ಕರ್ನಾಟಕ

karnataka

ETV Bharat / bharat

ಟೈರ್​ ಪಂಕ್ಚರ್​​​​ ಆಗಿ ಎದುರಿಗೆ ಬರುತ್ತಿದ್ದ ಟ್ಯಾಂಕರ್​ಗೆ ಗುದ್ದಿದ ಕಾರು.. ದರ್ಗಾಕ್ಕೆ ತೆರಳುತ್ತಿದ್ದ ಐವರು ಸ್ಥಳದಲ್ಲೇ ಸಾವು! - ಬರೇಲಿಯ ಇಜ್ಜತ್‌ನಗರ ಪೊಲೀಸ್ ಠಾಣೆ

ಉತ್ತರಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಐವರು ಸಾವನ್ನಪ್ಪಿದ್ದಾರೆ. ಮೃತಪಟ್ಟ ಐವರೂ ಉತ್ತರಾಖಂಡದ ರಾಮನಗರ ನಿವಾಸಿಗಳು ಎಂದು ತಿಳಿದು ಬಂದಿದೆ.

road accident in Uttara Pradesh  izzatnagar police station area bareilly  Uttara Pradesh crime news  ಉತ್ತರಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ  ಬರೇಲಿಯ ಇಜ್ಜತ್‌ನಗರ ಪೊಲೀಸ್ ಠಾಣೆ  ಉತ್ತರಪ್ರದೇಶ ಅಪರಾಧ ಸುದ್ದಿ
ದರ್ಗಾಕ್ಕೆ ತೆರಳುತ್ತಿದ್ದ ಐವರು ಸ್ಥಳದಲ್ಲೇ ಸಾವು

By

Published : Jun 21, 2022, 10:25 AM IST

Updated : Jun 21, 2022, 10:32 AM IST

ಬರೇಲಿ (ಉತ್ತರಪ್ರದೇಶ):ಕಾರು ಮತ್ತು ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿರುವ ಘಟನೆ ಲಾಲ್​ಪುರ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟ ಐವರೂ ಉತ್ತರಾಖಂಡದ ರಾಮ್ ನಗರದ ನಿವಾಸಿಗಳು ಎಂದು ಗುರುತಿಸಲಾಗಿದೆ.

ಉತ್ತರಾಖಂಡದ ರಾಮ್ ನಗರದಿಂದ ವ್ಯಾಪಾರಿಗಳು ಹರ್ದೋಯ್‌ನ ಬಿಲ್​ಗ್ರಾಮ್ ಷರೀಫ್‌ನಲ್ಲಿರುವ ದರ್ಗಾಕ್ಕೆ ಹೋಗುತ್ತಿದ್ದರು. ಎರಡು ವಾಹನಗಳಲ್ಲಿ 10 ಮಂದಿ ಪ್ರಯಾಣಿಸುತ್ತಿದ್ದರು. ಇಜ್ಜತ್‌ನಗರ ಪೊಲೀಸ್ ಠಾಣೆಯ ಲಾಲ್‌ಪುರ ಔಟ್‌ಪೋಸ್ಟ್ ಅಹ್ಲಾದ್‌ಪುರ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಪಂಕ್ಚರ್​ ಆಗಿ ಎದುರಿಗೆ ಬರುತ್ತಿದ್ದ ಟ್ಯಾಂಕರ್​ಗೆ ಡಿಕ್ಕಿ ಹೊಡೆದಿದೆ.

ಪರಿಣಾಮ ಕಾರಿನಲ್ಲಿ ಕುಳಿತಿದ್ದ ಐವರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಸುದ್ದಿ ತಿಳಿದಾಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಕೈಗೊಂಡರು. ಬಳಿಕ ಕಾರಿನಿಂದ ಹೊರ ತೆಗೆದ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು.

ಓದಿ:ತುಮಕೂರಿನಲ್ಲಿ ಕಾರು - ಕೆಎಸ್‌ಆರ್‌ಟಿಸಿ ಬಸ್ ನಡುವೆ ಭೀಕರ ಅಪಘಾತ: ಇಬ್ಬರ ಸಾವು!

ಮೃತರು ಖೇತಾಡಿ ರಾಮನಗರ ನಿವಾಸಿ ಇಬ್ರಾಹಿಂ ಮಗ ಸಗೀರ್ (35), ಭವಾನಿಗಂಜ್ ನಿವಾಸಿ ತಸ್ಬರ್ ಮಗ ಮುಝಮ್ಮಿಲ್ (36), ರಾಮನಗರ ನಿವಾಸಿ ನಮಲುಮ್ ಮಗ ಮೊ.ತಾಹಿರ್ (40), ಭವಾನಿಗಂಜ್ ನಿವಾಸಿ ಅಖ್ಲಾಕ್ ಖಾನ್ ಮಗ ಇಮ್ರಾನ್ ಖಾನ್ (38) ಮತ್ತು ರಾಮನಗರ ನಿವಾಸಿ ಉಬೈದುರ್ ರೆಹಮಾನ್ ಮಗ ಮೊ. ಫರೀದ್ (35) ಎಂದು ಗುರುತಿಸಲಾಗಿದೆ. ಈ ಘಟನೆ ಕುರಿತು ಇಜ್ಜತ್‌ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Last Updated : Jun 21, 2022, 10:32 AM IST

ABOUT THE AUTHOR

...view details