿ ಪೊಲೀಸ್ ಠಾಣೆಯ ಪಾಲಿ ಗ್ರಾಮದ ಬಳಿ ಸಂಭವಿಸಿದೆ.

ವೇಗವಾಗಿ ಬಂದ ಕಾರು ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಎರಡು ವರ್ಷದ ಹೆಣ್ಣು ಮಗು, ಆಕೆಯ ಪೋಷಕರು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಕಾರು ಚಾಲಕ ಸೇರಿ 3 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಸಾಗರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಪ್ರಕರಣದ ತನಿಖೆ ಆರಂಭಿಸಿದ್ದಾರೆ.

ಓದಿ:ತುರ್ತು ಭೂ ಸ್ಪರ್ಶ ವೇಳೆ ಟ್ರಕ್​ಗೆ ಡಿಕ್ಕಿ ಹೊಡೆದ ಜೆಟ್​ ವಿಮಾನ.. ಪೈಲಟ್​ ಸೇರಿ ಆರು ಜನ ದುರ್ಮರಣ

ಅಪಘಾತದ ಬಗ್ಗೆ ಖುರೈ ಎಸ್‌ಡಿಒಪಿ ಸುಮಿತ್ ಕೆರ್ಕೆಟ್ಟಾ ಮಾತನಾಡಿ, ಕಾರು (ಯುಪಿ 16 ಸಿಡಬ್ಲ್ಯೂ 3235) ಉತ್ತರ ಪ್ರದೇಶದಿಂದ ಬರುತ್ತಿತ್ತು. ಪಳಿ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿದೆ. ಈ ವೇಳೆ ಕಾರು ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿಯಾದ ರಭಸಕ್ಕೆ ಬೈಕ್​ನಲ್ಲಿದ್ದವರು ದೂರಕ್ಕೆ ಹಾರಿ ಬಿದ್ದಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ವೇಳೆ ಮಹಿಳೆಯೊಬ್ಬರು ಜಿಲ್ಲಾಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.

ಮೃತರು ಭರತ್ ಅಹಿರ್ವಾರ್, ಮಲ್ಖಾನ್ ರಜಾಕ್, ಅವರ ಪತ್ನಿ ರಾಜಕುಮಾರಿ ಮತ್ತು 2 ವರ್ಷದ ಮಗಳು ರಿತಿಕಾ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ನೋಯ್ಡಾ ನಿವಾಸಿ ಕಾರು ಚಾಲಕ ಮನಮೋಹನ್ ಚೌಹಾಣ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಓದಿ:ಕಾರು-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು, ಹೊತ್ತಿ ಉರಿದ ಬೈಕ್

ಬಾಂದ್ರಿ ಪೊಲೀಸ್ ಠಾಣೆಯಿಂದ ಬಂದ ಮಾಹಿತಿ ಪ್ರಕಾರ, ಈ ಘಟನೆಯಲ್ಲಿ ಮಲ್ಖಾನ್ ಎಂಬಾತ ತನ್ನ ಮಗಳು ರಿತಿಕಾ ಮತ್ತು ಪತ್ನಿ ರಾಜಕುಮಾರಿಯೊಂದಿಗೆ ಸಾಗರದಿಂದ ತನ್ನ ಗ್ರಾಮಕ್ಕೆ ಬೈಕ್​ನಲ್ಲಿ ಹೋಗುತ್ತಿದ್ದರು. ಮಾಲ್ತೊನ್ ನಿವಾಸಿ ಭರತ್ ಎಂಬಾತ ಮತ್ತೊಂದು ಬೈಕ್‌ನಲ್ಲಿ ತನ್ನ ಸಹೋದರನೊಂದಿಗೆ ಮಾವನ ಮನೆಯಲ್ಲಿದ್ದ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದ. ಈ ವೇಳೆ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ABOUT THE AUTHOR

...view details