ಬಂದಾ, ಉತ್ತರಪ್ರದೇಶ:ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅತಿವೇಗವಾಗಿ ಚಲಾಯಿಸುತ್ತಿದ್ದ ಬೊಲೆರೋ ವಾಹನವು ರಸ್ತೆ ಬದಿ ನಿಂತಿದ್ದ ಟ್ರಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಈ ವೇಳೆ ಬೊಲೆರೋದಲ್ಲಿ ಸವಾರಿ ಮಾಡುತ್ತಿದ್ದ 8 ಜನರ ಪೈಕಿ ತಾಯಿ-ಮಗ ಸೇರಿದಂತೆ 5 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಷ್ಟೇ ಅಲ್ಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಇಬ್ಬರು ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡ ಯುವಕನನ್ನು ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.
ಭೀಕರ ರಸ್ತೆ ಅಪಘಾತ:ಬಾಬೇರು ಪೊಲೀಸ್ ಠಾಣಾ ವ್ಯಾಪ್ತಿಯ ಕಾಮಸಿನ್ ರಸ್ತೆ ಪರಯ್ಯ ದೈ ಗ್ರಾಮದಲ್ಲಿ ಗುರುವಾರ ರಾತ್ರಿ 9.30 ರ ಸುಮಾರಿಗೆ ರಸ್ತೆ ಅಪಘಾತ ಸಂಭವಿಸಿದೆ. ಇಲ್ಲಿ ಕಮಾಸಿನ್ ಪೊಲೀಸ್ ಠಾಣೆ ವ್ಯಾಪ್ತಿಯ ತಿಲೌಸಾ ಗ್ರಾಮದ 8 ಜನರು ಬೊಲೆರೋದಲ್ಲಿ ಬಾಬೇರುಗೆ ಬರುತ್ತಿದ್ದರು. ಈ ವೇಳೆ ನಿಂತಿದ್ದ ಟ್ರಕ್‌ಗೆ ಹಿಂದಿನಿಂದ ಬೊಲೆರೋ ವಾಹನ ಡಿಕ್ಕಿ ಹೊಡೆದಿದೆ. ಇದನ್ನು ಕಂಡ ದಾರಿಹೋಕರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸುದ್ದಿ ತಿಳಿದ ಕೂಡಲೇ ಬಾಬೇರು ಪೊಲೀಸರು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯ ಕೈಗೊಂಡರು. ಸಾಕಷ್ಟು ಪ್ರಯತ್ನದ ನಂತರವೂ ಬೊಲೆರೋ ವಾಹನದಲ್ಲಿ ಸಿಲುಕಿಕೊಂಡವರನ್ನು ಹೊರ ತೆಗೆಯಲು ಸಾಧ್ಯವಾಗಲಿಲ್ಲ. ಬಳಿಕ ಗ್ಯಾಸ್ ಕಟರ್ ಮೂಲಕ ವಾಹನ ಕೆಲ ಭಾಗಗಳನ್ನು ಕತ್ತರಿಸಿ ಬೊಲೆರೋದಲ್ಲಿ ಸಿಲುಕಿದ್ದ ಜನರನ್ನು ಹೊರತೆಗೆಯಲಾಯಿತು. ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಾಯಗಾಗೊಂಡಿದ್ದರು. ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಲಾಯಿತು.
ವಾಹನ ಅಪಘಾತವಾದ ಸ್ಥಳದಲ್ಲಿ ಜಮಾಯಿಸಿರುವ ಜನ ಆಸ್ಪತ್ರೆಗೆ ಹಿರಿಯ ಅಧಿಕಾರಿಗಳ ಭೇಟಿ: ಜಿಲ್ಲಾಧಿಕಾರಿ ದುರ್ಗಾಶಕ್ತಿ ನಾಗ್ಪಾಲ್ ಹಾಗೂ ಎಸ್ಪಿ ಅಭಿನಂದನ್ ಅವರು ಘಟನೆಯ ವಿಷಯ ತಿಳಿದ ತಕ್ಷಣ ಆಸ್ಪತ್ರೆಗೆ ದೌಡಾಯಿಸಿದರು. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಅಪಘಾತ ನಡೆದ ಸ್ಥಳವನ್ನು ಪರಿಶೀಲಿಸಿದ್ದಾರೆ. ಘಟನೆಯ ವಿಷಯ ತಿಳಿದ ತಕ್ಷಣ ಆಯುಕ್ತ ಆರ್.ಪಿ. ಸಿಂಗ್ ಮತ್ತು ಡಿಐಜಿ ಅವರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದರು.
ಮಗನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವಾಗ ಸಂಭವಿಸಿದ ಅಪಘಾತ: ತಿಲೌಸಾ ಗ್ರಾಮದ ನಿವಾಸಿ ಕಲ್ಲು ಎಂಬ 15 ವರ್ಷದ ಬಾಲಕನಿಗೆ ವಿದ್ಯುತ್ ಸ್ಪರ್ಶದಿಂದ ಅಸ್ವಸ್ಥಗೊಂಡಿದ್ದನು. ಮಗನ ಚಿಕಿತ್ಸೆಗಾಗಿ ಬಾಲಕನ ತಾಯಿ ಬಾಬೇರು ಸಿಎಚ್‌ಸಿಗೆ ಬೊಲೆರೋ ವಾಹನದಲ್ಲಿ ಕೊಂಡೊಯ್ಯುತ್ತಿದ್ದರು. ಬಾಲಕ ಮತ್ತು ಆತನ ತಾಯಿಯೊಂದಿಗೆ ಗ್ರಾಮದ ಬೊಲೆರೋ ಚಾಲಕ ಹಾಸಿಂ ಹಾಗೂ ಗ್ರಾಮದ ನಿವಾಸಿಗಳಾದ ಕೈಫ್, ಜಾಹಿದ್, ಜಾಹಿಲ್, ಸಾಕೀರ್ ಮತ್ತು ಮುಸಾಹಿದ್ ಕೂಡ ತೆರಳಿದ್ದರು. ಆಗ ಪರಯ್ಯ ದೈ ಗ್ರಾಮದಲ್ಲಿ ಅಪಘಾತ ಸಂಭವಿಸಿದೆ.
ಗ್ಯಾಸ್ ಕಟ್ಟರ್ನಿಂದ ಬೊಲೆರೋ ವಾಹನದ ಡೋರ್ ಕಟ್ ಮಾಡುತ್ತಿರುವ ದೃಶ್ಯ ಅಪಘಾತದಲ್ಲಿ ಕಲ್ಲು ಹಾಗೂ ಆತನ ತಾಯಿ ಸೈರಾಬಾನೊ, ಕೈಫ್, ಮುಸಾಹಿದ್ ಮತ್ತು ಸಾಕಿರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೊಲೆರೋ ಚಲಾಯಿಸುತ್ತಿದ್ದ ಚಾಲಕ ಜಾಹಿದ್, ಜಾಹಿಲ್ ಮತ್ತು ಹಾಸಿಮ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಬಾಬೇರು ಸಿಎಚ್‌ಸಿಗೆ ಕರೆತರಲಾಯಿತು. ಬೆಲೋರೊ ಚಾಲಕ ಹಾಸಿಂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು. ಜಾಹಿದ್ ಮತ್ತು ಜಾಹಿಲ್ ಸ್ಥಿತಿ ಗಂಭೀರವಾದಾಗ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದಾದ ಬಳಿಕ ಜಹೀಲ್ ಕೂಡ ಜಿಲ್ಲಾಸ್ಪತ್ರೆಗೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾನೆ. ಮತ್ತೊಂದೆಡೆ, ಜಾಹಿದ್ ಸ್ಥಿತಿ ಗಂಭೀರವಾಗಿದ್ದು, ಅವರನ್ನು ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.
ಆಸ್ಪತ್ರೆಗೆ ಹಿರಿಯ ಅಧಿಕಾರಿಗಳು ಭೇಟಿ 120 ರಿಂದ 130 ಕಿ.ಮೀ ವೇಗ:ಘಟನೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಮತ್ತು ಎಸ್ಪಿ, ತಿಲೌಸಾ ಪ್ರದೇಶದ ಜನರು ಬೊಲೆರೋದಿಂದ ಬಾಬೇರು ಕಡೆಗೆ ಬರುತ್ತಿದ್ದರು. ಅವರ ಬೊಲೆರೋ 120 ರಿಂದ 130 ವೇಗದಲ್ಲಿ ಓಡುತ್ತಿತ್ತು. ಇದರಿಂದ ನಿಯಂತ್ರಣ ತಪ್ಪಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಈ ಅವಘಡದಲ್ಲಿ ಬೊಲೆರೋದಲ್ಲಿ ಸವಾರಿ ಮಾಡುತ್ತಿದ್ದ 8 ಜನರ ಪೈಕಿ 7 ಮಂದಿ ಸಾವನ್ನಪ್ಪಿದ್ದಾರೆ. ಇದೇ ವೇಳೆ ಗಾಯಗೊಂಡಿರುವ ಓರ್ವನಿಗೆ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು. ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಓದಿ:Gas cylinder truck fire: ಟ್ರಕ್‌ಗೆ ಬೆಂಕಿ ಬಿದ್ದು ಬಾಂಬ್ಗಳಂತೆ ಸ್ಫೋಟಗೊಂಡ ಸಿಲಿಂಡರ್‌ಗಳು - ವಿಡಿಯೋ