ಕರ್ನಾಟಕ

karnataka

ETV Bharat / bharat

ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಭಕ್ತಾದಿಗಳ ಮೇಲೆ ಹರಿದ ಟ್ರಕ್​.. ಐದು ಜನ ಸಾವು, ಐವರಿಗೆ ಗಾಯ - ಭಿಲ್ವಾರಾ ಜಿಲ್ಲೆಯ ರಾಯಪುರ ಪೊಲೀಸ್ ಠಾಣೆ

ಭಾನುವಾರ ರಾತ್ರಿ ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಐವರು ಭಕ್ತರು ಮೃತಪಟ್ಟಿದ್ದಾರೆ. ಅಲ್ಲದೇ 5 ಮಂದಿ ಗಾಯಗೊಂಡಿದ್ದಾರೆ.

Road Accident in Pali  pilgrims died in Pali  Trailer hit devotees  Rajasthan Road Accident Latest News  Road Accident in Pali  ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತ  ರಸ್ತೆ ಅಪಘಾತದಲ್ಲಿ ಐವರು ಭಕ್ತರು ಮೃತ  ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಭಕ್ತಾದಿಗಳ ಮೇಲೆ ಹರಿದ ಟ್ರಕ್  ಮುಕುನಪುರ ಗ್ರಾಮದ ಬಳಿ ಭೀಕರ ರಸ್ತೆ ಅಪಘಾತ
ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಭಕ್ತಾದಿಗಳ ಮೇಲೆ ಹರಿದ ಟ್ರಕ್

By

Published : Aug 15, 2022, 11:18 AM IST

ಪಾಲಿ, ರಾಜಸ್ಥಾನ:ಭಾನುವಾರ ತಡರಾತ್ರಿ ರೋಹತ್ ಪೊಲೀಸ್ ಠಾಣೆ ವ್ಯಾಪ್ತಿಯ ಮುಕುನಪುರ ಗ್ರಾಮದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಾಲ್ನಡಿಗೆಯಲ್ಲಿ ಹೋಗುತ್ತಿದ್ದ ಭಕ್ತರನ್ನು ಟ್ರೇಲರ್​ವೊಂದು ಗುದ್ದಿದೆ. ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಭಕ್ತರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಅಪಘಾತದ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು. ಬಳಿಕ ಮೃತ ದೇಹವನ್ನು ವಶಕ್ಕೆ ಪಡೆದು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದಾರೆ.

ಭಿಲ್ವಾರಾ ಜಿಲ್ಲೆಯ ರಾಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ಖೇಮ್ನಾ ಗ್ರಾಮದ ನಿವಾಸಿ ಪಪ್ಪು ಪುತ್ರ ಹೀರಾಲಾಲ್ ಭಿಲ್ ತನ್ನ ಸಹಚರರೊಂದಿಗೆ ಕಾಲ್ನಡಿಗೆಯಲ್ಲಿ ರಾಮ್‌ದೇವ್ರಾಗೆ ಹೋಗುತ್ತಿದ್ದರು ಎಂದು ಸಿಒ ಮಂಗಳೇಶ್ ಚುಂದಾವತ್ ತಿಳಿಸಿದ್ದಾರೆ. ಭಾನುವಾರ ತಡರಾತ್ರಿ ಮುಕನಪುರ ಗ್ರಾಮದ ಹೊರವಲಯದ ರಸ್ತೆಯಲ್ಲಿ ಇವರೆಲ್ಲರು ಕಾಲ್ನಡಿಗೆಯಲ್ಲಿ ಹೋಗುತ್ತಿದ್ದಾಗ, ಹಿಂದಿನಿಂದ ಬಂದ ಟ್ರೇಲರ್ ಅವರಿಗೆ ಡಿಕ್ಕಿ ಹೊಡೆದಿದೆ. ಪಪ್ಪು ಅವರ ಪುತ್ರ ಹೀರಾಲಾಲ್, ಗಿರ್ಧಾರಿ ಅವರ ಪುತ್ರ ರೋಷನ್​ಲಾಲ್, ಪವನ್ ಅವರ ಪುತ್ರ ಲಾಡು ಜಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪರಾಸ್ ಪುತ್ರ ಕೈಲಾಸ್ ಮತ್ತು ಸುಶೀಲಾ ಪುತ್ರಿ ರತನ್ ಜೋಧ್‌ಪುರದಲ್ಲಿ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ.

ಗಂಭೀರವಾಗಿ ಗಾಯಗೊಂಡಿರುವ 5 ಮಂದಿ ಮಥುರಾದಾಸ್ ಮಾಥುರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಮಾಹಿತಿ ಮೇರೆಗೆ ಸಿಒ ಮಂಗೇಶ್ ಚುಂದಾವತ್ ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮೃತ ದೇಹಗಳನ್ನು ಬಂಗಾರ್ ಆಸ್ಪತ್ರೆಯ ಮೋರ್ಚರಿಯಲ್ಲಿ ಇರಿಸಿದ್ದಾರೆ. ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಓದಿ:ರಸ್ತೆ ಅಪಘಾತದಲ್ಲಿ ಆರು, ಉಗ್ರರ ಗ್ರೆನೇಡ್ ದಾಳಿಯಲ್ಲಿ ಓರ್ವ CRPF ಯೋಧನಿಗೆ ಗಾಯ

ABOUT THE AUTHOR

...view details