ಜಗದಲ್‌ಪುರ(ಛತ್ತೀಸ್ಗಢ): ರಾಯ್‌ಪುರ ಜಗದಲ್‌ಪುರ ಎನ್‌ಎಚ್ 30ರಲ್ಲಿ ಮಟವಾಡ ಸೇತುವೆ ಬಳಿ ಇಂದು ಬೆಳಗ್ಗಿನ ಜಾವ ಖಾಸಗಿ ಬಸ್ ಹಾಗೂ ಟಾಟಾ ನೆಕ್ಸಾನ್ ನಡುವೆ ಅಪಘಾತ ಸಮಭವಿಸಿದ್ದು, ನಾಲ್ವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಯುವಕನೊಬ್ಬ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಆತನೂ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹೇಮಸಾಗರ ಸಿದರ್ ತಿಳಿಸಿದ್ದಾರೆ.
ಜಗದಲ್‌ಪುರ..ಕಾರಿಗೆ ಬಸ್ ಡಿಕ್ಕಿ ಐವರು ಸಾವು - ಕಾರಿಗೆ ಬಸ್ ಡಿಕ್ಕಿ ಐವರು ಸಾವು
ಬಸ್ ಹಾಗೂ ಕಾರಿನ ನಡುವಿನ ಅಪಘಾತದಲ್ಲಿ ನಾಲ್ವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಾಯಗೊಂಡ ಯುವಕ ಕೂಡ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾನೆ.
ಕಾರಿಗೆ ಬಸ್ಸು ಡಿಕ್ಕಿ
ರಾಯ್‌ಪುರ ಕಡೆಯಿಂದ ಬರುತ್ತಿದ್ದ ಟಾಟಾ ನೆಕ್ಸಾನ್ ಕಾರಿಗೆ ಬಸ್ ಡಿಕ್ಕಿ ಹೊಡೆದಿದೆ. ಇದರಲ್ಲಿ ಐದು ಯುವಕರು ಪ್ರಯಾಣಿಸುತ್ತಿದ್ದರು. ಮೃತದೇಹಗಳನ್ನು ಹೊರತೆಗೆಯಲು ಗ್ಯಾಸ್ ಕಟ್ಟರ್‌ಗಳನ್ನು ಬಳಸಲಾಗಿತ್ತು. 4 ಯುವಕರು ಜಗದಲ್‌ಪುರದ ವಿವಿಧ ಸ್ಥಳಗಳಿಂದ ಬಂದಿದ್ದರೆ, ಒಬ್ಬ ಯುವಕ ಸುಕ್ಮಾ ಜಿಲ್ಲೆಯವನು ಎಂದು ಹೇಳಲಾಗುತ್ತಿದೆ. ಮೃತರ ಸಂಬಂಧಿಕರನ್ನು ಪೊಲೀಸರು ಪತ್ತೆ ಮಾಡುತ್ತಿದ್ದಾರೆ.
ಇದನ್ನೂ ಓದಿ :ಕಾಲೇಜ್ ಬಸ್ ಬೈಕ್ ನಡುವೆ ಭೀಕರ ರಸ್ತೆ ಅಪಘಾತ.. ಸವಾರ ಸ್ಥಳದಲ್ಲೇ ಸಾವು