ಬಿಹಾರ: ಪೂರ್ನಿಯಾದ ರೌತಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾರಿ ರಸ್ತೆ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಸ್ಕಾರ್ಪಿಯೋ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ನೀರು ತುಂಬಿದ ಹೊಂಡಕ್ಕೆ ಉರುಳಿ ಬಿದ್ದ ಪರಿಣಾಮ 8 ಮಂದಿ ಸಾವನ್ನಪ್ಪಿದ್ದಾರೆ.
ಕಾರಿನಲ್ಲಿ ಒಟ್ಟು ಹತ್ತು ಜನರಿದ್ದರು. ಅಪಘಾತ ಸಂಭವಿಸಿದ ವೇಳೆ ಇಬ್ಬರು ಹೇಗೋ ಇಳಿದು ಪ್ರಾಣ ಉಳಿಸಿಕೊಂಡಿದ್ದಾರೆ. ಇನ್ನುಳಿದ 8 ಮಂದಿ ಸಾವನ್ನಪ್ಪಿದ್ದು, ಮೃತರು ಕಿಶನ್‌ಗಂಜ್‌ನ ನುನಿಯಾ ಗ್ರಾಮದ ನಿವಾಸಿಗಳು ಎನ್ನಲಾಗಿದೆ.
ಚಾಲಕನ ನಿರ್ಲಕ್ಷ್ಯದಿಂದ ಸಂಭವಿಸಿದ ದುರಂತ:ಸಂಬಂಧಿಕರೊಬ್ಬರ ವಿವಾಹ ಕಾರ್ಯಕ್ರಮವನ್ನ ಮುಗಿಸಿ ಕಿಶನ್ಗಂಜ್ಗೆ ಹಿಂದಿರುವಾಗ ಪೂರ್ನಿಯಾದ ಉಂಗಾರ್ ಒಪಿಯ ಕಾಂಜಿಯಾ ಮಿಡಲ್ ಸ್ಕೂಲ್ ಬಳಿ ಘಟನೆ ಸಂಭವಿಸಿದೆ. ಗಾಯಾಳುಗಳ ಚೀರಾಟ ಕೇಳಿ ಸ್ಥಳಕ್ಕಾಮಿಸಿದ ಅಕ್ಕಪಕ್ಕದರು ಕಾರಿನಲ್ಲಿದ್ದ ಮೃತ ದೇಹಗಳನ್ನ ಹೊರತೆಗೆದಿದ್ದಾರೆ. ಚಾಲಕನ ಅತಿಯಾದ ವೇಗ ಮತ್ತು ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ. ಈ ಕುರಿತು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮಾಹಿತಿ ಪಡೆದಿದ್ದು, ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ:ಮಾಟಗಾತಿಯೆಂದು ಮಹಿಳೆಯ ಹತ್ಯೆಗೈದು ಶವ ಬೆಟ್ಟದಿಂದ ಕೆಳಗೆ ಎಸೆದರು!