ಕರ್ನಾಟಕ

karnataka

ETV Bharat / bharat

ಹೊಸ ವರ್ಷದ ಸಂಭ್ರಮದಲ್ಲಿ ಶೋಕ: ಭೀಕರ ರಸ್ತೆ ಅಪಘಾತದಲ್ಲಿ 7 ಮಂದಿ ದುರ್ಮರಣ - road accident in rajasthan

ಹೊಸ ವರ್ಷದ ಸಂಭ್ರಮದ ನಡುವೆಯೇ ರಾಜಸ್ಥಾನ, ಛತ್ತೀಸ್​ಗಢದಲ್ಲಿ ರಕ್ತ ಹರಿದಿದೆ. ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಪೊಲೀಸ್​ ಕಾನ್​ಸ್ಟೇಬಲ್​ ಸೇರಿ 7 ಮಂದಿ ದುರ್ಮರಣ ಹೊಂದಿದ್ದಾರೆ. ಸಂಭ್ರಮಾಚರಣೆ ಮಾಡಬೇಕಿದ್ದ ಮನೆಗಳಲ್ಲಿ ಸೂತಕ ಆವರಿಸಿದೆ.

road accident in rajasthan
ರಾಜಸ್ಥಾನದಲ್ಲಿ ಐವರು ದುರ್ಮರಣ

By

Published : Jan 1, 2023, 9:48 AM IST

Updated : Jan 1, 2023, 11:07 AM IST

ರಾಜಸ್ಥಾನ/ಛತ್ತೀಸ್​ಗಢ:ಹೊಸ ವರ್ಷದ ಸಂಭ್ರಮದ ನಡುವೆ ರಾಜಸ್ಥಾನ ಮತ್ತು ಛತ್ತೀಸ್​ಗಢದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ. ರಾಜಸ್ಥಾನದ ಹನುಮಾನ್​ಗಢ ಜಿಲ್ಲೆಯಲ್ಲಿ ನಡೆದ ಟ್ರಕ್​ ಮತ್ತು ಕಾರು ಮುಖಾಮುಖಿಯಲ್ಲಿ ಐವರು ಮೃತಪಟ್ಟು, ಓರ್ವ ಗಂಭೀರ ಗಾಯಗೊಂಡಿದ್ದಾನೆ. ಛತ್ತೀಸ್​ಗಢದ ರಾಯಪುರದಲ್ಲಿ ಬೈಕ್​ ಅಪಘಾತದಲ್ಲಿ ಪೊಲೀಸ್​ ಕಾನ್​ಸ್ಟೇಬಲ್​ ಸೇರಿ ಇಬ್ಬರು ಮೃತಪಟ್ಟಿದ್ದಾರೆ.

ಟ್ರಕ್​​ ರೂಪದಲ್ಲಿ ಬಂದೆರಗಿದ ಜವರಾಯ:ಹನುಮಾನ್​ಗಢ ಜಿಲ್ಲೆಯಲ್ಲಿ ಇಟ್ಟಿಗೆ ತುಂಬಿಕೊಂಡು ಸರ್ದಾರ್​ ನಗರದ ಕಡೆಗೆ ಹೋಗುತ್ತಿದ್ದ ಟ್ರಕ್​​ಗೆ ಕಾರು ರಭಸವಾಗಿ ಇಂದು ಬೆಳಗ್ಗೆ ಡಿಕ್ಕಿಯಾಗಿದೆ. ಇದರಿಂದ ಕಾರಿನಲ್ಲಿದ್ದ 6 ಜನರ ಪೈಕಿ ಐವರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಓರ್ವ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದ ಬಳಿಕ ಟ್ರಕ್​ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆ ನಿಖರವಾಗಿ ಹೇಗೆ ನಡೆಯಿತು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

ಪರಾರಿಯಾದ ಟ್ರಕ್​​ ಚಾಲಕನ ಪತ್ತೆ ನಡೆಸಲಾಗುತ್ತಿದೆ. ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ. ಶವಪರೀಕ್ಷೆ ನಡೆಸಲು ಆಸ್ಪತ್ರೆಗೆ ರವಾನಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕರ್ತವ್ಯಕ್ಕೆ ಹೋಗ್ತಿದ್ದ ಪೊಲೀಸ್​ ಸಾವು:ಹೊಸ ವರ್ಷದ ಮುನ್ನಾದಿನ ಸಂಭ್ರಮಾಚರಣೆಯ ಬಂದೋಬಸ್ತ್​ಗೆ ತೆರಳುತ್ತಿದ್ದ ಪೊಲೀಸ್​ ಕಾನ್​ಸ್ಟೇಬಲ್​ ಮತ್ತು ಇನ್ನೊಬ್ಬ ವ್ಯಕ್ತಿ ಛತ್ತೀಸ್​ಗಢದ ರಾಯಪುರದಲ್ಲಿ ನಡೆದ ಬೈಕ್​ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ರಸ್ತೆ ಬದಿ ನಿಂತಿದ್ದ ಟ್ರಕ್​ಗೆ ಬೈಕ್​ ಸವಾರ ರಭಸವಾಗಿ ಡಿಕ್ಕಿ ಹೊಡೆದಿದ್ದಾನೆ. ಆತ ಸ್ಥಳದಲ್ಲೇ ಅಸುನೀಗಿದ್ದಾನೆ.

ಇದೇ ವೇಳೆ ಅದೇ ಮಾರ್ಗವಾಗಿ ಬರುತ್ತಿದ್ದ ಪೊಲೀಸ್​ ಕಾನ್​ಸ್ಟೇಬಲ್​ ತನ್ನ ಬೈಕ್​ ನಿಯಂತ್ರಿಸಲು ಆಗದೇ ಟ್ರಕ್​​ಗೆ ಗುದ್ದಿದ್ದಾನೆ. ಗಂಭೀರ ಗಾಯಗೊಂಡ ಆರಕ್ಷಕನನ್ನು ಹತ್ತಿರ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದರು ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದರು.

ಇದನ್ನೂ ಓದಿ:ಎನ್ಐಎ ವಾರ್ಷಿಕ ಪ್ರಕರಣಗಳ ಅಂಕಿ ಅಂಶ ; ಇದೇ ಮೊದಲ ಬಾರಿಗೆ ಕೇಸ್​ಗಳ ಸಂಖ್ಯೆ ಅಧಿಕ

Last Updated : Jan 1, 2023, 11:07 AM IST

ABOUT THE AUTHOR

...view details