ಚಂಬಾ /ಹಿಮಾಚಲ ಪ್ರದೇಶ: ಖಾಸಗಿ ಬಸ್‌ವೊಂದು 200 ಮೀಟರ್ ಆಳದ ಕಂದಕಕ್ಕೆ ಉರುಳಿ ಬಿದ್ದ ಹಿನ್ನೆಲೆ 8 ಜನರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಿಮಾಚಲ ಪ್ರದೇಶದ ಚಂಬಾ-ಟೀಸಾ ರಸ್ತೆಯಲ್ಲಿ ನಡೆದಿದೆ.
ಕಂದಕಕ್ಕೆ ಉರುಳಿದ ಖಾಸಗಿ ಬಸ್: 8 ಮಂದಿ ಸಾವು, 11 ಜನ ಗಂಭೀರ - ಹಿಮಾಚಲ ಪ್ರದೇಶದ ಚಂಬಾ-ಟೀಸಾ ರಸ್ತೆ
ಹಿಮಾಚಲ ಪ್ರದೇಶದ ಚಂಬಾ-ಟೀಸಾ ರಸ್ತೆ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಚಂಬಾ-ಟೀಸಾ ರಸ್ತೆ ಬಳಿ ಭೀಕರ ರಸ್ತೆ ಅಪಘಾತ
ಮಾಹಿತಿ ಪ್ರಕಾರ ಬಸ್‌ನಲ್ಲಿ ಒಟ್ಟು 30 ರಿಂದ 35 ಜನರು ಪ್ರಯಾಣಿಸುತ್ತಿದ್ದರು. ಅಪಘಾತದಲ್ಲಿ ಈವರೆಗೆ 8 ಮಂದಿ ಸಾವನ್ನಪ್ಪಿದ್ದಾರೆ. 11 ಜನ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಇನ್ನು ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
Last Updated : Mar 10, 2021, 3:32 PM IST